ETV Bharat / international

ಲಾಕ್​ಡೌನ್ ಸೈಡ್​ ಎಫೆಕ್ಟ್.. ಮಕ್ಕಳಲ್ಲಿ ಹೆಚ್ಚಿದ ಬೊಜ್ಜು.. - ಬಫಲೋ ವಿಶ್ವವಿದ್ಯಾಲಯ

ಒಬೆಸಿಟಿ ಜರ್ನಲ್​ ಪ್ರಕಟಣೆಯ ಅನ್ವಯ, ಸಂಶೋಧಕರು 41 ಮಕ್ಕಳು ಮತ್ತು ಹದಿಹರೆಯದವರನ್ನು ಸ್ಥೂಲಕಾಯದ ಜೊತೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಾಂತ್ಯಕ್ಕೂ ಇಟಲಿಯ ವೆರೋನಾದಲ್ಲಿ ಸಮೀಕ್ಷೆ ನಡೆಸಿದರು. ಆಹಾರ, ಚಟುವಟಿಕೆ ಮತ್ತು ನಿದ್ರೆಗೆ ಸಂಬಂಧಿಸಿದ ಜೀವನಶೈಲಿಯ ಮಾಹಿತಿಯನ್ನು ಇಟಲಿಯ ರಾಷ್ಟ್ರೀಯ ಲಾಕ್‌ಡೌನ್​ನ ಮೂರು ವಾರಗಳವರೆಗೆ ಸಂಗ್ರಹಿಸಲಾಯಿತು.

childhood obesity
ಬೊಜ್ಜು
author img

By

Published : Jun 10, 2020, 6:00 PM IST

ನ್ಯೂಯಾರ್ಕ್: ಕೊರೊನಾ ವೈರಸ್ ಪ್ರಪಂಚದಾದ್ಯಂತ ಹರಿದಾಡುತ್ತಿದೆ. ಲಾಕ್‌ಡೌನ್ ವೇಳೆ ಚಟುವಟಿಕೆ ಇಲ್ಲದೆ ಮನೆಯಲ್ಲಿ ಕಾಲ ಕಳೆಯುತ್ತಿರುವ ಮಕ್ಕಳಲ್ಲಿ ಬೊಜ್ಜು ಏರಿಕೆ ಆಗುತ್ತಿದೆ. ಇದು ಆಹಾರ, ನಿದ್ರೆ ಮತ್ತು ದೈಹಿಕ ಚಟುವಟಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಅಧ್ಯಯನ ತಂಡ ಎಚ್ಚರಿಸಿದೆ. ಕೋವಿಡ್​-19 ಸಾಂಕ್ರಾಮಿಕವು ವೈರಲ್ ಸೋಂಕು ಮೀರಿ ಬದಲಿ ಮೇಲಾಧಾರ ಪರಿಣಾಮಗಳನ್ನು ಹೊಂದಿದೆ ಎಂದು ಅಮೆರಿಕದ ಬಫಲೋ ವಿಶ್ವವಿದ್ಯಾಲಯದ ಅಧ್ಯಯನ ಸಹ ಲೇಖಕ ಮೈಲೆಸ್ ಫೇಯ್ತ್ ಹೇಳಿದ್ದಾರೆ.

ಸ್ಥೂಲಕಾಯ ಸಮಸ್ಯೆ ಹೊಂದಿರುವ ಮಕ್ಕಳು ಮತ್ತು ಹದಿಹರೆಯದವರನ್ನು ದುರದೃಷ್ಟಕರ ಎಂಬಂತೆ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಇದು ಆರೋಗ್ಯಕರ ಜೀವನಶೈಲಿ ನಡವಳಿಕೆಗಳನ್ನು ಕಾಪಾಡಿಕೊಳ್ಳಲು ಪ್ರತಿಕೂಲವಾದ ವಾತಾವರಣ ಸೃಷ್ಟಿಸುತ್ತದೆ ಎಂಬ ನಂಬಿಕೆ ಇರಿಸಿಕೊಂಡಿದ್ದಾರೆ ಎಂದರು. ಮಕ್ಕಳು ಮತ್ತು ಹದಿಹರೆಯದವರು ಸಾಮಾನ್ಯವಾಗಿ ಶೈಕ್ಷಣಿಕ ಅವಧಿಗಿಂತ ಬೇಸಿಗೆ ರಜೆಯಲ್ಲಿ ಹೆಚ್ಚಿನ ತೂಕ ಪಡೆಯುತ್ತಾರೆ. ಇದು ಹೋಮ್‌ಬೌಂಡ್ ಆಗಿರುವುದರಿಂದ ಮಕ್ಕಳ ಜೀವನಶೈಲಿಯ ನಡವಳಿಕೆಗಳ ಮೇಲೆ ಇದೇ ರೀತಿಯ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಒಬೆಸಿಟಿ ಜರ್ನಲ್​ ಪ್ರಕಟಣೆಯ ಅನ್ವಯ, ಸಂಶೋಧಕರು 41 ಮಕ್ಕಳು ಮತ್ತು ಹದಿಹರೆಯದವರನ್ನು ಸ್ಥೂಲಕಾಯದ ಜೊತೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಾಂತ್ಯಕ್ಕೂ ಇಟಲಿಯ ವೆರೋನಾದಲ್ಲಿ ಸಮೀಕ್ಷೆ ನಡೆಸಿದರು. ಆಹಾರ, ಚಟುವಟಿಕೆ ಮತ್ತು ನಿದ್ರೆಗೆ ಸಂಬಂಧಿಸಿದ ಜೀವನಶೈಲಿಯ ಮಾಹಿತಿಯನ್ನು ಇಟಲಿಯ ರಾಷ್ಟ್ರೀಯ ಲಾಕ್‌ಡೌನ್​ನ ಮೂರು ವಾರಗಳವರೆಗೆ ಸಂಗ್ರಹಿಸಲಾಯಿತು. ಈ ಡಾಟಾವನ್ನು 2019ರಲ್ಲಿ ಸಂಗ್ರಹಿಸಿದ್ದ ಮಕ್ಕಳ ದತ್ತಾಂಶಕ್ಕೆ ಹೋಲಿಕೆ ಮಾಡಲಾಯಿತು.

