ETV Bharat / international

ಕೊರೊನಾ ಸೋಂಕು ಚೀನಾ ಕೊಟ್ಟ ಅತಿ ಕೆಟ್ಟ ಉಡುಗೊರೆ: ಡೊನಾಲ್ಡ್ ಟ್ರಂಪ್ ವ್ಯಂಗ್ಯ - ಕೋವಿಡ್-19 ಚೀನಾ ನೀಡಿದ ಉಡುಗೊರೆ

ಕೋವಿಡ್-19 ಚೀನಾದ ಉಡುಗೊರೆಯಾಗಿದೆ. ಅದನ್ನು ಮೂಲದಲ್ಲೇ ನಿಲ್ಲಿಸಬೇಕಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Donald Trump
ಡೊನಾಲ್ಡ್ ಟ್ರಂಪ್
author img

By

Published : Jun 5, 2020, 11:09 PM IST

ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾದಂತೆಲ್ಲ ಚೀನಾ ಮೇಲೆ ಕಿಡಿ ಕಾರುತ್ತಿರುವ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಇಂದೂ ಕೂಡ ಆಕ್ರೋಶ ವ್ಯಕ್ತಪಡಿಸಿ, 'ಕೊರೊನಾ ವೈರಸ್ ಚೀನಾ ನೀಡಿದ ಅತಿ ಕೆಟ್ಟ ಉಡುಗೊರೆ' ಎಂದು ವ್ಯಂಗ್ಯವಾಡಿದರು.

  • #WATCH ...we are working with the world and we will work with China too. We will work with everybody. But what happened should have never happened: US President Donald Trump pic.twitter.com/cZr2bsOClD

    — ANI (@ANI) June 5, 2020 " class="align-text-top noRightClick twitterSection" data=" ">

ವಾಷಿಂಗ್ಟನ್​​ನಲ್ಲಿ ಮಾತನಾಡಿದ ಟ್ರಂಪ್, ಕೋವಿಡ್-19 ಚೀನಾ ನೀಡಿ ಉಡುಗೊರೆಯಾಗಿದೆ. ಒಳ್ಳೆಯ ಉಡುಗೊರೆಯಲ್ಲ. ಇದು ತುಂಬಾ ಕೆಟ್ಟ ಉಡುಗೊರೆ. ಅವರು ಅದನ್ನು ಮೂಲದಲ್ಲೇ ನಿಲ್ಲಿಸಬೇಕಾಗಿತ್ತು. ಸೋಂಕು ಪ್ರಾರಂಭವಾದ ವುಹಾನ್ ಮಾತ್ರ ತೊಂದರೆಯಲ್ಲಿತ್ತು. ಆದರೆ, ಅದು ಇತರೆ ಯಾವುದೇ ಭಾಗಗಳಿಗೆ ಹೋಗಿರಲಿಲ್ಲ ಎಂದಿದ್ದಾರೆ.

'ಚೀನಾವು ಅಮೆರಿಕದಿಂದ ಅಪಾರ ಲಾಭ ಪಡೆದುಕೊಂಡಿದೆ, ನಾವು ಚೀನಾವನ್ನು ಪುನರ್ನಿರ್ಮಿಸಲು ಸಹಾಯ ಮಾಡಿದ್ದೇವೆ. ನಾವು ಅವರಿಗೆ ವರ್ಷಕ್ಕೆ 500 ಬಿಲಿಯನ್ ಡಾಲರ್​ಗಳನ್ನು ನೀಡಿದ್ದೇವೆ. ನಾವು ಪ್ರಪಂಚದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಚೀನಾದೊಂದಿಗೂ ಕೆಲಸ ಮಾಡುತ್ತೇವೆ. ನಾವು ಎಲ್ಲರೊಂದಿಗೆ ಕೆಲಸ ಮಾಡುತ್ತೇವೆ. ಆದರೆ, ಈಗ ಏನಾಗಿದೆಯೋ ಅದು ಎಂದಿಗೂ ಆಗಬಾರದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.