ನ್ಯೂಯಾರ್ಕ್: ಅಂದಾಜು 106 ದೇಶಗಳ 500 ಮಿಲಿಯನ್‌ಗಿಂತಲೂ ಹೆಚ್ಚು ಫೇಸ್‌ಬುಕ್ ಬಳಕೆದಾರರ ವಿವರಗಳು ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಸೋರಿಕೆಯಾಗಿದ್ದು, ಹ್ಯಾಕರ್ಸ್ ಕೈಗೆ ಸಿಗುವ ಆತಂಕ ಎದುರಾಗಿದೆ. ಈ ಮಾಹಿತಿ ಹಳೆಯದು ಎನ್ನಲಾಗಿದೆ. ಆದರೆ, ಫೇಸ್‌ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳು ಬಳಕೆದಾರರಿಂದ ಪಡೆದುಕೊಳ್ಳುತ್ತಿರುವ ಮಾಹಿತಿ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ತಲೆದೋರಿದೆ.
‘ಬ್ಯುಸಿನೆಸ್ ಇನ್‌ಸೈಡರ್’ ವರದಿ ಪ್ರಕಾರ, ಸೋರಿಕೆಯಾಗಿರುವ ಕೆಲವು ದತ್ತಾಂಶಗಳು ಈಗಲೂ ಪ್ರಸ್ತುತವೆಂದು ಹೇಳಲಾಗಿದೆ. ಆದರೆ ಇದನ್ನು ದೃಢೀಕರಿಸುವುದು ಸಾಧ್ಯವಾಗಿಲ್ಲ. ಸೋರಿಕೆಯಾದ ಹಲವು ದೂರವಾಣಿ ಸಂಖ್ಯೆಗಳು, ಲೊಕೇಶನ್, ಫೇಸ್‌ಬುಕ್ ಖಾತೆ ಹೊಂದಿರುವವರು ಈಗಲೂ ಬಳಸುತ್ತಿರುವುದಾಗಿದೆ. ಆದರೆ, ಈ ವರದಿ ಹಳೆಯದ್ದು ಎಂದು ಫೇಸ್‌ಬುಕ್ ಪ್ರತಿಕ್ರಿಯಿಸಿದೆ.
ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ ಸೇರಿದಂತೆ 500 ಮಿಲಿಯನ್‌ಗಿಂತಲೂ ಹೆಚ್ಚು ಫೇಸ್‌ಬುಕ್ ಬಳಕೆದಾರರ ವಿವರವನ್ನು 2019ರಲ್ಲಿ ಆನ್‌ಲೈನ್ ವೇದಿಕೆಯಲ್ಲಿ ಸೋರಿಕೆ ಮಾಡಲಾಗಿತ್ತು ಎಂದು ಸೈಬರ್ ಕ್ರೈಂ ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ಜಾಗತಿಕ ಲಿಂಗ ಸಮಾನತೆಯಲ್ಲಿ ಈ ದೇಶಗಳಿಗಿಂತಲೂ ಹಿಂದಿದೆಯೇ ಭಾರತ?
-
"This is old data that was previously reported in 2019. We found and fixed this issue in August 2019," says a Facebook spokesperson on the alleged leak of phone numbers of 53 crores Facebook users including Indians pic.twitter.com/yKcBL945Ad
— ANI (@ANI) April 4, 2021 " class="align-text-top noRightClick twitterSection" data="
">"This is old data that was previously reported in 2019. We found and fixed this issue in August 2019," says a Facebook spokesperson on the alleged leak of phone numbers of 53 crores Facebook users including Indians pic.twitter.com/yKcBL945Ad
— ANI (@ANI) April 4, 2021"This is old data that was previously reported in 2019. We found and fixed this issue in August 2019," says a Facebook spokesperson on the alleged leak of phone numbers of 53 crores Facebook users including Indians pic.twitter.com/yKcBL945Ad
— ANI (@ANI) April 4, 2021
ಇದು ಹಳೆಯ ದತ್ತಾಂಶವಾಗಿದ್ದು, 2019ರಲ್ಲಿಯೂ ಈ ಬಗ್ಗೆ ವರದಿಯಾಗಿತ್ತು. 2019ರ ಆಗಸ್ಟ್‌ನಲ್ಲಿ ಇದು ನಮ್ಮ ಗಮನಕ್ಕೆ ಬಂದಿದೆ. ಆಗಲೇ ಸಮಸ್ಯೆಯನ್ನು ಸರಿಪಡಿಸಿದ್ದೇವೆ ಎಂದು ಫೇಸ್‌ಬುಕ್ ವಕ್ತಾರರು ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಸೋರಿಕೆಯಾಗಿರುವ ವಿವರಗಳಲ್ಲಿ ಹೆಸರು, ಇ-ಮೇಲ್ ವಿಳಾಸ, ದೂರವಾಣಿ ಸಂಖ್ಯೆ, ಜನ್ಮ ದಿನಾಂಕಗಳು ಸೇರಿವೆ ಎನ್ನಲಾಗಿದೆ.