ETV Bharat / international

ಕೊರೊನಾ ಮೂಲ ಪತ್ತೆಗೆ ಚೀನಾ ಮೇಲೆ ಒತ್ತಡ ಹೇರಲು ಆಗಲ್ಲ: ವಿಶ್ವ ಆರೋಗ್ಯ ಸಂಸ್ಥೆ - ಕೋವಿಡ್​ನ ಮೂಲ

ಅಮೆರಿಕ ತನ್ನದೇ ಆದ ವಿಮರ್ಶೆ ಮತ್ತು ಪ್ರಕ್ರಿಯೆ ಸಹ ಪ್ರಾರಂಭಿಸುತ್ತದೆ. ನಾವು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಸಮನ್ವಯದಿಂದ ಒತ್ತಡ ಮುಂದುವರೆಸಲಿದ್ದೇವೆ. ಚೀನಾ ಪಾರದರ್ಶಕವಾಗಿರಬೇಕು, ಡೇಟಾ ಮತ್ತು ಮಾಹಿತಿಯೊಂದಿಗೆ ಮುನ್ನಡೆಯಲಿದೆ. ನಾವು ಮುಂದೆ ಹೋಗುವುದಿಲ್ಲ ಎಂದು ಅವರು (ವಿಸ್ವಾಸಂ) ಹೇಳಿದ್ದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಸುಲ್ಲಿವಾನ್ ಶ್ವೇತಭವನದ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯಿಸಿದ್ದಾರೆ.

COVID
COVID
author img

By

Published : Jun 8, 2021, 11:39 AM IST

ಜಿನೀವಾ: ಕೋವಿಡ್​-19 ಮೂಲದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ವಿಶ್ವ ಸ್ವಾಸ್ಥ್ಯ ಸಂಸ್ಥೆ ಚೀನಾವನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತುರ್ತು ಕಾರ್ಯಕ್ರಮದ ನಿರ್ದೇಶಕ ಮೈಕ್ ರಯಾನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವಿಷಯದಲ್ಲಿ ಯಾರನ್ನೂ ಒತ್ತಾಯಿಸುವ ಅಧಿಕಾರ ವಿಸ್ವಾಸಂಗೆ ಇಲ್ಲ ಎಂದು ಅಲ್ ಜಜೀರಾ ವರದಿ ಮಾಡಿದೆ.

ಏತನ್ಮಧ್ಯೆ, ಅವರು ಸದಸ್ಯ ರಾಷ್ಟ್ರಗಳಿಂದ ಸಂಪೂರ್ಣ 'ಸಹಕಾರ' ನಿರೀಕ್ಷಿಸಿದರು. ಆ ಪ್ರಯತ್ನದಲ್ಲಿ ನಮ್ಮ ಎಲ್ಲಾ ಸದಸ್ಯ ರಾಷ್ಟ್ರಗಳ ಸಹಕಾರ, ಪೂರಕ ಮತ್ತು ಬೆಂಬಲವನ್ನು ನಾವು ಸಂಪೂರ್ಣವಾಗಿ ನಿರೀಕ್ಷಿಸುತ್ತೇವೆ ಎಂದು ರಿಯಾನ್ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಮಾರ್ಗಸೂಚಿ ಅನುಸರಿಸುವ ಪ್ರಯತ್ನ ಮಾಡುತ್ತಿದ್ದೇವೆ: ಕೇಂದ್ರಕ್ಕೆ ಟ್ವಿಟರ್ ಭರವಸೆ

ವೈರಸ್ ಎಲ್ಲಿ ಹೊರಹೊಮ್ಮಿತು ಎಂಬುದನ್ನು ಅರ್ಥ ಮಾಡಿಕೊಳ್ಳಲು ಅಧ್ಯಯನಗಳು ಅಗತ್ಯವೆಂದು ಅವರು ಪ್ರಸ್ತಾಪಿಸಿದರು. ಮತ್ತೊಂದೆಡೆ, ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್, ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಸಮನ್ವಯದಿಂದ ವಾಷಿಂಗ್ಟನ್ ಚೀನಾವನ್ನು ಪಾರದರ್ಶಕ ಮತ್ತು ಕೋವಿಡ್​-19ನ ಮೂಲದ ಮಾಹಿತಿಯೊಂದಿಗೆ ಮುಂದುವರೆಸಲಿದೆ ಎಂದು ಹೇಳಿದ್ದಾರೆ.

