ETV Bharat / international

ಕೆಲವು ವಾರಗಳವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಾಡಿ: ಭಾರತಕ್ಕೆ ಅಮೆರಿಕ ಸಲಹೆ

ಮೊದಲನೆಯದಾಗಿ ಭಾರತದಲ್ಲಿ ಅಭಿವೃದ್ಧಿಪಡಿಸುವ ಲಸಿಕೆಗಳು ಮತ್ತು ಇತರ ಸರಬರಾಜುದಾರರಿಂದ ಸಂಗ್ರಹಿಸಲು ಸಾಧ್ಯವಾದ ಲಸಿಕೆಗಳ ಪೂರೈಕೆಯೊಂದಿಗೆ ಸಾಧ್ಯವಾದಷ್ಟು ಜನರಿಗೆ ಲಸಿಕೆ ಹಾಕಲು ಪ್ರಾರಂಭಿಸಬೇಕು. ಈ ನಿಟ್ಟಿನಲ್ಲಿ ಕೆಲವು ವಾರಗಳವರೆಗೆ ಭಾರತವನ್ನು ಲಾಕ್‌ಡೌನ್ ಮಾಡಿ. ಇದ್ರ ಜೊತೆಗೆ ತಾತ್ಕಾಲಿಕ ಆಸ್ಪತ್ರೆಗಳನ್ನು ತಕ್ಷಣ ನಿರ್ಮಿಸಲು ಸಶಸ್ತ್ರ ಪಡೆಗಳ ಸಹಾಯ ತೆಗೆದುಕೊಳ್ಳುವಂತೆ ಡಾ.ಫೌಸಿ ಸಲಹೆ ನೀಡಿದ್ದಾರೆ.

Fauci's advice to India
ಡಾ.ಫೌಸಿ
author img

By

Published : May 4, 2021, 11:08 AM IST

ವಾಷಿಂಗ್ಟನ್ (ಯುಎಸ್): ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಉನ್ನತ ಸಾರ್ವಜನಿಕ ಆರೋಗ್ಯ ತಜ್ಞ ಮತ್ತು ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ.ಆಂಥೋನಿ ಫೌಸಿ, ರಾಷ್ಟ್ರವ್ಯಾಪಿ ಲಾಕ್​ಡೌನ್, ಬೃಹತ್ ವ್ಯಾಕ್ಸಿನೇಷನ್ ಕಾರ್ಯಕ್ರಮ ಮತ್ತು ಹೆಚ್ಚಿನ ಸಂಖ್ಯೆಯ ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣಕ್ಕೆ ಸಲಹೆ ನೀಡಿದ್ದಾರೆ.

ಭಾರತದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ವಿಶ್ವದ ಅಗ್ರ ಸಾಂಕ್ರಾಮಿಕ ರೋಗ ತಜ್ಞರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಡಾ.ಫೌಸಿ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ 2 ಕೋಟಿ ಗಡಿ ದಾಟಿದ ಕೋವಿಡ್​ ಕೇಸ್​.. ಒಂದೇ ದಿನ 3,449 ಮಂದಿ ಬಲಿ

ಮೊದಲನೆಯದಾಗಿ ಭಾರತದಲ್ಲಿ ಅಭಿವೃದ್ಧಿಪಡಿಸುವ ಲಸಿಕೆಗಳು ಮತ್ತು ಇತರ ಸರಬರಾಜುದಾರರಿಂದ ಸಂಗ್ರಹಿಸಲು ಸಾಧ್ಯವಾದ ಲಸಿಕೆಗಳ ಪೂರೈಕೆಯೊಂದಿಗೆ ಸಾಧ್ಯವಾದಷ್ಟು ಜನರಿಗೆ ಲಸಿಕೆ ಹಾಕಲು ಪ್ರಾರಂಭಿಸಬೇಕು. ಈ ಸಂದರ್ಭದಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ತಕ್ಷಣ ನಿರ್ಮಿಸಲು ಸಶಸ್ತ್ರ ಪಡೆಗಳ ಸಹಾಯವನ್ನು ತೆಗೆದುಕೊಳ್ಳಿ ಎಂದು ಭಾರತಕ್ಕೆ ಸಲಹೆ ನೀಡಿದ್ದಾರೆ.

ಇತರ ದೇಶಗಳು, ಉದಾಹರಣೆಗೆ ಕೊರೊನಾ ತಡೆಗೆ ಚೀನಾ ಕಳೆದ ವರ್ಷ ಏನು ಮಾಡಿದೆ? ಏಕಾಏಕಿ ಕೋವಿಡ್​ಗೆ ತುತ್ತಾದ ಆಸ್ಟ್ರೇಲಿಯಾ ಏನು ಮಾಡಿತು? ನ್ಯೂಜಿಲೆಂಡ್ ಕೈಗೊಂಡ ಕ್ರಮಗಳೇನು? ಇತರ ದೇಶಗಳು ಏನು ಮಾಡಿದ್ದವು ಎಂಬುದನ್ನು ತುಲನಾತ್ಮಕವಾಗಿ ನೋಡಿದಾಗ ಸೀಮಿತ ಅವಧಿಗೆ ಸಂಪೂರ್ಣವಾಗಿ ಲಾಕ್​ಡೌನ್​ ಮಾಡುವುದು ಬಹುಮುಖ್ಯ ಅನ್ನೋದು ಫೌಸಿ ಅವರ ಅಭಿಪ್ರಾಯ.

ಇದನ್ನೂ ಓದಿ: ಕುಂಭಮೇಳದಿಂದ ಮಧ್ಯಪ್ರದೇಶಕ್ಕೆ ಹಿಂದಿರುಗಿದ ಶೇ.99 ರಷ್ಟು ಮಂದಿಗೆ ಕೊರೊನಾ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.