ETV Bharat / international

ಕ್ಯಾಪಿಟಲ್ ಗಲಭೆಗೆ ಸಹಕರಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ; ಸ್ಪೀಕರ್​​ - ಸ್ಪೀಕರ್ ನ್ಯಾನ್ಸಿ ಫೆಲೋಸಿ

ಅಮೆರಿಕ ಕ್ಯಾಪಿಟಲ್ ಬಿಲ್ಡಿಂಗ್ ಮೇಲಿನ ದಾಳಿಗೆ ತೀವ್ರ ಖಂಡನೆ ವ್ಯಕ್ತವಾಗ್ತಿದೆ. ಘಟನೆಯ ಹಿಂದೆ ಕೆಲ ಅಧಿಕಾರಿಗಳು, ಜನಪ್ರತಿನಿಧಿಗಳ ಕೈವಾಡವಿದೆ ಎಂದು ಶಂಕಿಸಲಾಗಿದೆ. ಇದೀಗ ಈ ಕುರಿತು ಘಟನೆಯಲ್ಲಿ ಭಾಗಿಯಾಗಿರುವ ಜನಪ್ರತಿನಿಧಿಗಳು ಕ್ರಿಮಿನಲ್ ಆರೋಪ ಎದುರಿಸಬೇಕಾಗುತ್ತದೆ ಎಂದು ಸ್ಪೀಕರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

Pelosi
ರೆಪ್ರೆಸೆಂಟೇಟಿವ್​​ ಸ್ಪೀಕರ್ ನ್ಯಾನ್ಸಿ ಫೆಲೋಸಿ
author img

By

Published : Jan 16, 2021, 8:07 PM IST

ವಾಷಿಂಗ್ಟನ್ (ಅಮೆರಿಕ): ಜನವರಿ 6ರಂದು ಅಮೆರಿಕದಲ್ಲಿ ನಡೆದಿದ್ದ ಹಿಂಸಾಚಾರವು ಇಡೀ ಅಮೆರಿಕ ತಲೆತಗ್ಗಿಸುವಂತೆ ಮಾಡಿತ್ತು. ಘಟನೆಗೆ ಹಲವು ದೇಶಗಳ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದರು.

ಸದ್ಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್​ ಸರ್ಕಾರ ಈ ಕೃತ್ಯದಲ್ಲಿ ಭಾಗಿಯಾಗಿದ್ದವರ ಪತ್ತೆಗೆ ಮುಂದಾಗಿದೆ. ಈ ಕುರಿತು ಯುಎಸ್​​​​ ಹೌಸ್ ಆಫ್​​​ ರೆಪ್ರೆಸೆಂಟೇಟಿವ್​​ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಾತನಾಡಿದ್ದು, ಈ ಘಟನೆಯಲ್ಲಿ ಸರ್ಕಾರದ ಯಾವುದೇ ಅಧಿಕಾರಿ ಅಥವಾ ಪ್ರತಿನಿಧಿ ಭಾಗಿಯಾಗಿರುವುದು ಸಾಬೀತಾದರೆ ಕಾನೂನು ರೀತಿಯ ಕ್ರಿಮಿನಲ್​ ಆರೋಪ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ನಾವು ಒಬ್ಬರನೊಬ್ಬರು ನಂಬಬೇಕು, ನಮ್ಮನ್ನು ಇಲ್ಲಿಗೆ ಕಳುಹಿಸಿದ ಜನರನ್ನು ಗೌರವಿಸಬೇಕು, ಸತ್ಯವಿರಬೇಕು ಎಂದಿದ್ದಾರೆ. ಘಟನೆ ಸಂಭವಿಸುವುದಕ್ಕೂ ಎರಡು ದಿನ ಮೊದಲು ಡೆಮಾಕ್ರಟಿಕ್ ಪಕ್ಷದ ಕೆಲ ನಾಯಕರು ರಾಜ್ಯ ಪೊಲೀಸರಿಗೆ ಪತ್ರ ಬರೆದು, ರಿಪಬ್ಲಿಕನ್ ಪಕ್ಷದ ಕೆಲ ನಾಯಕರ ಬೆಂಬಲ ಪಡೆದ ಕೆಲವರು ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದು ಅನುಮಾನಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದರು ಎಂದು ದಿ ಹಿಲ್​​​​ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕ್ಯಾಪಿಟಲ್ ಮೇಲೆ ದಾಳಿ ಮಾಡಿದ ಗುಂಪಿನ ಸದಸ್ಯರು ಕ್ಯಾಪಿಟಲ್ ಕಾಂಪ್ಲೆಕ್ಸ್​ನ ವಿನ್ಯಾಸದ ಬಗ್ಗೆ ಯಾವುದೇ ಜ್ಞಾನ ಹೊಂದಿಲ್ಲ ಎಂಬುದು ಅವರ ನಡವಳಿಕೆಯಿಂದಲೇ ತಿಳಿಯುತ್ತಿದೆ. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಜನವರಿ 6ರ ಘಟನೆಗಳನ್ನು ಗಮನಿಸಿದರೆ, ಕ್ಯಾಪಿಟಲ್ ಕಾಂಪ್ಲೆಕ್ಸ್ ಒಳಗೆ ಈ ಗುಂಪುಗಳ ನಡುವಿನ ಸಂಬಂಧಗಳು ಮತ್ತು ಕ್ಯಾಪಿಟಲ್ ಮೇಲಿನ ದಾಳಿಯ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಅಮೆರಿಕದ ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಪ್ರಕರಣ; ಜೋ ಬೈಡನ್ ಕಾರ್ಯಕ್ರಮ ರದ್ದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.