ಫ್ಲೋರಿಡಾ: ಇಲ್ಲಿನ ಫ್ಲೋರಿಡಾ ಪ್ಯಾನ್‌ಹ್ಯಾಂಡಲ್‌ನಲ್ಲಿ ಉದ್ಭವಿಸಿದ ಕಾಳ್ಗಿಚ್ಚಿನಿಂದ ಸುಮಾರು 500 ಜನರನ್ನು ತಮ್ಮ ಮನೆಗಳಿಂದ ಸ್ಥಳಾಂತರಿಸಲಾಗಿದೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಫ್ಲೋರಿಡಾದ ಸಾಂತಾ ರೋಸಾ ಕೌಂಟಿಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಕಾಳ್ಗಿಚ್ಚಿಗೆ ಐದು ಮೈಲುಗಳ ಜೌಗು ಬೆಂಕಿ(Five Mile Swamp fire) ಎಂದು ಹೆಸರಿಸಲಾಗಿದೆ.
ಸುಮಾರು 2,000 ಎಕರೆ ವ್ಯಾಪ್ತಿಯಲ್ಲಿ ಬೆಂಕಿ ಆವರಿಸಿಕೊಂಡು, ಅನೇಕ ಜೀವರಾಶಿಗಳು ಬಲಿಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಹೀಗಾಗಿ ಈ ಭಾಗದ ನಿವಾಸಿಗಳನ್ನು ಸ್ಥಳಾಂತರಿಸಲು ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಈ 2,000 ಎಕರೆ ಪ್ರದೇಶದಲ್ಲಿ ಇನ್ನೂ ಸುಮಾರು 20% ದಷ್ಟು ಬೆಂಕಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.