ಒಟ್ಟವಾ (ಕೆನಡಾ) : ಕೆನಡಾದ 11 ಬಾರಿಯ ವಿಶ್ವ ಚಾಂಪಿಯನ್ ಹಾಗೂ ಕ್ಯಾನೊಯಿಸ್ಟ್ ಲಾರೆನ್ಸ್ ವಿನ್ಸೆಂಟ್ ಲ್ಯಾಪಾಯಿಂಟ್ ಉದ್ದೀಪನ ಮದ್ದು ಸೇವನೆ ಆರೋಪದಿಂದ ಮುಕ್ತರಾಗಿದ್ದಾರೆ.
27 ವರ್ಷದ ಕ್ರೀಡಾಪಟು ಲಾರೆನ್ಸ್ ವಿನ್ಸೆಂಟ್, ಕಳೆದ ಜುಲೈನಲ್ಲಿ ನಡೆದ ಅಂತಾರಾಷ್ಟ್ರೀಯ ಕ್ಯಾನೋ ಫೆಡರೇಷನ್ (ಐಸಿಎಫ್) ಕ್ಯಾನೋ ಸ್ಪ್ರಿಂಟ್ ವಿಶ್ವ ಚಾಂಪಿಯನ್ಶಿಪ್ನ ಹಿಂದಿನ ದಿನದಂದು ನಡೆದ ಡ್ರಗ್ಸ್ ಸೇವನೆ ಪರೀಕ್ಷೆಯಲ್ಲಿ ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿತ್ತು. ಆ ಬಳಿಕ ಅವರಿಗೆ ನಾಲ್ಕು ವರ್ಷಗಳ ನಿಷೇಧ ಶಿಕ್ಷೆ ನೀಡಲಾಗಿತ್ತು. ಮತ್ತೆ ತಪ್ಪಿತಸ್ಥರೆಂದು ಸಾಬೀತಾಗಿದ್ದಲ್ಲಿ ಜಪಾನ್ನಲ್ಲಿ ನಡೆಯಲಿರುವ ಬೇಸಿಗೆಯ ಒಲಿಂಪಿಕ್ಸ್ನಿಂದಲೂ ಹೊರಗಿಡುವ ಸಾಧ್ಯತೆ ಇತ್ತು.
ಇದರ ನಡುವೆಯೂ, ಕೆನಡಾದ ಚಾಂಪಿಯನ್ ತಮ್ಮ ದೇಹದಲ್ಲಿ ಪತ್ತೆಯಾದ ಸ್ಟೀರಾಯ್ಡ್ನಂತಹ ವಸ್ತು, ಅವರ ಮಾಜಿ ಗೆಳೆಯನೊಂದಿಗಿನ ದೈಹಿಕ ಸಂಪರ್ಕದಿಂದ ಬಂದಿದೆ ಎಂದು ನ್ಯಾಯಮಂಡಳಿ ಮುಂದೆ ಸಾಬೀತುಪಡಿಸುವಲ್ಲಿ ಸಫಲರಾದ ನಂತರ ಕಠಿಣ ಶಿಕ್ಷೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.