ಲಂಡನ್: ಮ್ಯಾನ್ಮಾರ್ ಮಾಜಿ ನಾಯಕಿ ಆಂಗ್ ಸಾನ್ ಸೂಕಿ ವಿರುದ್ಧ ಪೊಲೀಸರು ಹೊರಿಸಿರುವ ಹೊಸ ಆರೋಪಗಳು ಕಟ್ಟುಕಥೆಯಾಗಿದ್ದು, ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
-
New charges against Aung San Suu Kyi fabricated by the Myanmar military are a clear violation of her human rights. We stand with the people of Myanmar and will ensure those responsible for this coup are held to account.
— Boris Johnson (@BorisJohnson) February 16, 2021 " class="align-text-top noRightClick twitterSection" data="
">New charges against Aung San Suu Kyi fabricated by the Myanmar military are a clear violation of her human rights. We stand with the people of Myanmar and will ensure those responsible for this coup are held to account.
— Boris Johnson (@BorisJohnson) February 16, 2021New charges against Aung San Suu Kyi fabricated by the Myanmar military are a clear violation of her human rights. We stand with the people of Myanmar and will ensure those responsible for this coup are held to account.
— Boris Johnson (@BorisJohnson) February 16, 2021
ಮ್ಯಾನ್ಮಾರ್‌ನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರ ವಿರುದ್ಧ ಮ್ಯಾನ್ಮಾರ್‌ನ ಪೊಲೀಸರು ಹೊಸ ಆರೋಪ ಪಟ್ಟಿ ದಾಖಲಿಸಿದ್ದು, ಇದು ಸೂಕಿ ಅವರನ್ನು ವಿಚಾರಣೆಯಿಲ್ಲದೇ ಅನಿರ್ದಿಷ್ಟಾವಧಿಯವರೆಗೆ ಬಂಧಿಸಲು ಅನುವು ಮಾಡಿಕೊಡುತ್ತದೆ ಎಂದು ಸೂಕಿ ಪರ ವಕೀಲ ಹೇಳಿದ್ದಾರೆ ಎಂದು ಮ್ಯಾನ್ಮಾರ್ ಟೈಮ್ಸ್ ವರದಿ ಮಾಡಿದೆ.
ಕೊರೊನಾ ವೈರಸ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ಬಳಸಲಾಗುವ ನೈಸರ್ಗಿಕ ವಿಪತ್ತು ನಿರ್ವಹಣಾ ಕಾನೂನಿನ 25ನೇ ವಿಧಿಯನ್ನು ಉಲ್ಲಂಘಿಸಿದ ಆರೋಪ ಸೂಕಿ ವಿರುದ್ಧ ಹೊರಿಸಲಾಗಿದೆ ಎಂದು ಸೂಕಿ ಪರ ವಕೀಲ ಖಿನ್ ಮಾಂಗ್ ಜಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಓದಿ: ರಾಹುಲ್ ಗಾಂಧಿ ತಂದೆ ಹತ್ಯೆ ಬಗ್ಗೆ ವಿದ್ಯಾರ್ಥಿನಿ ಪ್ರಶ್ನೆ... ರಾಗಾ ಉತ್ತರಿಸಿದ್ದು ಹೀಗೆ!
ಈ ಕುರಿತಂತೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದು, ಆಂಗ್ ಸಾನ್ ವಿರುದ್ಧ ಮ್ಯಾನ್ಮಾರ್ ಪೊಲೀಸರು ಮಾಡಿರುವ ಆರೋಪಗಳು ಕಟ್ಟುಕಥೆಯಾಗಿದ್ದು, ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ನಾವು ಮ್ಯಾನ್ಮಾರ್ ಜನರೊಂದಿಗೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಫೆ. 3 ರಂದು ಅಕ್ರಮ ಆಮದು ಮತ್ತು ರೇಡಿಯೋ ಸಂವಹನ ಸಾಧನಗಳ ಬಳಕೆಗಾಗಿ ಸೂಕಿಯನ್ನು ಬಂಧಿಸಲಾಗಿತ್ತು. ಇವು ಮ್ಯಾನ್ಮಾರ್‌ನಲ್ಲಿ ನಿರ್ಬಂಧಿತ ಗ್ಯಾಜೆಟ್‌ಗಳಾಗಿದ್ದು, ಸ್ವಾಧೀನಕ್ಕೆ ಮುನ್ನ ಮಿಲಿಟರಿ ಸಂಬಂಧಿತ ಏಜೆನ್ಸಿಗಳಿಂದ ಅನುಮತಿ ಪಡೆಯಬೇಕಿತ್ತು ಎನ್ನಲಾಗುತ್ತಿದೆ.