ETV Bharat / international

1993ರ ಮುಂಬೈ ಸ್ಫೋಟದ ಅಪರಾಧಿಗೆ ಪಾಕ್‌ 5 ಸ್ಟಾರ್‌ ಆತಿಥ್ಯ; ವಿಶ್ವಸಂಸ್ಥೆಯಲ್ಲಿ ಭಾರತ ಸ್ಪಷ್ಟನೆ

ವಿಶ್ವಸಂಸ್ಥೆ ನಿರ್ಬಂಧಿಸಿರುವ ಸಂಘಟನೆಗಳು ಭಯೋತ್ಪಾದನೆಗೆ ಹಣಕಾಸು ನೀಡುತ್ತವೆ. ಇವುಗಳ ಪ್ರವೇಶವನ್ನು ತಡೆಗಟ್ಟುವಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಪ್ರಯತ್ನಗಳು ಪ್ರಮುಖವಾಗಿವೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಹೇಳಿದೆ..

Crime syndicate responsible for 1993 Mumbai blasts enjoying 5-star hospitality in Pakistan: Indian envoy at UN
1993ರ ಮುಂಬೈ ಸ್ಫೋಟದ ಅಪರಾಧಿಗೆ ಪಾಕ್‌ 5 ಸ್ಟಾರ್‌ ಆತಿಥ್ಯ; ಸ್ಫೋಟಕ್ಕೆ ಕ್ರೈಮ್‌ ಸಿಂಡಿಕೇಟ್‌ ಕಾರಣ ಎಂದ ಭಾರತ
author img

By

Published : Jan 19, 2022, 4:13 PM IST

ನ್ಯೂಯಾರ್ಕ್ : 1993ರ ಮುಂಬೈ ಬಾಂಬ್‌ ಸ್ಫೋಟದ ಅಪರಾಧಿಗೆ ಪಾಕಿಸ್ತಾನ ಫೈವ್‌ ಸ್ಟಾರ್‌ ಆತಿಥ್ಯ ನೀಡಿದೆ. ಹೀಗಾಗಿ, ಸ್ಫೋಟಕ್ಕೆ ಕ್ರೈಮ್‌ ಸಿಂಡಿಕೇಟ್‌ ಕಾರಣ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಸ್ಪಷ್ಪಡಿಸಿದೆ. ಆ ಮೂಲಕ ದಾವೂದ್‌ ಇಬ್ರಾಹಿಂ ಪಾಕ್‌ನಲ್ಲೇ ಇದ್ದಾರೆ ಎಂಬುದನ್ನು ಉಲ್ಲೇಖಿಸಿದೆ.

ಗ್ಲೋಬಲ್ ಕೌಂಟರ್ ಟೆರರಿಸಂ ಕೌನ್ಸಿಲ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಮ್ಮೇಳನ-2022ರ ಸಭೆಯಲ್ಲಿ ನಿನ್ನೆ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ, ಭಯೋತ್ಪಾದನೆ ಮತ್ತು ಅಂತಾರಾಷ್ಟ್ರೀಯ ಸಂಘಟಿತ ಅಪರಾಧಗಳ ನಡುವಿನ ಸಂಪರ್ಕವನ್ನು ಸಂಪೂರ್ಣವಾಗಿ ಗುರುತಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

2022ರ ಯುಎನ್‌ಎಸ್‌ಸಿ ಭಯೋತ್ಪಾದನಾ ನಿಗ್ರಹ ಸಮಿತಿಯ ಅಧ್ಯಕ್ಷರೂ ಆಗಿರುವ ತಿರುಮೂರ್ತಿ, 1,267 ಅಲ್-ಖೈದಾ ನಿರ್ಬಂಧಗಳ ಸಮಿತಿ ಸೇರಿದಂತೆ ವಿಶ್ವಸಂಸ್ಥೆಯ ನಿರ್ಬಂಧದ ಸಂಘಟನೆಗಳು ಭಯೋತ್ಪಾದನೆಗೆ ಹಣಕಾಸು ನೀಡುತ್ತವೆ. ಪ್ರಯಾಣಕ್ಕೆ ವ್ಯವಸ್ಥೆ ಮಾಡುವ ಇವುಗಳ ಪ್ರವೇಶವನ್ನು ತಡೆಗಟ್ಟುವಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಯತ್ನಗಳು ಪ್ರಮುಖವಾಗಿವೆ ಎಂದಿದ್ದಾರೆ.

ಪಾಕ್‌ಗೆ ಪರೋಕ್ಷ ಟಾಂಗ್‌..

1993ರ ಮುಂಬೈ ಬಾಂಬ್ ಸ್ಫೋಟಕ್ಕೆ ಕಾರಣರಾದ ಕ್ರೈಂ ಸಿಂಡಿಕೇಟ್ ಅಪರಾಧಿಗೆ 5-ಸ್ಟಾರ್ ಆತಿಥ್ಯ ನೀಡಿರುವುದನ್ನು ನೋಡಿದ್ದೇವೆ ಎನ್ನುವ ಮೂಲಕ ಪಾಕಿಸ್ತಾನದಲ್ಲಿ ದಾವೊದ್‌ ಇಬ್ರಾಹಿಂ ತಲೆಮರೆಸಿಕೊಂಡಿದ್ದಾನೆ ಎಂದು ಪರೋಕ್ಷವಾಗಿ ಪಾಕ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2020ರ ಆಗಸ್ಟ್‌ನಲ್ಲಿ 88 ನಿಷೇಧಿತ ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರ ಮೇಲೆ ಸರ್ಕಾರವು ವ್ಯಾಪಕ ನಿರ್ಬಂಧಗಳನ್ನು ವಿಧಿಸಿದ ನಂತರ ಪಾಕಿಸ್ತಾನವು ತನ್ನ ನೆಲದಲ್ಲಿ ಇಬ್ರಾಹಿಂನ ಉಪಸ್ಥಿತಿಯನ್ನು ಮೊದಲ ಬಾರಿಗೆ ಒಪ್ಪಿತ್ತು. ಇದರಲ್ಲಿ ಭಾರತಕ್ಕೆ ಬೇಕಾಗಿರುವ ಭೂಗತ ಪಾತಕಿಯ ಹೆಸರೂ ಇದೆ.

ಇದನ್ನೂ ಓದಿ: ಮುಳುಗಲಿರುವ ಜಕಾರ್ತ.. ಹೊಸ ರಾಜಧಾನಿಯತ್ತ ಇಂಡೋನೇಷ್ಯಾ ಸರ್ಕಾರ: ಕಾರಣಗಳೇನು?

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.