ವಾಷಿಂಗ್ಟನ್: ವಿನಾಶಕಾರಿ ಶಸ್ತ್ರಾಸ್ತ್ರಗಳ ಹರಡುವಿಕೆ ಹಾಗೂ ಉಗ್ರವಾದಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ತಡೆಯುವ ಒಪ್ಪಂದಕ್ಕೆ ಭಾರತ ಹಾಗೂ ಅಮೆರಿಕ ಬದ್ಧವಾಗಿವೆ ಎಂದು ಉಭಯ ರಾಷ್ಟ್ರಗಳು ಮತ್ತೆ ದೃಢಪಡಿಸಿವೆ.
ಅಮೆರಿಕದಲ್ಲಿ ನಡೆದ ಭಾರತ-ಅಮೆರಿಕ ಭದ್ರತೆ ಕುರಿತ 9ನೇ ಸುತ್ತಿನ ಮಾತುಕತೆಯಲ್ಲಿ ಭಾರತದ ವಿದೇಶಾಂಗ ಇಲಾಖೆ ವಕ್ತಾರ ವಿಜಯ್ ಗೋಖಲೆ ಹಾಗೂ ಅಮೆರಿಕಾದ ಶಸ್ತ್ರಾಸ್ತ್ರ ನಿಯಂತ್ರಣ ಹಾಗೂ ಅಂತಾರಾಷ್ಟ್ರೀಯ ಭದ್ರತೆಯ ರಾಜ್ಯ ಕಾರ್ಯದರ್ಶಿ ಆಂಡ್ರಿಯಾ ಥಾಪ್ಸನ್ ಈ ಬಗ್ಗೆ ಮಾತುಕತೆ ನಡೆಸಿದರು.
ಪರಮಾಣು ಪೂರೈಕೆದಾರ ರಾಷ್ಟ್ರಗಳ ಗುಂಪಿಗೆ ಭಾರತ ಸದಸ್ಯತ್ವ ಪಡೆಯಲು ಅಮೆರಿಕ ಸಂಪೂರ್ಣ ಸಹಕಾರ ನೀಡಿದೆ. ಆದರೆ ಮೊದಲಿನಿಂದಲೂ ಚೀನಾ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ.
ಇದೇ ವೇಳೆ, ಉಭಯ ರಾಷ್ಟ್ರಗಳ ಭದ್ರತೆ ಹಾಗೂ ನಾಗರಿಕ ಪರಮಾಣು ಸಹಕಾರಕ್ಕೆ ಸಮ್ಮತಿ ಸೂಚಿಸಿದವು. ಭಾರತದಲ್ಲಿ 6 ಪರಮಾಣು ಶಕ್ತಿ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಅಮೆರಿಕ ಹೇಳಿದೆ.