ವಾಷಿಂಗ್ಟನ್: 2020 ರ ಸಾರ್ವತ್ರಿಕ ಚುನಾವಣೆಯ ವೇಳೆ ಆಡಳಿತದ ಮೇಲೆ ಪ್ರಭಾವ ಬೀರಿದ ಆರೋಪಕ್ಕೆ ಸಂಬಂಧಿಸಿದಂತೆ ಜಾರ್ಜಿಯಾದ ಫುಲ್ಟನ್ನಲ್ಲಿ ನಡೆದ ಅಪರಾಧಕ್ಕೆ ಟ್ರಂಪ್ ಮೇಲಿನ ತನಿಖೆಯನ್ನು ಆರಂಭಿಸಲಾಗಿದೆ.
ರಾಜ್ಯ ಕಾರ್ಯದರ್ಶಿ ಬ್ರಾಡ್ ರಾಫೆನ್ಸ್‌ಪೆರ್ಗರ್ ಸೇರಿದಂತೆ ಹಲವಾರು ಜಾರ್ಜಿಯಾ ರಾಜ್ಯ ಚುನಾವಣಾ ಅಧಿಕಾರಿಗಳು ಈ ಆರೋಪದಲ್ಲಿ ಸಿಲುಕಿ ಬೀಳುವಂತಾಗಿದೆ. ಈ ಸಂಬಂಧ ಇವರಿಗೆ ಈ ಪತ್ರ ಕಳುಹಿಸಲಾಗಿದೆ. ಫುಲ್ಟನ್ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿ ಫಾನಿ ವಿಲ್ಲೀಸ್ ಅವರು ಕಳೆದ ತಿಂಗಳು ಟ್ರಂಪ್‌ರ ದೂರವಾಣಿ ಕರೆಗೆ ಸಂಬಂಧಿಸಿದ ದಾಖಲೆಗಳನ್ನು ಸಂರಕ್ಷಿಸುವಂತೆ ವಿನಂತಿಸಿಕೊಂಡಿದ್ದರಂತೆ ಎಂದು ತಿಳಿದು ಬಂದಿದೆ.
ಪತ್ರದಲ್ಲಿ ಟ್ರಂಪ್ ಹೆಸರಿಲ್ಲದಿದ್ದರೂ ಕೂಡ ತನಿಖೆಯು ರಾಫೆನ್ಸ್‌ಪೆರ್ಗರ್ ಅವರೊಂದಿಗಿನ ಅವರ ಫೋನ್ ಕರೆಗೆ ಸಂಬಂಧಿಸಿದೆ ಎಂದು ವಿಲ್ಲೀಸ್ ಕಚೇರಿ ದೃಢಪಡಿಸಿದೆ. ಇನ್ನು ಈ ಕ್ರಿಮಿನಲ್ ತನಿಖೆಯು ಮಾಜಿ ಅಧ್ಯಕ್ಷರ ಮೇಲೆ ಗಮನಾರ್ಹವಾದ ಕಾನೂನು ಒತ್ತಡಗಳನ್ನ ಸೃಷ್ಟಿಸುತ್ತದೆ ಎನ್ನಲಾಗಿದೆ. ಇದರಲ್ಲಿ ಸೆನೆಟ್ ದೋಷಾರೋಪಣೆ ವಿಚಾರಣೆಯೂ ಸೇರಿದೆ. ಯುಎಸ್ ಕ್ಯಾಪಿಟಲ್‌ನಲ್ಲಿ ನಡೆದ ಮಾರಣಾಂತಿಕ ದಂಗೆಯನ್ನು ಪ್ರಚೋದಿಸಿದ್ದಕ್ಕಾಗಿ ಹೌಸ್ ಡೆಮೋಕ್ರಾಟ್‌ಗಳು ಟ್ರಂಪ್ ಶಿಕ್ಷಿಸಲು ಆಗ್ರಹ ಮಾಡಿದ್ದಾರೆ.
ಬೈಡನ್ ಗೆಲ್ಲಲು ಸಹಾಯ ಮಾಡುತ್ತಿದ್ದ ಜಾರ್ಜಿಯಾದ ಸ್ಟೇಟ್ ಸೆಕ್ರಟರಿ ಬ್ರಾಡ್ ರಾಫೆನ್ಸ್ಪೆರ್ಗರ್ಗೆ ಟ್ರಂಪ್ ಬೆದರಿಕೆ ಹಾಕಿ, ಕರೆ ಮಾಡಿದ್ದರು. ಈ ಆಡಿಯೋ ಬಿಡುಗಡೆಯಾಗಿದ್ದು, ಟ್ರಂಪ್ ಅಧಿಕಾರದ ದಾಹವನ್ನು ಹೊರಗೆಳೆದಿದೆ. ಜಾರ್ಜಿಯಾದಲ್ಲಿ ಬೈಡನ್ ಗೆಲುವನ್ನು ದುರ್ಬಲಗೊಳಿಸಲು ತನ್ನನ್ನು ಗೆಲ್ಲುವಂತೆ ಮಾಡಬೇಕು. ಇದಕ್ಕೆ ಬೇಕಾದ ಮತಗಳನ್ನು ಸಂಗ್ರಹಿಡಬೇಕೆಂದು ಟ್ರಂಪ್ ಬೆದರಿಕೆ ಹಾಕಿದ್ದರು. ಈ ಸಂಬಂಧ ಅಮೆರಿಕಾದ ವಾಷಿಂಗ್ಟನ್ ಪೋಸ್ಟ್ ಈ ಕರೆಯನ್ನು ಬಹಿರಂಗಗೊಳಿಸಿತ್ತು.
ಟ್ರಂಪ್ ನಡೆಯಿಂದ ಈಗ ರಾಫೆನ್ಸ್‌ಪರ್ಗರ್ ದೊಡ್ಡ ಸಮಸ್ಯೆಗೆ ಸಿಲುಕುವಂತಾಗಿದೆ.