ETV Bharat / international

ಟ್ರಂಪ್-ಬಿಡೆನ್ ಕೊನೆಯ ಡಿಬೇಟ್ ಇಂದು; ಮಾತಿನ ಸಮರ ಗೆಲ್ಲುವವರಾರು?

ಜೋ ಬಿಡೆನ್ ಪುತ್ರ ಹಂಟರ್ನ ಅಪರಾಧಿ ಕೃತ್ಯಗಳ ಬಗ್ಗೆ ಟ್ರಂಪ್ ಹಾಗೂ ಅವರ ಸಹವರ್ತಿಗಳು ಮಾಧ್ಯಮಗಳ ಮೂಲಕ ಜೋರಾಗಿಯೇ ಪ್ರಚಾರ ಮಾಡುತ್ತಿದ್ದಾರೆ. ಈ ಬಾರಿಯೂ ಟ್ರಂಪ್ ಇದೇ ವಿಷಯವನ್ನು ತಮ್ಮ ಚರ್ಚೆಯ ಕೇಂದ್ರ ವಿಷಯವನ್ನಾಗಿ ಮಾಡಿಕೊಳ್ಳಬಹುದು ಎಂದು ಬಿಡೆನ್ ಅತ್ಯಾಪ್ತರು ಹೇಳುತ್ತಿದ್ದಾರೆ.

ಟ್ರಂಪ್-ಬಿಡೆನ್ ಕೊನೆಯ ಡಿಬೇಟ್ ಇಂದು; ಮಾತಿನ ಸಮರ ಗೆಲ್ಲುವವರಾರು?
ಟ್ರಂಪ್-ಬಿಡೆನ್ ಕೊನೆಯ ಡಿಬೇಟ್ ಇಂದು; ಮಾತಿನ ಸಮರ ಗೆಲ್ಲುವವರಾರು?
author img

By

Published : Oct 22, 2020, 11:22 PM IST

ನಾಶವಿಲ್ಲೆ (ಅಮೆರಿಕ): ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಹಾಗೂ ಅವರ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಮಧ್ಯೆ ಎರಡನೇ ಹಾಗೂ ಅಂತಿಮ ಹಂತದ ಬಹಿರಂಗ ಅಧ್ಯಕ್ಷೀಯ ಸಂವಾದವು ಭಾರತೀಯ ಕಾಲಮಾನದ ಪ್ರಕಾರ ಶುಕ್ರವಾರ ಬೆಳಗ್ಗೆ 6.30ಕ್ಕೆ ನಡೆಯಲಿದೆ. ಚುನಾವಣೆಗೆ ಇನ್ನೇನು ಕೇವಲ 12 ದಿನಗಳು ಬಾಕಿ ಇರುವಾಗ ನಡೆಯಲಿರುವ ಈ 90 ನಿಮಿಷದ ಪ್ರೈಮ್​ ಟೈಮ್ ಸಂವಾದವು ವಿಶ್ವಾದ್ಯಂತ ಸಾಕಷ್ಟು ಕುತೂಹಲ ಕೆರಳಿಸಿದೆ.

ಶುಕ್ರವಾರದ ಡಿಬೇಟ್​ನ ಮುಖ್ಯಾಂಶಗಳು ಏನಾಗಿರಬಹುದು? ಯಾವೆಲ್ಲ ವಿಷಯಗಳು ಪ್ರಾಮುಖ್ಯತೆ ಪಡೆದಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಚುನಾವಣೆಯ ದಿಕ್ಕನ್ನು ಬದಲಿಸಬಲ್ಲರಾ ಟ್ರಂಪ್​?

