ವಾಷಿಂಗ್ಟನ್: ಕ್ಯಾಪಿಟಲ್ ಹಿಲ್ ಮೇಲೆ ನಡೆದ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಪ್ರಥಮ ಮಹಿಳೆ, ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್, ಹಿಂಸಾಚಾರವನ್ನು ಎಂದಿಗೂ ಸಮರ್ಥಿಸಲಾಗುವುದಿಲ್ಲ ಎಂದು ಹೇಳಿದರು.
ನಾಳೆ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ಅಧಿಕಾರ ಸ್ವೀಕರಿಸಲಿದ್ದು, ವಿದಾಯ ಹೇಳುತ್ತಾ ಕೊನೆಯ ಬಾರಿಗೆ ಮಾತನಾಡಿದ ಮೆಲಾನಿಯಾ, ನೀವು ಮಾಡುವ ಎಲ್ಲಾ ಕಾರ್ಯದಲ್ಲೂ ಉತ್ಸಾಹದಿಂದಿರಿ. ಆದರೆ ಹಿಂಸೆ ಎಂದಿಗೂ ಉತ್ತರವಲ್ಲ ಮತ್ತು ಅದನ್ನು ಎಂದಿಗೂ ಸಮರ್ಥಿಸಲಾಗುವುದಿಲ್ಲ ಎಂಬುದನ್ನು ಸದಾ ನೆನಪಿಡಿ ಎಂದು ಹೇಳಿದರು.
ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳಿಂದ ಟ್ರಂಪ್ಗೆ ನಿಷೇಧ.. ಶೇ.73ರಷ್ಟು ಇಳಿಕೆ ಕಂಡ ತಪ್ಪು ಮಾಹಿತಿ ಫೋಸ್ಟ್ಗಳು!
ಇದೇ ವೇಳೆ, ಕೋವಿಡ್ ಸಾಂಕ್ರಾಮಿಕದ ವೇಳೆ ಶ್ರಮಿಸುತ್ತಿರುವ ಎಲ್ಲಾ ದಾದಿಯರು, ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಎಲ್ಲಾ ಕೊರೊನಾ ವಾರಿಯರ್ಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು ಹಾಗೂ ಮಹಾಮಾರಿಗೆ ಬಲಿಯಾದವರ ಸಾವಿಗೆ ಸಂತಾಪ ಸೂಚಿಸಿದರು.
ಜನವರಿ 6 ರಂದು ಕ್ಯಾಪಿಟಲ್ ಹಿಲ್ ಮೇಲೆ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯಲ್ಲಿ ಮಹಿಳೆ, ಪೊಲೀಸ್ ಸಿಬ್ಬಂದಿ ಸೇರಿ ಐವರು ಮೃತಪಟ್ಟಿದ್ದರು.