ದೈಹಿಕ ಚಟುವಟಿಕೆ, ಸ್ಕ್ರೀನ್​ ಸಮಯ, ನಿದ್ರೆ, ಆಹಾರ ಪದ್ಧತಿ ಮತ್ತು ಕೆಂಪು ಮಾಂಸ, ಪಾಸ್ಟಾ, ಸ್ನ್ಯಾಕ್ಸ್, ಹಣ್ಣು ಮತ್ತು ತರಕಾರಿಗಳ ಸೇವನೆಯ ಮೇಲೆ ಕೇಂದ್ರೀಕರಿಸಿ ಪ್ರಶ್ನೆಗಳನ್ನು ಕೇಳಲಾಯಿತು. ಫಲಿತಾಂಶಗಳು ನಡವಳಿಕೆಯು ಋಣಾತ್ಮಕ ಬದಲಾವಣೆಯನ್ನು ದೃಧಪಡಿಸಿದವು. ಬೊಜ್ಜು ಹೊಂದಿರುವ ಮಕ್ಕಳು ತಮ್ಮ ಶಾಲಾ ಪಠ್ಯಕ್ರಮದಲ್ಲಿ ತೊಡಗಿಸಿಕೊಂಡಾಗ ಹೋಲಿಸಿದರೆ ಮನೆಯಲ್ಲಿದ್ದಾಗ ತೂಕ ನಿಯಂತ್ರಣ ಜೀವನಶೈಲಿ ಕಾರ್ಯಕ್ರಮಗಳಲ್ಲಿ ಕೆಟ್ಟದಾಗಿದೆ ಎಂದು ಸೂಚಿಸುತ್ತದೆ.

ಒಂದು ವರ್ಷದ ಮೊದಲು ದಾಖಲಾದ ನಡವಳಿಕೆಗಳಿಗೆ ಹೋಲಿಸಿದರೆ ಮಕ್ಕಳು ದಿನಕ್ಕೆ ಹೆಚ್ಚುವರಿ ಊಟವನ್ನು ತಿನ್ನುತ್ತಿದ್ದರು. ದಿನಕ್ಕೆ ಹೆಚ್ಚುವರಿ ಅರ್ಧಗಂಟೆ ಮಲಗಿದ್ದರು. ಫೋನ್, ಕಂಪ್ಯೂಟರ್ ಮತ್ತು ಟೆಲಿವಿಷನ್ ಮುಂದೆ ನಿತ್ಯ ಸುಮಾರು ಐದು ಗಂಟೆಗಳ ಕಾಲ ಕಳೆದಿದ್ದಾರೆ. ಕೆಂಪು ಮಾಂಸ, ಸಕ್ಕರೆ ಪಾನೀಯ ಮತ್ತು ಜಂಕ್ ಫುಡ್​ಗಳ ಬಳಕೆ ಹೆಚ್ಚಾಗಿದೆ. ದೈಹಿಕ ಚಟುವಟಿಕೆಯು ವಾರಕ್ಕೆ ಎರಡು ಗಂಟೆಗಳಿಗಿಂತಲೂ ಕಡಿಮೆಯಾಗಿದೆ. ಸೇವಿಸುವ ತರಕಾರಿಗಳ ಸಂಖ್ಯೆಗಳಲ್ಲಿ ಯಾವುದೇ ರೀತಿಯ ಬದಲಾವಣೆ ಆಗದೆ ಯಥಾವತ್ತಾಗಿ ಉಳಿದಿದೆ ಎಂದು ಅಧ್ಯಯನ ತಿಳಿಸಿದೆ.

ಬಾಲ್ಯದಲ್ಲಿ ಸ್ಥೂಲಕಾಯ ಕಾಣಿಸಿಕೊಂಡರೆ ಬದುಕಿನ ಮುಂದಿನ ಹಂತಗಳಲ್ಲಿ ಮಧುಮೇಹ, ಹೃದಯದ ಸಮಸ್ಯೆಗಳು ಹಾಗೂ ಕ್ಯಾನ್ಸರ್‌ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೆ ಆತ್ಮವಿಶ್ವಾಸ ಕಡಿಮೆ ಇರುವುದು, ಆತಂಕ ಹಾಗೂ ಖಿನ್ನತೆ ಕೂಡ ಕಾಣಿಸಿಕೊಳ್ಳಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.