ETV Bharat / international

ನನ್ನ ಆರೋಗ್ಯವು 20 ವರ್ಷ ಹಿಂದಿಗಿಂತ ಉತ್ತಮವಾಗಿದೆ : ಟ್ರಂಪ್​ - ಡೊನಾಲ್ಡ್ ಟ್ರಂಪ್​ ಕೊರೊನಾ ಪಾಸಿಟಿವ್

ನಾನು ಕಳೆದ 20 ವರ್ಷ ಹಿಂದಿಗಿಂತ ಆರೋಗ್ಯವಾಗಿದ್ದಾನೆ. ಕೋವಿಡ್‌ಗೆ ಹೆದರಬೇಡಿ, ಅದಕ್ಕೆ ನಿಮ್ಮ ಜೀವನದಲ್ಲಿ ಪ್ರಾಬಲ್ಯ ಸಾಧಿಸಲು ಬಿಡಬೇಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

I feel better than I did 20 years ago : Donald J. Trump
ಟ್ರಂಪ್
author img

By

Published : Oct 6, 2020, 2:55 AM IST

Updated : Oct 6, 2020, 5:17 AM IST

ವಾಷಿಂಗ್ಟನ್​ : ನನ್ನ ಆರೋಗ್ಯವು 20 ವರ್ಷ ಹಿಂದಿಗಿಂತ ಉತ್ತಮವಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ತಿಳಿಸಿದ್ದಾರೆ.

ವಾಷಿಂಗ್ಟನ್​ನ ವಾಲ್ಟರ್ ರೀಡ್ ಮಿಲಿಟರಿ ವೈದ್ಯಕೀಯ ಕೇಂದ್ರದಲ್ಲಿ ಟ್ರಂಪ್ ಕೋವಿಡ್​-19ಗೆ​ ಚಿಕಿತ್ಸೆ ಪಡೆಯುತ್ತಿದ್ದಾರೆ. 'ನಾನು ಇಂದು ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರದಿಂದ ಸಂಜೆ 6:30ಕ್ಕೆ ಹೊರಡುತ್ತೇನೆ. ನಾನು ಆರಾಮಾಗಿದ್ದೇನೆ, ಕೋವಿಡ್‌ಗೆ ಹೆದರಬೇಡಿ. ಅದಕ್ಕೆ ನಿಮ್ಮ ಜೀವನದಲ್ಲಿ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ನನ್ನ ಆಡಳಿತದಡಿ ಕೆಲವು ಉತ್ತಮ ಔಷಧಗಳನ್ನು ಅಭಿವೃದ್ಧಿಪಡಿಸಿದ್ದೇವೆ' ಎಂದು ಟ್ರಂಪ್​ ಟ್ವೀಟ್​ ಮಾಡಿದ್ದಾರೆ.

  • I will be leaving the great Walter Reed Medical Center today at 6:30 P.M. Feeling really good! Don’t be afraid of Covid. Don’t let it dominate your life. We have developed, under the Trump Administration, some really great drugs & knowledge. I feel better than I did 20 years ago!

    — Donald J. Trump (@realDonaldTrump) October 5, 2020 " class="align-text-top noRightClick twitterSection" data=" ">

ಟ್ರಂಪ್​ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೂ ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಲು ಅಗತ್ಯವಾದ ಎಲ್ಲ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಕಳೆದ 72 ಗಂಟೆಗಳಿಂದ ಅವರಿಗೆ ಜ್ವರ ಕಾಣಿಸಿಕೊಂಡಿಲ್ಲ. ಅವರ ರಕ್ತದೊತ್ತಡ, ಹೃದಯ ಬಡಿತ ಮತ್ತು ರಕ್ತದ ಆಮ್ಲಜನಕದ ಮಟ್ಟವು ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಳೆದ ಗುರುವಾರ ಡೊನಾಲ್ಡ್ ಟ್ರಂಪ್‌ ಮತ್ತು ಅವರ ಪತ್ನಿ ಮೆಲಾನಿಯ ಟ್ರಂಪ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಗಾಗಿ ಅವರು ಶುಕ್ರವಾರ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಗೆ ದಾಖಲಾಗಿದ್ದರು.

Last Updated : Oct 6, 2020, 5:17 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.