ನ್ಯೂಯಾರ್ಕ್ : ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಅವರ ಮಲ ಅಜ್ಜಿ ಕೀನ್ಯಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಕೀನ್ಯಾ ಕುಟುಂಬದ ಸಾ ರಾ ಒಬಾಮಾ ನಿಧನರಾಗಿದ್ದಾರೆ. ಸಂಬಂಧಿಕರು ಮತ್ತು ಅಧಿಕಾರಿಗಳು ಸೋಮವಾರ ದೃಢಪಡಿಸಿದರು. ಆದರೆ, ಸಾವಿಗೆ ಕಾರಣವನ್ನು ಬಹಿರಂಗಪಡಿಸಿಲ್ಲ. ಸಾರಾ ಒಬಾಮಾ ಅವರಿಗೆ ಸುಮಾರು 99 ವರ್ಷ ವಯಸ್ಸಾಗಿತ್ತು.
ಅಮೆರಿಕದ ಮಾಜಿ ಅಧ್ಯಕ್ಷರ ಮಲ ಅಜ್ಜಿಯನ್ನು ಪ್ರೀತಿಯಿಂದ ಮಾಮಾ ಸಾರಾ ಎಂದು ಕರೆಯುತ್ತಿದ್ದರು. ಬಾಲಕಿಯರ ಮತ್ತು ಅನಾಥರಿಗೆ ಶಿಕ್ಷಣ ಉತ್ತೇಜಿಸುವಂತ ಲೋಕೋಪಕಾರಿ ಕಾರ್ಯದಲ್ಲಿ ಸಾರಾ ಅವರು ತೊಡಗಿಸಿಕೊಂಡಿದ್ದರು.
ಕೀನ್ಯಾದ ದೇಶದ ಪಶ್ಚಿಮದಲ್ಲಿರುವ 3ನೇ ಅತಿದೊಡ್ಡ ನಗರವಾದ ಕಿಸುಮುದಲ್ಲಿನ ಜರಾಮೋಗಿ ಒಗಿಂಗಾ ಒಡಿಂಗಾ ಬೋಧನಾ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ಥಳೀಯ ಕಾಲಮಾನ ಮುಂಜಾನೆ 4 ಗಂಟೆ ಸುಮಾರಿಗೆ ನಿಧನರಾದರು ಎಂದು ಅವರ ಮಗಳು ಮಾರ್ಸಾಟ್ ಒನ್ಯಾಂಗೊ ಹೇಳಿದ್ದಾರೆ.