ವಾಷಿಂಗ್ಟನ್ (ಅಮೆರಿಕ): ಅಮೆರಿಕ ಜನತೆಯು ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯವಲ್ಲ ಎಂದು ಚುನಾಯಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಇದಲ್ಲದೆ ಕೊರೊನಾ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಹಾಗೂ ಸುರಕ್ಷತೆಯ ಬಗ್ಗೆ ಅನುಮಾನವಿಲ್ಲದಾಗ ಅವರು ಲಸಿಕೆ ಪಡೆದುಕೊಳ್ಳಬಹುದು ಎಂದಿದ್ದಾರೆ.
ಮಾಸ್ಕ್‌ನ ದೇಶದಾದ್ಯಂತ ಕಡ್ಡಾಯ ಮಾಡದ ಆದೇಶದಂತೆಯೇ ಲಸಿಕೆಯು ಸಹ ಕಡ್ಡಾಯ ಅಂತೇನೂ ಹೇಳಲಾಗದು. ಲಸಿಕೆ ಕಡ್ಡಾಯ ಎಂದು ನಾನು ಒತ್ತಾಯಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ತಿಳಿಸಿದ್ದಾರೆ.
ಅಲ್ಲದೆ ಜನವರಿ 20ರಿಂದ ಅಧ್ಯಕ್ಷರಾಗಿ ಅಧಿಕೃತವಾಗಿ ಶ್ವೇತಭವನಕ್ಕೆ ಕಾಲಿಡಲಿರುವ ಅವರು, ಕೊರೊನಾ ಲಸಿಕೆ ಉಚಿತವಾಗಿರಲಿದೆ, ಅದರಿಂದ ಉಂಟಾಗುವ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗೂ ಲಸಿಕೆ ಉಚಿತವಾಗಿರಲಿದೆ ಎಂದು ಈಗಾಗಲೇ ತಿಳಿಸಿದ್ದಾರೆ.
ನಾನು ಅಧ್ಯಕ್ಷನಾಗಿ ಅಧಿಕಾರ ಪಡೆದ ಬಳಿಕ ಜನರಿಗೆ ಸರಿಯಾದ ಕಾರ್ಯ ಮಾಡಲು ಉತ್ತೇಜಿಸುತ್ತೇನೆ. ಈ ಹಿನ್ನೆಲೆ ನನ್ನ ವಿಜಯಿ ಭಾಷಣದಲ್ಲೂ ಹೇಳಿದ್ದೆ, ಕೇವಲ 100 ದಿನಗಳ ವರೆಗೆ ಮಾಸ್ಕ್ ಧರಿಸಿ ಎಂದು ಕೇಳಿಕೊಂಡಿದ್ದೆ. ಇದು ಜನರಿಗೆ ನೀಡುವ ಶಿಕ್ಷೆ ಎಂದು ನಾನು ಭಾವಿಸಿಲ್ಲ ಜೊತೆಗೆ ಇದು ರಾಜಕೀಯ ವಿಷಯವೂ ಅಲ್ಲ.
100 ದಿನಗಳ ಕಾಲವು ಜನತೆ ಕಠಿಣ ನಿಯಮಕ್ಕೆ ಒಗ್ಗಿಕೊಂಡರೇ ಕೊರೊನಾ ಸಾವಿನ ಪ್ರಮಾಣದಲ್ಲಿ ಇಳಿಕೆಯಾಗುವುದನ್ನು ಅವರೇ ಗಮನಿಸಬಹುದು ಎಂದಿದ್ದಾರೆ. ಅಲ್ಲದೆ ನಾನು ಸಹ ಆ ಲಸಿಕೆ ತೆಗೆದುಕೊಳ್ಳುತ್ತೇನೆ. ನಾನು ಲಸಿಕೆ ತೆಗೆದುಕೊಳ್ಳುವುದನ್ನು ನೋಡಿದ ಜನರಿಗೆ ಲಸಿಕೆ ಕುರಿತು ಆತ್ಮವಿಶ್ವಾಸ ಬರುವ ಸಾಧ್ಯತೆಯೂ ಇದೆ ಎಂದಿದ್ದಾರೆ.
ಇದನ್ನೂ ಓದಿ: ಕೋವಿಡ್ ಲಸಿಕೆ: ಸುಳ್ಳು ವದಂತಿಗಳ ಪೋಸ್ಟ್ ತೆಗೆದುಹಾಕಲಿರುವ ಫೇಸ್‌ಬುಕ್