ನ್ಯೂಯಾರ್ಕ್: ಕೋವಿಡ್-19 ಮಕ್ಕಳ ಮೇಲೆಯೂ ಪರಿಣಾಮ ಬೀರುತ್ತಿರುವುದರಿಂದ ಭವಿಷ್ಯಕ್ಕೆ ಬೇಕಾಗುವ ಹೂಡಿಕೆ ಕಡಿಮೆಯಾಗಬಾರದು ಎಂದು ಯುನಿಸೆಫ್ ಹೇಳಿದೆ.
ಮಕ್ಕಳ ಮೇಲೆ ಸಾಂಕ್ರಮಿಕ ರೋಗಗಳ ಪರಿಣಾಮವನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಯುನಿಸೆಫ್ನ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ಹೇಳಿದ್ದಾರೆ.
ಕೋವಿಡ್-19ನ ವ್ಯತಿರಿಕ್ತ ಪರಿಣಾಮಗಳು ಮಕ್ಕಳ ಭವಿಷ್ಯವನ್ನು ಹಾನಿಗೊಳಿಸುವ ಸಾಧ್ಯತೆ ಇದೆ ಎಂದು ಯುನಿಸೆಫ್ ಅಭಿಪ್ರಾಯಪಟ್ಟಿದೆ.
ವಿಶ್ವದಾದ್ಯಂತ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ 99 ಶೇಕಡಾದಷ್ಟು ಮಕ್ಕಳು ಲಾಕ್ಡೌನ್ ಪ್ರದೆಶದಲ್ಲಿ ವಾಸಿಸುತ್ತಿದ್ದಾರೆ ಎಂದು ಯನಿಸೆಫ್ ತಿಳಿಸಿದೆ.
ಎಲ್ಲಾ ಬಿಕ್ಕಟ್ಟಿನಂತೆ ಕೋವಿಡ್-19 ಬಿಕ್ಕಟ್ಟಿನಲ್ಲಿಯೂ ಮಕ್ಕಳು ಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿಯೊಂದು ಮಗುವಿನ ಆರೋಗ್ಯ ಕಾಪಾಡುವುದು ಮತ್ತು ಜೀವ ಉಳಿಸುವುದು ನಮ್ಮ ಜವಾಬ್ದಾರಿ ಎಂದು ಯುನಿಸೆಫ್ ಹೇಳಿದೆ.
ಮಕ್ಕಳ ಶಿಕ್ಷಣ, ರಕ್ಷಣೆ, ಆರೋಗ್ಯ ಮತ್ತು ಪೋಷಣೆ, ನೀರು ಮತ್ತು ನೈರ್ಮಲ್ಯೀಕರಣದ ಕುರಿತು ಗಮನಹರಿಸಬೇಕು ಎಂದು ಯುನಿಸೆಫ್ ತಿಳಿಸಿದೆ.