ETV Bharat / international

ವರ್ಚುವಲ್‌ ಅಧಿವೇಶನದ ವೇಳೆ ಬೆತ್ತಲಾಗಿ ಕಾಣಿಸಿಕೊಂಡ ಸಂಸತ್‌ ಸದಸ್ಯ - ವಿಲಿಯಂ ಅಮೋಸ್

2015ರಿಂದ ಪಾಂಟಿಯಾಕ್‌ನ ಕ್ವಿಬೆಕ್ ಜಿಲ್ಲೆಯನ್ನು ಪ್ರತಿನಿಧಿಸಿರುವ ವಿಲಿಯಂ ಅಮೋಸ್, ವರ್ಚುವಲ್‌ ಸಭೆಯ ವೇಳೆ ಸಂಪೂರ್ಣವಾಗಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ.

ವಿಲಿಯಂ ಅಮೋಸ್
ವಿಲಿಯಂ ಅಮೋಸ್
author img

By

Published : Apr 15, 2021, 1:17 PM IST

ಒಟ್ಟಾವಾ: ಕೆನಡಾದ ಸಂಸತ್ತಿನ ಸದಸ್ಯರೊಬ್ಬರು ಹೌಸ್ ಆಫ್ ಕಾಮನ್ಸ್‌ನ ವರ್ಚುವಲ್​ ಸಭೆಯಲ್ಲಿ ಸಂಪೂರ್ಣ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, ಇದರಿಂದ ಸಹದ್ಯೋಗಿ ಸದಸ್ಯರು ಮುಜುಗರ ಅನುಭವಿಸಿದರು.

2015ರಿಂದ ಪಾಂಟಿಯಾಕ್‌ನ ಕ್ವಿಬೆಕ್ ಜಿಲ್ಲೆ ಪ್ರತಿನಿಧಿಸಿರುವ ವಿಲಿಯಂ ಅಮೋಸ್, ತನ್ನ ಸಹ ಶಾಸಕರಿದ್ದ ವರ್ಚುವಲ್‌ ಸಭೆಯ ಪರದೆಯ ಮೇಲೆ ಸಂಪೂರ್ಣವಾಗಿ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಕೆನಡಾದ ಬಹುತೇಕ ಶಾಸಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿವೇಶನಗಳಲ್ಲಿ ಭಾಗವಹಿಸುತ್ತಿದ್ದಾರೆ.

ಕೆನಡಿಯನ್ ಪ್ರೆಸ್ ಪಡೆದ ಸ್ಕ್ರೀನ್‌ಶಾಟ್​ನಲ್ಲಿ ಅಮೋಸ್ ಅವರು ಕೆನಡಿಯನ್ ಧ್ವಜಗಳ ನಡುವೆ ಮೇಜಿನ ಹಿಂದೆ ನಿಂತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಆತನ ಖಾಸಗಿ ಭಾಗಗಳನ್ನು ಒಂದು ಕೈಯಲ್ಲಿ ಮೊಬೈಲ್ ಫೋನ್​ನಿಂದ ಮರೆಮಾಡಲಾಗಿದೆ.

ಇದನ್ನೂ ಓದಿ: ಮಂಗಳನ ಅಂಗಳದಲ್ಲಿ ಮೊದಲ ಹೆಲಿಕಾಪ್ಟರ್​ ಹಾರಾಟ ದಿನಾಂಕ ಮುಂದೂಡಿದ ನಾಸಾ!

ಉದ್ದೇಶಪೂರ್ವಕವಲ್ಲದ ಘಟನೆಗೆ ಹೌಸ್ ಆಫ್ ಕಾಮನ್ಸ್ ಸಹೋದ್ಯೋಗಿಗಳಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನಿಸ್ಸಂಶಯವಾಗಿ, ಇದು ತಪ್ಪು ಮತ್ತು ಅದು ಮತ್ತೆಂದೂ ಸಂಭವಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

  • I made a really unfortunate mistake today & obviously I’m embarrassed by it. My camera was accidentally left on as I changed into work clothes after going for a jog. I sincerely apologize to all my colleagues in the House. It was an honest mistake + it won’t happen again.

    — Will Amos (@WillAAmos) April 14, 2021 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.