ವಾಷಿಂಗ್ಟನ್: ಜಿಮ್ಮಿ ಕಾರ್ಟರ್ ಸರ್ಕಾರದಲ್ಲಿ ಅಮೆರಿಕದ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ವಾಲ್ಟರ್ ಮೊಂಡೇಲ್ (93) ಕೊನೆಯುಸಿರೆಳಿದ್ದಾರೆ.
ಮೊಂಡೇಲ್ ಅವರ ಕುಟುಂಬದ ವಕ್ತಾರ ಕ್ಯಾಥಿ ತುನ್ಹೀಮ್ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾ. ಆದರೆ ಸಾವಿಗೆ ಕಾರಣ ತಿಳಿಸಿಲ್ಲ.
ವಾಲ್ಟರ್ ಮೊಂಡೇಲ್ ಅವರು 1977 ರಿಂದ 1981 ರವರೆಗೆ ಜಿಮ್ಮಿ ಕಾರ್ಟರ್ ಯುಸ್ ಅಧ್ಯಕ್ಷರಾಗಿದ್ದ ವೇಳೆ ಉಪಾಧ್ಯಕ್ಷರಾಗಿದ್ದರು. ನಾಗರಿಕ ಹಕ್ಕುಗಳ ಹೋರಾಟಗಾರರೂ ಆಗಿದ್ದರು.
ಇದನ್ನೂ ಓದಿ: ಕೊರೊನಾ ಹಾವಳಿ: ಭಾರತದ ಪ್ರವಾಸ ರದ್ಧುಗೊಳಿಸಿದ ಇಂಗ್ಲೆಂಡ್ ಪ್ರಧಾನಿ!
ಅಮೆರಿಕ ಅಧ್ಯಕ್ಷರೊಬ್ಬರೊಂದಿಗೆ ವೈಯಕ್ತಿಯವಾಗಿಯೂ, ಕೆಲಸದ ವಿಚಾರವಾಗಿಯೂ ಬಹಳ ಆತ್ಮೀಯರಾಗಿದ್ದ ಮೊದಲ ಉಪಾಧ್ಯಕ್ಷ ವಾಲ್ಟರ್ ಮೊಂಡೇಲ್ ಆಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.