ಅಟ್ಲಾಂಟಿಕ್ ಸಿಟಿ: ಒಂದು ಕಾಲದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಡೆತನದಲ್ಲಿದ್ದ ನ್ಯೂಜೆರ್ಸಿಯ ಅಟ್ಲಾಂಟಿಕ್ ಸಿಟಿಯ ಹೋಟೆಲ್ ಮತ್ತು ಕ್ಯಾಸಿನೊವನ್ನು ಬುಧವಾರ ಬೆಳಗ್ಗೆ ನೆಲಸಮ ಮಾಡಲಾಗಿದೆ.
ಟ್ರಂಪ್ ಪ್ಲಾಝಾ ಹೋಟೆಲ್ ಮತ್ತು ಕ್ಯಾಸಿನೊವನ್ನು 2014ರಿಂದ ಮುಚ್ಚಲಾಗಿತ್ತು. ಒಂದು ಕಾಲದಲ್ಲಿ ಬೋರ್ಡ್‌ವಾಕ್‌ನಲ್ಲಿ ಅತ್ಯಂತ ಪ್ರಮುಖವಾಗಿದ್ದ ಈ ಕಟ್ಟಡವು, ಇತ್ತೀಚಿನ ವರ್ಷಗಳಲ್ಲಿ ತುಂಬಾ ಹದಗೆಟ್ಟಿತ್ತು ಮತ್ತು ಕಟ್ಟಡದ ಒಂದೊಂದೇ ಭಾಗಗಳು ಉರುಳಲು ಪ್ರಾರಂಭಿಸಿದ್ದವು.
ಬುಧವಾರ ಬೆಳಗ್ಗೆ ಬೃಹತ್ ಕಟ್ಟಡವನ್ನು ಧ್ವಂಸ ಮಾಡಲಾಯಿತು. ಈ ಕ್ಯಾಸಿನೊ ಮತ್ತು ಹೋಟೆಲ್ ಸೆಲೆಬ್ರಿಟಿಗಳ ಹಾಟ್ ಸ್ಪಾಟ್ ಆಗಿತ್ತು ಎಂದು ಕ್ಯಾಸಿನೊದ ಮಾಜಿ ಈವೆಂಟ್ ಮ್ಯಾನೇಜರ್ ಬರ್ನಿ ಡಿಲನ್ ಹೇಳಿದ್ದಾರೆ.
ಓದಿ : ರ್ಯಾಪರ್ ಬಂಧನದ ವಿರುದ್ಧ ಪ್ರತಿಭಟನೆ : 33 ಮಂದಿಗೆ ಗಾಯ, 14 ಜನರ ಬಂಧನ
ಟ್ರಂಪ್ ಪ್ಲಾಝಾವನ್ನು 1984ರಲ್ಲಿ ಪ್ರಾರಂಭಿಸಲಾಯಿತು. ಆ ವೇಳೆ ಡೊನಾಲ್ಡ್ ಟ್ರಂಪ್ ರಿಯಲ್ ಎಸ್ಟೇಸ್ ಉದ್ಯಮಿಯಾಗಿದ್ದರು ಮತ್ತು ಆಗಷ್ಟೇ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಟ್ರಂಪ್ ಪ್ಲಾಝಾ ಒಂದು ಕಾಲದಲ್ಲಿ ಅತ್ಯಂತ ಯಶಸ್ವಿ ಕ್ಯಾಸಿನೊ ಆಗಿತ್ತು. ಇದೇ ಹೋಟೆಲ್ನ ಹಾಲ್ನಲ್ಲಿ ಮೈಕ್ ಟೈಸನ್ ಬಾಕ್ಸಿಂಗ್ ಪಂದ್ಯ ಮತ್ತು ರೋಲಿಂಗ್ ಸ್ಟೋನ್ಸ್ ಸಂಗೀತ ಕಛೇರಿಯಂತಹ ಮೆಗಾ ಈವೆಂಟ್ಗಳು ನಡೆದಿದ್ದವು.