ವಾಷಿಂಗ್ಟನ್: ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡಿದ್ರೆ, ಚೀನಾ ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಯುಎಸ್ ಖಂಡಿತವಾಗಿಯೂ ಧ್ವನಿ ಎತ್ತುತ್ತದೆ. ಒಂದು ವೇಳೆ ಉಲ್ಲಂಘನೆಯಾದ್ರೆ, ಚೀನಾ ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಅವರಿಗೆ ತಿಳಿದಿದೆ" ಎಂದು ಸಿಎನ್‌ಎನ್ ಟೌನ್ ಹಾಲ್‌ನಲ್ಲಿ ಬೈಡನ್ ಹೇಳಿದ್ದಾರೆ.
ಓದಿ: ಸೆನೆಟರ್ ಮಿಚ್ ಮೆಕ್‌ಕಾನ್ನೆಲ್ ವಿರುದ್ಧ ಟ್ರಂಪ್ ವಾಗ್ದಾಳಿ
ಯುಎನ್ ಮತ್ತು ಇತರ ಏಜೆನ್ಸಿಗಳು ಮಾನವ ಹಕ್ಕುಗಳ ವಕ್ತಾರರಾಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಅದನ್ನು ನಾವು ಮುಂದುವರಿಸುತ್ತೇವೆ" ಎಂದು ಬೈಡನ್ ಹೇಳಿದ್ದಾರೆ.
ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ದೂರವಾಣಿ ಕರೆ ಮಾಡುವಾಗ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಯುನೈಟೆಡ್ ಸ್ಟೇಟ್ಸ್‌ನ ನಿಲುವುಗಳಿಗೆ ಸಂಬಂಧಿಸಿದಂತೆ ಚೀನಾದ ನಾಯಕನಿಗೆ ಹೇಳಲಾಗಿದೆ ಎಂದು ಬೈಡನ್ ಹೇಳಿದ್ದಾರೆ.