ETV Bharat / international

ಭಾರತ, ಚೀನಾ ಸಂಕಷ್ಟದಲ್ಲಿದ್ದು, ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇವೆ: ಟ್ರಂಪ್​ - ಡೊನಾಲ್ಡ್​ ಟ್ರಂಪ್

ಉಭಯ ರಾಷ್ಟ್ರಗಳ ಜೊತೆ ಮಾತನಾಡಿದ್ದು, ಎರಡೂ ರಾಷ್ಟ್ರಗಳ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸ್ಪಷ್ಟನೆ ನೀಡಿದ್ದಾರೆ.

donald trump
ಡೊನಾಲ್ಡ್​ ಟ್ರಂಪ್​
author img

By

Published : Jun 21, 2020, 7:25 AM IST

Updated : Jun 21, 2020, 8:22 AM IST

ವಾಷಿಂಗ್ಟನ್ ಡಿಸಿ(ಅಮೆರಿಕ): ಭಾರತ, ಚೀನಾದ ಜೊತೆ ಗ್ವಾಲ್ವಾನ್​ ಗಡಿ ಸಂಘರ್ಷದ ಬಗ್ಗೆ ಅಮೆರಿಕ ಗಮನಹರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸ್ಪಷ್ಟನೆ ನೀಡಿದ್ದಾರೆ.

ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್,​​ ಉಭಯ ರಾಷ್ಟ್ರಗಳು ಅತಿ ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಂಡಿವೆ. ಅವುಗಳಿಗೆ ಸಮಸ್ಯೆ ಪರಿಹರಿಸಿಕೊಳ್ಳಲು ಸಹಕಾರ ನೀಡುತ್ತೇವೆ ಎಂದು ಟ್ರಂಪ್​ ಸ್ಪಷ್ಟನೆ ನೀಡಿದ್ದಾರೆ.

ಡೊನಾಲ್ಡ್​ ಟ್ರಂಪ್​

ಕೆಲವು ದಿನಗಳ ಹಿಂದೆ ಭಾರತ ಹಾಗೂ ಚೀನಾದ ಸಂಘರ್ಷ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲು ನಾವು ಸಿದ್ಧ ಎಂದು ಡೊನಾಲ್ಡ್ ಟ್ರಂಪ್​ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಚೀನಾದ ಜೊತೆಗೆ ಗಾಲ್ವಾನ್​ನಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾದ 43 ಯೋಧರಿಗೆ ಸಾವು ನೋವು ಸಂಭವಿಸಿತ್ತು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.

ಬುಧವಾರವಷ್ಟೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಭಾರತ- ಚೀನಾದ ಸಂಘರ್ಷದ ಕುರಿತು ಸಂಧಾನ ಮಾಡುವ ಯಾವುದೇ ಯೋಜನೆ, ಯೋಚನೆ ಇಲ್ಲ ಎಂದು ಶ್ವೇತ ಭವನದ ಪ್ರೆಸ್​ ಸೆಕ್ರೆಟು ಕೇಲೈ ಮೆಕ್​ಎನಾನಿ ಸ್ಪಷ್ಟನೆ ನೀಡಿದ್ದರು.

ಇತ್ತ ಭಾರತ- ಚೀನಾ ಕೂಡಾ ಹಲವು ಹಂತದ ಮಾತುಕತೆಗಳನ್ನು ನಡೆಸುತ್ತಿದೆ. ಆದರೂ ಯಾವ ಮಾತುಕತೆಗಳೂ ಕೂಡಾ ನಿರೀಕ್ಷೆಯಷ್ಟು ಫಲಪ್ರದವಾಗಿಲ್ಲ.

Last Updated : Jun 21, 2020, 8:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.