ವಾಷಿಂಗ್ಟನ್: ಈ ಹಿಂದೆ ಅಮೆರಿಕ ಕೋವಿಡ್ ಸಂಕಷ್ಟಕ್ಕೊಳಗಾಗಿದ್ದ ವೇಳೆ ಭಾರತ ನಮಗೆ ಅಗತ್ಯ ನೆರವು ರವಾನೆ ಮಾಡಿತ್ತು. ಇದೀಗ ತೊಂದರೆಗೊಳಗಾಗಿರುವ ಭಾರತಕ್ಕೆ ಅಗತ್ಯ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದ್ದು, ಸಹಾಯ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ತಿಳಿಸಿದ್ದಾರೆ.
ಭಾರತದ ಸ್ನೇಹಿತರಾಗಿ, ಏಷ್ಯನ್ ಕ್ವಾಡ್ ಸದಸ್ಯರಾಗಿ ಮತ್ತು ಜಾಗತಿಕ ಸಮುದಾಯದ ಭಾಗವಾಗಿ ನಾವು ಈ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ. ಭಾರತಕ್ಕೆ ಸಂಪೂರ್ಣ ಬೆಂಬಲ ಘೋಷಿಸುವ ಉದ್ದೇಶದಿಂದ ಕೋವಿಡ್ ಲಸಿಕೆಗಳ ಮೇಲಿನ ಪೇಟೆಂಟ್ ಅಮಾನತುಗೊಳಿಸಲಾಗಿದ್ದು, ಭಾರತ ಮತ್ತು ಇತರ ರಾಷ್ಟ್ರಗಳು ತಮ್ಮ ಜನರಿಗೆ ಚುಚ್ಚುಮದ್ದು ನೀಡಲು ಸಹಾಯ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಭಾರತಕ್ಕೆ ಈಗಾಗಲೇ ಪುನರ್ಭರ್ತಿ ಮಾಡಬಹುದಾದ ಆಮ್ಲಜನಕ ಸಿಲಿಂಡರ್ ರವಾನೆ ಮಾಡಿದ್ದೇವೆ. N95 ಮಾಸ್ಕ್ ಹಾಗೂ ರೆಮ್ಡೆಸಿವಿರ್ ಔಷಧಿ ಕಳುಹಿಸಿದ್ದೇವೆ ಎಂದರು.
-
The surge of #COVID19 infections & deaths in India is nothing short of heartbreaking. To those of you who have lost loved ones, I send my deepest condolences. As soon as the dire nature of situation became apparent, our Administration took action: US Vice President Kamala Harris pic.twitter.com/JdqwuIKGvE
— ANI (@ANI) May 7, 2021 " class="align-text-top noRightClick twitterSection" data="
">The surge of #COVID19 infections & deaths in India is nothing short of heartbreaking. To those of you who have lost loved ones, I send my deepest condolences. As soon as the dire nature of situation became apparent, our Administration took action: US Vice President Kamala Harris pic.twitter.com/JdqwuIKGvE
— ANI (@ANI) May 7, 2021The surge of #COVID19 infections & deaths in India is nothing short of heartbreaking. To those of you who have lost loved ones, I send my deepest condolences. As soon as the dire nature of situation became apparent, our Administration took action: US Vice President Kamala Harris pic.twitter.com/JdqwuIKGvE
— ANI (@ANI) May 7, 2021
ಏಪ್ರಿಲ್ 26ರಂದು ಅಧ್ಯಕ್ಷ ಜೋ ಬೈಡನ್ ಪ್ರಧಾನಿ ನರೇಂದ್ರ ಮೋದಿ ಜತೆ ಮಾತನಾಡಿದ್ದು, ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಏಪ್ರಿಲ್ 30ರವೇಳಗೆ ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ಎಲ್ಲ ರೀತಿಯ ನೆರವು ನೀಡಲು ನಿರ್ಧರಿಸಿ, ಆ ಕ್ರಮ ಕೈಗೊಂಡಿದೆ. ಭಾರತದಲ್ಲಿ ಕೋವಿಡ್ ಸೋಂಕು ಹಾಗೂ ಸಾವು ಉಲ್ಭಣಗೊಂಡಿದ್ದು, ನಿಜಕ್ಕೂ ಇದು ಹೃದಯ ವಿದ್ರಾವಕ. ನಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಂಡಾಗ ನೋವಾಗುತ್ತದೆ. ಅವರಿಗೆ ನನ್ನ ಸಂತಾಪಗಳು ಎಂದಿದ್ದಾರೆ.