ETV Bharat / international

ಕೋವಿಡ್‌ ಮೂಲ ತಿಳಿಯಲು ಸಾಕಷ್ಟು ಮಾಹಿತಿ ಬೇಕು: ಅಮೆರಿಕ ಗುಪ್ತಚರ ಸಂಸ್ಥೆ

author img

By

Published : May 28, 2021, 9:30 AM IST

ವೈರಸ್ ಸೋಂಕಿತ ಪ್ರಾಣಿಗಳೊಂದಿಗಿನ ಮಾನವ ಸಂಪರ್ಕದಿಂದ ಸ್ವಾಭಾವಿಕವಾಗಿ ಕೋವಿಡ್​ ಹರಡಿದೆ. ಅಥವಾ, ಪ್ರಯೋಗಾಲಯದ ಚಟುವಟಿಕೆಯಿಂದ ಹುಟ್ಟಿದೆ. ಇವರೆಡರ ಕುರಿತು ನಿರ್ಣಯಿಸಲು ಸಾಕಷ್ಟು ಮಾಹಿತಿ ಬೇಕು ಎಂದು ಯುಎಸ್ ಗುಪ್ತಚರ ಸಂಸ್ಥೆ ಹೇಳಿದೆ.

Covid-19
ಕೋವಿಡ್​-19

ವಾಷಿಂಗ್ಟನ್: ಕೊರೊನಾ ವೈರಸ್​ ಮೂಲದ ಮಾಹಿತಿ ಕಲೆ ಹಾಕುತ್ತಿರುವ ಅಮೆರಿಕ ಗುಪ್ತಚರ ಸಂಸ್ಥೆ ಇದೀಗ, ವೈರಸ್ ಸೋಂಕಿತ ಪ್ರಾಣಿಗಳೊಂದಿಗಿನ ಮಾನವ ಸಂಪರ್ಕದಿಂದ ಸ್ವಾಭಾವಿಕವಾಗಿ ಕೋವಿಡ್​-19 ಹೊರಹೊಮ್ಮಿರಬಹುದು ಅಥವಾ ಇದನ್ನು ಪ್ರಯೋಗಾಲಯದಲ್ಲಿ ಸೃಷ್ಟಿ ಮಾಡಿರಬಹುದು. ಆದ್ರೆ ಈ ಬಗ್ಗೆ ಖಚಿತವಾಗಿ ಹೇಳಲು ಸಾಕಷ್ಟು ಮಾಹಿತಿ ಬೇಕಿದೆ ಎಂದು ತನಿಖಾಧಿಕಾರಿಗಳು ಹೇಳುತ್ತಿದ್ದಾರೆ.

1. ಲ್ಯಾಬ್‌ ಸೋರಿಕೆ- ಗಂಭೀರ ಆರೋಪ

2019ರ ಡಿಸೆಂಬರ್​ನಲ್ಲಿ ಮೊದಲ ಕೋವಿಡ್​ ಪ್ರಕರಣ ಚೀನಾದ ವುಹಾನ್​ನಲ್ಲಿ ವರದಿಯಾಗಿತ್ತು. ಬಳಿಕ ವಿಶ್ವಾದ್ಯಂತ ಸೋಂಕು ಹರಡಿದ್ದು, ಇಲ್ಲಿಯವರೆಗೆ 16,96,24,157 ಮಂದಿಗೆ ವೈರಸ್​ ಅಂಟಿದ್ದು, 35,25,042 ಜನರು ಬಲಿಯಾಗಿದ್ದಾರೆ. ಕೋವಿಡ್​ ಮೂಲವು ವ್ಯಾಪಕವಾಗಿ ಚರ್ಚಿಸಲ್ಪಟ್ಟ ವಿಷಯವಾಗಿ ಉಳಿದಿದೆ. ಕೆಲವು ವಿಜ್ಞಾನಿಗಳು, ಜಾಗತಿಕ ನಾಯಕರು ಚೀನಾದ ಲ್ಯಾಬ್ ಸೋರಿಕೆ ಸಿದ್ಧಾಂತದ ಬಗ್ಗೆ ಚರ್ಚಿಸುತ್ತಾ ಬಂದಿದ್ದಾರೆ.

