ವಾಷಿಂಗ್ಟನ್(ಯುಎಸ್): ಯುಎಸ್ ಉಪಾಧ್ಯಕ್ಷರಾಗಿ ಚುನಾಯಿತರಾದ ಕಮಲಾ ಹ್ಯಾರಿಸ್ ಅಡುಗೆ ಬಗ್ಗೆ ತಮಗಿರುವ ಅಂತರ್ಗತ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.
ಥ್ಯಾಂಕ್ಸ್ಗಿವಿಂಗ್ ಕಾರ್ಯಕ್ರಮದ ಮುನ್ನಾದಿನ ತಮ್ಮ ಕುಟುಂಬ ಸದಸ್ಯರೊಂದಿಗೆ ಹ್ಯಾರಿಸ್ ರಜಾ ದಿನವನ್ನು ಕಳೆದಿದ್ದಾರೆ. ಈ ಸಂದರ್ಭ ಅವರು ತಮ್ಮ ಕುಟುಂಬದ ನೆಚ್ಚಿನ ಪಾಕವೊಂದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕಾರ್ನ್ಬ್ರೆಡ್ ಡ್ರೆಸ್ಸಿಂಗ್ ತಿನಿಸು ಅವರ ಕುಟುಂಬದ ಹಾಲಿಡೇ ರೆಸಿಪಿ ಎಂದು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
"ಸಂಕಷ್ಟದ ಸಮಯ ಬಂದಾಗ ನಾನು ಯಾವಾಗಲೂ ಅಡುಗೆ ಕಡೆಗೆ ತಿರುಗುತ್ತೇನೆ" ಎಂದು ಹ್ಯಾರಿಸ್ ತನ್ನ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಪರಿಪೂರ್ಣ ಕಾರ್ನ್ ಬ್ರೆಡ್ ಡ್ರೆಸ್ಸಿಂಗ್ ಮಾಡುವ ವಿಧಾನವನ್ನು ಹಂತ-ಹಂತವಾಗಿ ಹಂಚಿಕೊಂಡಿದ್ದಾರೆ.
"ಈ ವರ್ಷ, ನನ್ನ ಕುಟುಂಬದ ನೆಚ್ಚಿನ ಥ್ಯಾಂಕ್ಸ್ಗಿವಿಂಗ್ ಪಾಕವಿಧಾನಗಳಲ್ಲಿ ಒಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸಿದ್ದೇನೆ. ನೀವು ಅದನ್ನು ನಿಮ್ಮ ಜೀವನದಲ್ಲಿ ಮಾಡಲು ಬಯಸುವಿರಾದರೆ ಖಂಡಿತ ಅದು ನಿಮಗೆ ಬೆಚ್ಚನೆಯ ಪ್ರೀತಿಯನ್ನು ನೀಡುತ್ತದೆ, ಅದು ನಿಮ್ಮ ಪ್ರೀತಿಪಾತ್ರರಿಂದ ಬೇರ್ಪಡುವ ಸಮಯದಲ್ಲಿ ಸಿಗುವ ಪ್ರೀತಿಯಂತೆ' ಎಂದು ಕಮಲಾ ಹ್ಯಾರಿಸ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದೇಶೀಯ ಸವಾಲುಗಳನ್ನು ನಿವಾರಿಸುವುದೇ ಯುಎಸ್ನ ಜಾಗತಿಕ ನಾಯಕತ್ವ ಪುನಃ ಸ್ಥಾಪಿಸುವ ಅಸ್ತ್ರ: ಕಮಲಾ ಹ್ಯಾರಿಸ್
ಪ್ರತೀ ವರ್ಷದ ನವೆಂಬರ್ನ ನಾಲ್ಕನೇ ಗುರುವಾರವನ್ನು ಯುಎಸ್ನಲ್ಲಿ ಥ್ಯಾಂಕ್ಸ್ಗಿವಿಂಗ್ ಕಾರ್ಯಕ್ರಮವಾಗಿ ಆಚರಿಸಲಾಗುತ್ತದೆ.