ETV Bharat / international

ಕೋವಿಡ್ ನಿರ್ಮೂಲನೆಗಾಗಿ ಪ್ರಪಂಚದೊಂದಿಗೆ ಕೆಲಸ ಮಾಡಲು ಭಾರತ ಸಿದ್ಧ: ಮೋದಿ ಘೋಷಣೆ - ಅಮೆರಿಕದಲ್ಲಿ ಪ್ರಧಾನಿ ಮೋದಿ

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಇಡೀ ಪ್ರಪಂಚದೊಂದಿಗೆ ಭಾರತ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮೋದಿ
ಮೋದಿ
author img

By

Published : Sep 23, 2021, 12:03 PM IST

ನವದೆಹಲಿ: ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ,​ ಕೋವಿಡ್​-19 ವರ್ಚುಯಲ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.

ವಿವಿಧ ದೇಶಗಳಿಗೆ ವ್ಯಾಕ್ಸಿನ್ ಪೂರೈಕೆ

ಭಾರತವು 95ಕ್ಕೂ ಹೆಚ್ಚು ದೇಶಗಳಿಗೆ ವ್ಯಾಕ್ಸಿನ್​ ಪೂರೈಸಿದೆ. ಆದರೂ, ಪ್ರಪಂಚದ ಹೆಚ್ಚಿನ ಜನರು ಲಸಿಕೆ ಪಡೆದಿಲ್ಲ. ಭಾರತದ ಔಷಧೋದ್ಯಮವು ಪರಿಣಾಮಕಾರಿ ಡಯಾಗ್ನೋಸ್ಟಿಕ್ ಕಿಟ್‌ಗಳು, ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು PPE ಕಿಟ್‌ಗಳನ್ನು ತಯಾರಿಸಿದೆ. ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ವೈದ್ಯಕೀಯ ಸಾಮಗ್ರಿಗಳು ಕೈಗೆಟಕುವ ದರದಲ್ಲಿ ದೊರಕುವಂತೆ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.

150 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವೈದ್ಯಕೀಯ ಸಾಮಗ್ರಿ ಪೂರೈಕೆ

ನಾವು 150 ಕ್ಕೂ ಹೆಚ್ಚು ದೇಶಗಳೊಂದಿಗೆ ಔಷಧಗಳು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಹಂಚಿಕೊಂಡಿದ್ದೇವೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಎರಡು ಲಸಿಕೆಗಳು ಹಾಗೂ ವಿಶ್ವದ ಮೊದಲ ಡಿಎನ್​ಎ ಆಧಾರಿತ ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದರು.

ಜಗತ್ತಿನೊಂದಿಗೆ ಭಾರತ

ಹಲವಾರು ಭಾರತೀಯ ಕಂಪನಿಗಳು ಸಹ ವಿವಿಧ ಲಸಿಕೆಗಳ ಪರವಾನಗಿ ಪಡೆದು ಉತ್ಪಾದನೆಯಲ್ಲಿ ತೊಡಗಿವೆ. ಕೋವಿಡ್​ ಎರಡನೇ ಅಲೆ ಎದುರಿಸುವಾಗ ನಾವೆಲ್ಲ ಒಂದೇ ಎಂದು ಕೊಂಡು ಇಡೀ ಜಗತ್ತಿನೊಂದಿಗೆ ಭಾರತ ನಿಂತಿದೆ. ಭಾರತವು ಪ್ರಸ್ತುತ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನ ನಡೆಸುತ್ತಿದೆ. ಇತ್ತೀಚೆಗೆ(ಸೆಪ್ಟೆಂಬರ್ 17), ಒಂದು ದಿನದಲ್ಲಿ ಸುಮಾರು ಎರಡೂವರೆ ಮಿಲಿಯನ್ ಜನರಿಗೆ ಲಸಿಕೆ ಹಾಕಲಾಗಿದೆ. ಆರೋಗ್ಯ ರಕ್ಷಣಾ ವ್ಯವಸ್ಥೆಯು ಇಲ್ಲಿಯವರೆಗೆ 800 ದಶಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್​​ಗಳನ್ನು ನೀಡಿದೆ ಎಂದು ಅಂಕಿ -ಅಂಶ ಸಮೇತ ವಿವರಣೆ ನೀಡಿದರು.

20 ಕೋಟಿಗೂ ಹೆಚ್ಚು ಜನರಿಗೆ ಸಂಪೂರ್ಣ ವ್ಯಾಕ್ಸಿನೇಷನ್

20 ಕೋಟಿಗಿಂತಲೂ ಹೆಚ್ಚು ಭಾರತೀಯರಿಗೆ ಸಂಪೂರ್ಣ ಲಸಿಕೆ ಹಾಕಲಾಗಿದೆ. ದೇಶದಲ್ಲಿ ಹೊಸ ಲಸಿಕೆಗಳನ್ನು ಅಭಿವೃದ್ಧಿಗೊಳಿಸಿದಂತೆ, ಈಗಿರುವ ಲಸಿಕಾ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತೇವೆ. ನಮ್ಮಲ್ಲಿ ಲಸಿಕೆ ಉತ್ಪಾದನೆ ಹೆಚ್ಚಾದಂತೆ ನಾವು, ಇತರರಿಗೂ ಲಸಿಕೆ ಪೂರೈಕೆ ಪುನಾರಂಭಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಕಚ್ಚಾ ವಸ್ತುಗಳ ಪೂರೈಕೆ ಹೆಚ್ಚಾಗಬೇಕಿದೆ ಎಂದರು. ಭಾರತ ಇದುವರೆಗೂ 80 ಕೋಟಿಗೂ ಹೆಚ್ಚು ಡೋಸ್​ಗಳನ್ನ ತನ್ನ ನಾಗರಿಕರಿಗೆ ನೀಡಿದೆ.

ಪ್ರಪಂಚದೊಂದಿಗೆ ಕೆಲಸ ಮಾಡಲು ಭಾರತ ಸಿದ್ಧ

ಸಾಂಕ್ರಾಮಿಕ ರೋಗ ಕೊನೆಗೊಳಿಸಲು ಪ್ರಪಂಚದೊಂದಿಗೆ ಕೆಲಸ ಮಾಡಲು ಭಾರತ ಸಿದ್ಧವಿದೆ ಎಂದು ಇದೇ ವೇಳೆ ಒತ್ತಿ ಹೇಳಿದರು. ಪ್ರಧಾನಿ ಮೋದಿ, ಬೈಡನ್​ ಭೇಟಿ ಮಾಡುವ ಮುನ್ನ ಕೋವಿಡ್​ ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಿ ಮಾತನಾಡಿದರು.

ಇದನ್ನೂ ಓದಿ: ಪ್ರಮುಖ ಕಂಪನಿಗಳ CEOಗಳೊಂದಿಗೆ ಪಿಎಂ ಸಂವಾದದ ಪ್ರಮುಖ ಉದ್ದೇಶಗಳೇನು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.