2. 'ವುಹಾನ್‌ನ ಲ್ಯಾಬ್‌ನಲ್ಲೇ ವೈರಸ್‌ ಸೃಷ್ಟಿ'

ಉದ್ದೇಶಪೂರ್ವಕವಾಗಿ ಸೋಂಕು ಪಸರಿಸಲು ಚೀನಾ ತನ್ನ ವುಹಾನ್​​ನ ಪ್ರಯೋಗಾಲಯದಲ್ಲೇ ವೈರಸ್​ ಸೃಷ್ಟಿಸಿದೆ ಎಂದು ಅಮೆರಿಕ ಕೂಡ ಆರೋಪ ಮಾಡುತ್ತಾ ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಯುಎಸ್ ಗುಪ್ತಚರ ಸಂಸ್ಥೆಗೆ ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು​ ಕೊರೊನಾ ವೈರಸ್​​ ಮೂಲದ ಬಗ್ಗೆ ನಿರ್ದಿಷ್ಟ ತೀರ್ಮಾನಕ್ಕೆ ಬರುವಂತಹ ಮಾಹಿತಿಯನ್ನು ಸಂಗ್ರಹಿಸುವ ಪ್ರಯತ್ನ ದ್ವಿಗುಣಗೊಳಿಸಿ, 90 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಕೊರೊನಾ ಮೂಲದ ತನಿಖೆ ಚುರುಕುಗೊಳಿಸಿ: ಯುಎಸ್ ಗುಪ್ತಚರ ಸಂಸ್ಥೆಗೆ ಬೈಡನ್​ ಆದೇಶ

3. ಎರಡು ಸನ್ನಿವೇಶಗಳನ್ನು ತಿಳಿಸಿದ US ಗುಪ್ತಚರ ಸಂಸ್ಥೆ

ಬೈಡನ್​ ಆದೇಶದ ಬೆನ್ನಲ್ಲೇ ಹೇಳಿಕೆ ನೀಡಿರುವ​ ಸ್ಟ್ರಾಟೆಜಿಕ್ ಕಮ್ಯುನಿಕೇಷನ್ಸ್‌ನ ರಾಷ್ಟ್ರೀಯ ಗುಪ್ತಚರ ಸಹಾಯಕ ನಿರ್ದೇಶಕಿ ಅಮಂಡಾ ಸ್ಕೋಚ್, ಕೊರೊನಾ ವೈರಸ್​ ಆರಂಭದಲ್ಲಿ ಎಲ್ಲಿ, ಯಾವಾಗ, ಅಥವಾ ಹೇಗೆ ಹರಡಿತು ಎಂಬುದು ಯುಎಸ್ ಗುಪ್ತಚರ ಸಂಸ್ಥೆಗೆ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ಇದರ ಹಿಂದೆ ಎರಡು ಸನ್ನಿವೇಶಗಳಿವೆ.. ಒಂದು, ವೈರಸ್ ಸೋಂಕಿತ ಪ್ರಾಣಿಗಳೊಂದಿಗಿನ ಮಾನವ ಸಂಪರ್ಕದಿಂದ ಸ್ವಾಭಾವಿಕವಾಗಿ ಕೋವಿಡ್​ ಹರಡಿದೆ. ಅಥವಾ, ಪ್ರಯೋಗಾಲಯದ ಚಟುವಟಿಕೆಯಿಂದ ಹುಟ್ಟಿದೆ. ಇವರೆಡರ ಕುರಿತು ನಿರ್ಣಯಿಸಲು ಸಾಕಷ್ಟು ಮಾಹಿತಿ ಬೇಕು. ಲಭ್ಯವಿರುವ ಎಲ್ಲ ಪುರಾವೆಗಳನ್ನು ಗುಪ್ತಚರ ಸಂಸ್ಥೆ ಪರಿಶೀಲಿಸುತ್ತಿದೆ. ವಿಭಿನ್ನ ದೃಷ್ಟಿಕೋನಗಳನ್ನು ಪರಿಗಣಿಸುತ್ತದೆ. ಹೊಸ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಿಸುತ್ತದೆ ಎಂದು ಹೇಳಿದ್ದಾರೆ.

4. WHO ತಜ್ಞರ ಚೀನಾ ಭೇಟಿ

ವೈರಸ್​ ಮೂಲದ ಬಗ್ಗೆ ತನಿಖೆ ನಡೆಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್‌ಒ) ತಜ್ಞರು ವುಹಾನ್​ ಸೇರಿದಂತೆ ಚೀನಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಚೀನಾ ಅಧ್ಯಯನ ತಂಡದೊಂದಿಗೆ ಸೇರಿ ತನಿಖೆ ನಡೆಸಿತ್ತು. ತನಿಖೆ ಬಳಿಕ ಡಬ್ಲ್ಯುಹೆಚ್‌ಒ, ಇದರ ಹಿಂದೆ ಚೀನಾ ಕೈವಾಡವಿಲ್ಲವೆಂದು ತಿಳಿಸಿತ್ತು. ಆದರೆ ಇದನ್ನು ನಂಬದ ಅಮೆರಿಕ, ಈ ಬಗ್ಗೆ ತನಿಖೆ ಚುರುಕುಗೊಳಿಸಲು ತನ್ನ ಗುಪ್ತಚರ ಸಂಸ್ಥೆಗೆ ಆದೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.