ETV Bharat / international

ಜ.20ರಂದು ಬೈಡನ್ ಪದಗ್ರಹಣ.. ಭದ್ರತೆ ಹೆಚ್ಚಿಸಲು ಪತ್ರ ಬರೆದ ಮೇಯರ್ - ಜೋ ಬೈಡನ್ ಪದಗ್ರಹಣ ವೇಳೆ ಭದ್ರತೆ ಹೆಚ್ಚಿಸಿ

ಜನವರಿ 20 ರಂದು ಜೋ ಬೈಡನ್ ಅಮೆರಿಕದ 46 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಸರ್ಕಾರದ ಅಧಿಕಾರಿಗೆ ಕೊಲಂಬಿಯಾ ಮೇಯರ್ ಮನವಿ ಮಾಡಿದ್ದಾರೆ.

author img

By

Published : Jan 11, 2021, 5:17 PM IST

ವಾಷಿಂಗ್ಟನ್: ಕ್ಯಾಪಿಟಲ್​​​​​​​ ಮೇಲೆ ದಾಳಿ ನಡೆದ ಹಿನ್ನೆಲೆ, ಜೋ ಬೈಡನ್​​​ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡಬೇಕೆಂದು ಆಂತರಿಕ ಸುರಕ್ಷತಾ ಅಧಿಕಾರಿ ಚಾಡ್ ವುಲ್ಫ್ ಗೆ ಕೊಲಂಬಿಯಾ ಮೇಯರ್ ​​​​​​​​​​​​​ಮುರಿಯಲ್ ಮನವಿ ಮಾಡಿದ್ದಾರೆ.

ಜನವರಿ 20 ರಂದು 59 ನೇ ಅಧ್ಯಕ್ಷೀಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜೋ ಬೈಡನ್, ಅಮೆರಿಕದ 46 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಗಾಗಿ, ಕ್ಯಾಪಿಟಲ್​​​​​ನಲ್ಲಿ ಅನುಭವಿಸಿದ ಅವ್ಯವಸ್ಥೆ, ಗದ್ದಲ, ಹಿಂಸಾಚಾರ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಿ ಎಂದು ಅಮೆರಿಕದ ಆಂತರಿಕ ಸುರಕ್ಷತಾ ಅಧಿಕಾರಿ ಚಾಡ್ ವುಲ್ಫ್ ಗೆ ಮುರಿಯಲ್ ಮನವಿ ಮಾಡಿದ್ದಾರೆ.

ಅಲ್ಲದೆ, ಈ ಅವಧಿಯಲ್ಲಿ ಯಾವುದೇ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಅವಕಾಶ ಕೊಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಕಳೆದ ಬುಧವಾರ ಬೈಡನ್ ಅವರ ಗೆಲುವನ್ನು ದೃಢೀಕರಿಸುವ ವೇಳೆ, ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಮೇಲೆ ದಾಳಿ ನಡೆಸಿದರು. ಘಟನೆಯಲ್ಲಿ ಓರ್ವ ಪೊಲೀಸ್ ಸೇರಿ ಐವರು ಮೃತಪಟ್ಟಿದ್ದರು. ಅಂಥ ದುರ್ಘಟನೆ ಮರುಕಳಿಸದಿರಲಿ ಎಂದು ಮೇಯರ್​ ಅಧಿಕಾರಿಗೆ ಪತ್ರ ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.