ವಾಷಿಂಗ್ಟನ್(ಅಮೆರಿಕ): ಮತದಾರರಿಗೆ ಆರ್ಥಿಕ ಸಮಸ್ಯೆಗಳು ಮತ್ತು ಜನಾಂಗೀಯ ಅಸಮಾನತೆಯು ಅತ್ಯಂತ ಪ್ರಮುಖವಾದ ವಿಷಯಗಳಾಗಿದ್ದರೆ, ಕೋವಿಡ್ -19 ಸಾಂಕ್ರಾಮಿಕ ರೋಗವು ಮೂರನೇಯ ಸ್ಥಾನದಲ್ಲಿದೆ ಎಂದು ಯುಎಸ್ ಅಧ್ಯಕ್ಷೀಯ ಚುನಾವಣೆಯ ಕುರಿತು ನಡಡೆಸಿದ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಪ್ರತಿಕ್ರಿಯಿಸಿದವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಮುಖ್ಯವಾಗಿ ಆರ್ಥಿಕ ಪರಿಸ್ಥಿತಿಯ ಮೇಲೆ ಕೇಂದ್ರೀಕರಿಸುತ್ತಾರೆ, ಆದರೆ ಐದನೇ ಒಂದು ಭಾಗವು ಜನಾಂಗೀಯ ಅಸಮಾನತೆಯನ್ನು ಅಧ್ಯಕ್ಷೀಯ ಚುನಾವಣೆಯ ಮುಖ್ಯ ವಿಷಯವೆಂದು ಪರಿಗಣಿಸುತ್ತದೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಸಮೀಕ್ಷೆಯ ಪ್ರಕಾರ, ಕೋವಿಡ್-19 ಸಾಂಕ್ರಾಮಿಕವು ಮತದಾರರ ಕೊನೆಯ ಆದ್ಯತೆಯ ವಿಷಯವಾಗಿದ್ದು, ಯುಎಸ್ನ ಆರು ನಾಗರಿಕರಲ್ಲಿ ಒಬ್ಬರು ಮಾತ್ರ ಈ ವಿಷಯವನ್ನು ಪ್ರಮುಖ ಎಂದು ಪರಿಗಣಿಸಿದ್ದಾರೆ.
ಯುಎಸ್ನಲ್ಲಿ 9,365,360ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳ ದೃಢಪಟ್ಟಿದ್ದು, ವೈರಸ್ನಿಂದ 232,484 ಜನ ಮೃತಪಟ್ಟಿದ್ದಾರೆ.
ಆರೋಗ್ಯ ರಕ್ಷಣೆಯ ಜೊತೆಗೆ ಹನ್ನೊಂದು ಪ್ರತಿಶತದಷ್ಟು ಜನರು ಅಪರಾಧ ಮತ್ತು ಸುರಕ್ಷತೆಯನ್ನು ಪ್ರಮುಖ ವಿಷಯವಾಗಿ ಪರಿಗಣಿಸಿದ್ದಾರೆ. ಸಿಎನ್‌ಎನ್ ನಡೆಸಿದ ಸಮೀಕ್ಷೆಯ ಪ್ರಕಾರ, ಒಟ್ಟು 51 ಪ್ರತಿಶತದಷ್ಟು ಮತದಾರರು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ದೇಶದ ಪ್ರಯತ್ನಗಳನ್ನು ಋಣಾತ್ಮಕವಾಗಿ ನಿರ್ಣಯಿಸುತ್ತಿದ್ದಾರೆ. ಆದರೆ 48 ಪ್ರತಿಶತದಷ್ಟು ಜನ ಈ ಹೋರಾಟ ಧನಾತ್ಮಕವಾಗಿದೆ ಎಂದು ಹಂಚಿಕೊಂಡಿದ್ದಾರೆ.
ಶೇಕಡಾ 52ರಷ್ಟು ಜನರಿಗೆ, ಆರ್ಥಿಕತೆಯನ್ನು ರಕ್ಷಿಸುವುದಕ್ಕಿಂತ ವೈರಸ್ ಹರಡುವುದನ್ನು ನಿಲ್ಲಿಸುವುದೇ ಹೆಚ್ಚು ಮುಖ್ಯ ವಿಷಯವಾಗಿದೆ.
ಒಟ್ಟು 46 ಪ್ರತಿಶತದಷ್ಟು ಜನರು ತಮ್ಮ ಮತಗಳನ್ನು ನಿಖರವಾಗಿ ಎಣಿಸಲಾಗುವುದು ಎಂಬ ವಿಶ್ವಾಸದಲ್ಲಿದ್ದರೆ, 12 ಪ್ರತಿಶತದಷ್ಟು ಜನರು ಮಾತ್ರ ಮತದಾನದ ಎಣಿಕೆಯ ನ್ಯಾಯದ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ವರ್ಷ ಸುಮಾರು 239 ಮಿಲಿಯನ್ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.