ಹೆಲ್ಸಿಂಕಿ: ವೈಯಕ್ತಿಕ ಯೋಗಕ್ಷೇಮ, ಸಾಮಾಜಿಕ ಬೆಂಬಲ, ವೈಯಕ್ತಿಕ ಸ್ವಾತಂತ್ರ್ಯದ ಮಾನದಂಡಗಳ ಮೇಲೆ ನಿರ್ಧರಿಸಲಾಗುವ ಅತ್ಯಂತ ಸಂತೋಷದಾಯಕ ದೇಶವಾಗಿ ಫಿನ್ಲ್ಯಾಂಡ್ ಹೊರಹೊಮ್ಮಿದೆ. ಈ ದೇಶ ಸತತವಾಗಿ ಐದನೇ ಬಾರಿಗೆ ಈ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಇನ್ನು ಈ ಪಟ್ಟಿಯಲ್ಲಿ ಅತ್ಯಂತ ಅತೃಪ್ತಿಕರ ದೇಶವಾಗಿ ಅಫ್ಘಾನಿಸ್ತಾನ ಸ್ಥಾನ ಪಡೆದರೆ, ಲೆಬನಾನ್ ನಂತರದ ಸ್ಥಾನದಲ್ಲಿದೆ.
ಶುಕ್ರವಾರ ಬಿಡುಗಡೆಯಾದ ವರ್ಲ್ಡ್ ಹ್ಯಾಪಿನೆಸ್ ಪಟ್ಟಿಯಲ್ಲಿ ಉತ್ತರ ಯುರೋಪ್ ದೇಶಗಳು ಮುನ್ನಡೆ ಸಾಧಿಸಿವೆ. ಫಿನ್ಲ್ಯಾಂಡ್ ಅತ್ಯಂತ ಸುಖಿ ದೇಶವಾಗಿದ್ದರೆ ಐಸ್ಲ್ಯಾಂಡಿಕ್, ಸ್ವಿಸ್ ಮತ್ತು ಡಚ್ ನಂತರದ ಸ್ಥಾನ ಪಡೆದುಕೊಂಡಿವೆ. ಇನ್ನು ಪಟ್ಟಿಯಲ್ಲಿ ಅಮೆರಿಕ 16ನೇ ಸ್ಥಾನದಲ್ಲಿದ್ದರೆ, ಬ್ರಿಟನ್ 15, ಫ್ರಾನ್ಸ್ 20 ನೇ ಸ್ಥಾನದಲ್ಲಿದೆ.
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಆಕ್ರಮಿಸಿಕೊಂಡ ಬಳಿಕ ದೇಶ ಆರ್ಥಿಕವಾಗಿ ನಷ್ಟ ಅನುಭವಿಸಿದ್ದಲ್ಲದೇ ವೈಯಕ್ತಿಕ ಸ್ವಾತಂತ್ರ್ಯ ಹರಣವಾಗಿದ್ದರಿಂದ ಈ ದೇಶ ಪಟ್ಟಿಯಲ್ಲಿ ಕೊನೆ ಸ್ಥಾನ ಪಡೆದಿದೆ. ಇದಲ್ಲದೇ, ಆರ್ಥಿಕ ಬಿಕ್ಕಟ್ಟಿಗೆ ಗುರಿಯಾಗಿರುವ ಲೆಬನಾನ್, ವೆನಿಜುವೆಲಾ ನಂತರ ಅತ್ಯಂತ ಅತೃಪ್ತ ದೇಶಗಳಾಗಿವೆ.
ಭಾರತದ ಸ್ಥಾನ: ಒಟ್ಟು 146 ದೇಶಗಳಿರುವ ಈ ಪಟ್ಟಿಯಲ್ಲಿ ಭಾರತ 136ನೇ ಸ್ಥಾನ ಪಡೆದಿದೆ. ಕಳೆದ ಬಾರಿಯೂ ಭಾರತ ಇದೇ ಸ್ಥಾನದಲ್ಲಿತ್ತು ಅನ್ನೋದು ಇಲ್ಲಿ ಉಲ್ಲೇಖಾರ್ಹ.
ಇದನ್ನೂ ಓದಿ: ಟ್ರ್ಯಾಕ್ಟರ್ ಓಡಿಸುತ್ತಿದ್ದ ವೇಳೆ ಚಾಲಕನಿಗೆ ಹೃದಯಾಘಾತ: ಸ್ಥಳದಲ್ಲೇ ಮೂವರ ದುರ್ಮರಣ