ಬ್ರೆಸಿಲಿಯಾ(ಬ್ರೆಜಿಲ್): ಬ್ರೆಜಿಲ್ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ಸುಮಾರು 130 ಮಂದಿ ಸಾವನ್ನಪ್ಪಿದ್ದಾರೆ. ಪೆಟ್ರೋಪೊಲಿಸ್ ನಗರ ವರುಣಾರ್ಭಟಕ್ಕೆ ತತ್ತರಿಸಿದ್ದು, ಪ್ರವಾಹ ಮತ್ತು ಭೂಕುಸಿತಕ್ಕೆ 117 ಸಾವನ್ನಪ್ಪಿದ್ದಾರೆಂದು ನಿನ್ನೆ ವರದಿಯಾಗಿತ್ತು.
ಸಾವಿನ ಸಂಖ್ಯೆ ಈಗ 130ಕ್ಕೆ ಏರಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ಫೆಬ್ರವರಿ 17 ಗುರುವಾರ ಮಧ್ಯಾಹ್ನ ಮಳೆ ತೀವ್ರಗೊಂಡಿದೆ. ಪೆಟ್ರೊಪೊಲಿಸ್ ನಗರವೊಂದರಲ್ಲೇ 6 ಸೆಂಟಿಮೀಟರ್ ಮಳೆ ಸುರಿದಿದ್ದು, ಇದು ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕೇವಲ 42 ಸೆಕೆಂಡ್ನಲ್ಲಿ 1 ಕೋಟಿ 75 ಲಕ್ಷ ಸಂಪಾದಿಸಿದ ಯೂಟ್ಯೂಬರ್
ನಾಗರಿಕ ರಕ್ಷಣಾ ಸೇವೆಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, 200ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆಂದು ಅಂದಾಜಿಸಲಾಗಿದೆ. ಮಂಗಳವಾರದಂದು ಸುರಿದ ಭಾರಿ ಮಳೆಯಿಂದ ನದಿಗಳು ಉಕ್ಕಿ ಹರಿಯಲು ಆರಂಭಿಸಿದವು.
ಗುರುವಾರದಿಂದ ಪ್ರವಾಹ ಆರಂಭವಾಗಿದ್ದು, ಪ್ರವಾಹದ ಅಬ್ಬರಕ್ಕೆ ಭೂಕುಸಿತ ಆಗಿದ್ದು, ಅನೇಕ ಪ್ರಾಣಹಾನಿ ಸೇರಿದಂತೆ ಆಸ್ತಿ ಪಾಸ್ತಿ ಹಾನಿಗೆ ಕಾರಣವಾಯಿತು. ತೀವ್ರ ಪರಿಣಾಮ ಎದುರಿಸುತ್ತಿರುವ ಪ್ರದೇಶಗಳ ಜನರು ಸದ್ಯ ತಾತ್ಕಾಲಿಕ ವಸತಿ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.