ETV Bharat / international

'ಮಗುವಿಗೆ ಹಾಲುಣಿಸುವುದರಿಂದ ಕೊರೊನಾ ಹರಡುವುದಿಲ್ಲ..' - ಕೋವಿಡ್

ಎದೆ ಹಾಲು ಸೋಂಕಿನ ಮೂಲವಲ್ಲ ಎಂಬುದನ್ನು 'ಮಮ್ಮೀಸ್ ಮಿಲ್ಕ್ ಹ್ಯೂಮನ್ ಮಿಲ್ಕ್ ರಿಸರ್ಚ್ ಬಯೋರೆಪೊಸಿಟರಿ' ಎಂಬ ಸಂಶೋಧನಾ ಸಂಸ್ಥೆಯ ಅಧ್ಯಯನ ವರದಿ ತಿಳಿಸಿದೆ.

COVID-19
ಮಗುವಿಗೆ ಹಾಲುಣಿಸುವುದರಿಂದ ಕೊರೊನಾ ಹರಡುವುದಿಲ್ಲ
author img

By

Published : Aug 21, 2020, 1:15 PM IST

Updated : Aug 21, 2020, 1:39 PM IST

ನ್ಯೂಯಾರ್ಕ್​: ಸೋಂಕಿತ ತಾಯಿಯ ಎದೆಹಾಲು ಕುಡಿಯುವ ಶಿಶುವಿಗೆ ಕೋವಿಡ್​ ಸೋಂಕು ಅಂಟುವುದಿಲ್ಲ ಎಂಬುದನ್ನು ಮತ್ತೊಂದು ಅಧ್ಯಯನ ಸಾಬೀತುಪಡಿಸಿದೆ.

'ಮಮ್ಮೀಸ್ ಮಿಲ್ಕ್ ಹ್ಯೂಮನ್ ಮಿಲ್ಕ್ ರಿಸರ್ಚ್ ಬಯೋರೆಪೊಸಿಟರಿ' ಎಂಬ ಸಂಶೋಧನಾ ಸಂಸ್ಥೆಯು ಸಾರ್ಸ್‌-ಕೋವ್‌ -2 (SARS-CoV-2) ಸೋಂಕಿತ ಅಮೆರಿಕದ 18 ಮಹಿಳೆಯರಿಂದ ಸಂಗ್ರಹಿಸಿದ ಎದೆ ಹಾಲಿನ 64 ಮಾದರಿಗಳನ್ನು ಪರಿಶೀಲಿಸಿ ಅಧ್ಯಯನದ ವರದಿಯನ್ನು JAMA ಎಂಬ ಜರ್ನಲ್​ನಲ್ಲಿ ಪ್ರಕಟಿಸಿದೆ.

ಈ ಪೈಕಿ ಒಂದು ಮಾದರಿ ಮಾತ್ರ ವೈರಲ್‌ ಆರ್‌ಎನ್‌ಎಗೆ ಪಾಸಿಟಿವ್​​ ಎಂದು ಕಂಡು ಬಂದಿದೆ. ಆದರೆ ನಂತರದ ಪರೀಕ್ಷೆಗಳಲ್ಲಿ ವೈರಸ್‌ ಮತ್ತೆ ಕಾಣಿಸಿಲ್ಲ. ಅಲ್ಲದೇ ವೈರಲ್‌ ಆರ್‌ಎನ್‌ಎ, ಇದು ಸೋಂಕಿಗೆ ಸಮನಾಗಿಲ್ಲ. ಇದು ಸಾಂಕ್ರಾಮಿಕ ರೋಗವಾಗಲು ಇನ್ನೂ ಹೆಚ್ಚು ವೃದ್ಧಿಯಾಗಬೇಕು. ಹೀಗಾಗಿ ಎದೆಹಾಲು ಕುಡಿದ ಶಿಶುವಿಗೆ ಸೋಂಕು ತಗಲುವುದಿಲ್ಲ. ಎದೆ ಹಾಲು ಸೋಂಕಿನ ಮೂಲವಲ್ಲ ಎಂಬುದನ್ನು ನಮ್ಮ ಸಂಶೋಧನೆ ತಿಳಿಸುತ್ತದೆ ಎಂದು ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕ ಕ್ರಿಸ್ಟಿನಾ ಚೇಂಬರ್ಸ್ ಹೇಳಿದ್ದಾರೆ.

ಮಾಹಿತಿಯ ಕೊರತೆಯಿಂದಾಗಿ ಸಾರ್ಸ್‌-ಕೋವ್‌ -2 ಸೋಂಕಿತ ಕೆಲ ಮಹಿಳೆಯರು ತಮ್ಮ ಮಕ್ಕಳಿಗೆ ಹಾಲುಣಿಸದಿರಲು ನಿರ್ಧರಿಸಿದ್ದರು. ನಮ್ಮ ಈಗಿನ ಅಧ್ಯಯನದ ಫಲಿತಾಂಶಗಳು ಮತ್ತು ಭವಿಷ್ಯದ ಅಧ್ಯಯನಗಳು ಮಹಿಳೆಯರಿಗೆ ಸ್ತನ್ಯಪಾನ ಮಾಡಲು ಅಗತ್ಯವಾದ ಧೈರ್ಯವನ್ನು ನೀಡುತ್ತವೆ ಎಂದು ನಾವು ಭಾವಿಸುತ್ತೇವೆ ಎಂದು ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಗ್ರೇಸ್ ಅಲ್ಡ್ರೊವಾಂಡಿ ತಿಳಿಸಿದ್ದಾರೆ.

Last Updated : Aug 21, 2020, 1:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.