ಅದೇ ಸಮಯದಲ್ಲಿ, ಅಮೆರಿಕ ತನ್ನದೇ ಆದ ವಿಮರ್ಶೆ ಮತ್ತು ಪ್ರಕ್ರಿಯೆ ಸಹ ಪ್ರಾರಂಭಿಸುತ್ತದೆ. ನಾವು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಸಮನ್ವಯದಿಂದ ಒತ್ತಡ ಮುಂದುವರಿಸಲಿದ್ದೇವೆ. ಚೀನಾ ಪಾರದರ್ಶಕವಾಗಿರಬೇಕು, ಡೇಟಾ ಮತ್ತು ಮಾಹಿತಿಯೊಂದಿಗೆ ಮುನ್ನಡೆಯಲಿದೆ. ನಾವು ಮುಂದೆ ಹೋಗುವುದಿಲ್ಲ ಎಂದು ಅವರು (ವಿಸ್ವಾಸಂ) ಹೇಳಿದ್ದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಸುಲ್ಲಿವಾನ್ ಶ್ವೇತಭವನದ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಅಧ್ಯಕ್ಷ ಜೋ ಬೈಡನ್ ತಮ್ಮ ಚೊಚ್ಚಲ ವಿದೇಶ ಪ್ರವಾಸ ತೆರಳವು ಅಧಿಕಾರ ವಹಿಸಿಕೊಂಡ ನಂತರ, ಈ ವಾರದ ನಂತರ ವಿದೇಶಿ ನಾಯಕರೊಂದಿಗೆ ಚರ್ಚೆಯ ವಿಷಯಗಳಲ್ಲಿ ಇದು ಕೂಡ ಒಂದು ಎಂದು ಹೇಳಿದರು.

ವೈರಸ್ ಪ್ರಾಣಿಗಳಿಂದ ಬಂದಿದೆ, ಬಹುಶಃ ಬಾವಲಿಗಳಿಂದ ಶುರುವಾಗಿ ಮನುಷ್ಯರಿಗೆ ಅಥವಾ ಚೀನಾದ ವುಹಾನ್‌ನಲ್ಲಿನ ಪ್ರಯೋಗಾಲಯದಿಂದ ಲೀಕ್​ ಆಗಿರಬಹುದು ಎಂದು ಸ್ಪರ್ಧಾತ್ಮಕ ಸಿದ್ಧಾಂತಗಳಿವೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಹಲವು ಪ್ರಮುಖ ವಿಜ್ಞಾನಿಗಳು ವೈರಸ್‌ನ ಉಗಮದ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಕರೆ ನೀಡಿದ ನಂತರ ವುಹಾನ್ ಲ್ಯಾಬ್ ಸೋರಿಕೆಯು ಇತ್ತೀಚೆಗೆ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ.

ವೈರಸ್ ಆಕಸ್ಮಿಕವಾಗಿ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂಬ ಊಹೆಯನ್ನು ವಿಜ್ಞಾನಿಗಳು ಕೊರೊನಾ ವೈರಸ್​ನ ಆರಂಭಿಕ ಹಂತಗಳಲ್ಲಿ ಕಡೆಗಣಿಸಿದ್ದರು. ಕೊರೊನಾ ವೈರಸ್​ ಹರಡಲು ಲ್ಯಾಬ್ ಕಾರಣ ಎಂಬುದನ್ನು ಚೀನಾ ಪದೇ ಪದೆ ನಿರಾಕರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.