ಪ್ರಸ್ತುತ ಪರಿಸ್ಥಿತಿಯನ್ನಾಧರಿಸಿದ ಡಿಬೇಟ್​ ನಡೆಸಲು ಸದ್ಯದ ಪರಿಸ್ಥಿತಿಯಲ್ಲಿ ಟ್ರಂಪ್​ಗೆ ಸಾಧ್ಯವಿಲ್ಲ. ರಾಷ್ಟ್ರ ಮಟ್ಟದ ಕೆಲ ಸಮೀಕ್ಷೆಗಳ ಪ್ರಕಾರ ಬಿಡೆನ್ ಎದುರು ಟ್ರಂಪ್​ ಸೋಲಲಿದ್ದಾರೆ ಎನ್ನಲಾಗಿದೆ. ಟ್ರಂಪ್​ ಅವರ ಕೆಲವು ವಿಶ್ವಾಸಿಕರಿಗೇ ಅವರ ಗೆಲುವಿನ ಬಗ್ಗೆ ಖಾತರಿ ಉಳಿದಿಲ್ಲ. ಹೀಗಾಗಿ ಚುನಾವಣೆಯ ದಿಕ್ಕನ್ನು ಮತ್ತೆ ತನ್ನೆಡೆಗೆ ತಿರುಗಿಸಿಕೊಳ್ಳಲು ಟ್ರಂಪ್ ಅವರಿಗೆ ಇದೊಂದು ಅತ್ಯಂತ ನಿರ್ಣಾಯಕ ಹಾಗೂ ಕೊನೆಯ ಅವಕಾಶವಾಗಿದೆ. ಕೋಟ್ಯಂತರ ಅಮೆರಿಕನ್ನರು ಅತ್ಯಂತ ಕುತೂಹಲದಿಂದ ಟ್ರಂಪ್​ ಅವರ ಮಾತುಗಳನ್ನು ಕೇಳಲಿರುವುದು ಸತ್ಯ.

ಟ್ರಂಪ್-ಬಿಡೆನ್ ಕೊನೆಯ ಡಿಬೇಟ್ ಇಂದು; ಮಾತಿನ ಸಮರ ಗೆಲ್ಲುವವರಾರು?
ಟ್ರಂಪ್-ಬಿಡೆನ್ ಕೊನೆಯ ಡಿಬೇಟ್ ಇಂದು; ಮಾತಿನ ಸಮರ ಗೆಲ್ಲುವವರಾರು?

ಕಳೆದ ತಿಂಗಳು ನಡೆದಿದ್ದ ಪ್ರಥಮ ಡಿಬೇಟ್​ನಲ್ಲಿ ಟ್ರಂಪ್​ ತಮಗೆ ದೊರಕಿದ್ದ ಸದವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ವಿಫಲರಾದರು ಎಂದು ವ್ಯಾಖ್ಯಾನಿಸಲಾಗಿದೆ. ಇನ್ನು ಎರಡನೇ ಬಾರಿ ಡಿಬೇಟ್​ ಏರ್ಪಡಿಸುವ ನಿರ್ಧಾರವನ್ನು ಆಯೋಜಕರು ಕೈಗೊಂಡಿದ್ದರೂ ಟ್ರಂಪ್​ ಇದರಲ್ಲಿ ಭಾಗವಹಿಸಲು ನಿರಾಕರಿಸಿ ಮತ್ತೊಂದು ಅವಕಾಶವನ್ನು ಕೈಚೆಲ್ಲಿದರು.

ಈಗಿನ ಪರಿಸ್ಥಿತಿಯಲ್ಲಿ ಟ್ರಂಪ್​ಗೆ ಅತ್ಯಾಕರ್ಷಕ ಚುನಾವಣಾ ವಿಷಯವೊಂದು ಜರೂರಾಗಿ ಬೇಕಾಗಿದೆ. ಜೊತೆಗೆ ಬಿಡೆನ್​ ಅವರ ದೌರ್ಬಲ್ಯಗಳನ್ನು ಜನತೆಗೆ ಎತ್ತಿ ತೋರಿಸಬೇಕಿದೆ.

ಮ್ಯೂಟ್​ ಬಟನ್​ ಇರುವುದರಿಂದ ಡಿಬೇಟ್​ ಅತ್ಯಂತ ಸನ್ನಡತೆಯದಾಗಿರಲಿದೆಯಾ?

ಈ ಬಾರಿ ಡಿಬೇಟ್​ನಲ್ಲಿ ಮ್ಯೂಟ್​ ಬಟನ್​ ಅಂದರೆ ಸಂವಾದದ ಕೆಲ ಭಾಗವು ಯಾರಿಗೂ ಕೇಳದಂತೆ ಮಾಡುವ ಬಟನ್​ ವ್ಯವಸ್ಥೆಯ ಬಗ್ಗೆ ಎಲ್ಲರೂ ತಲೆಕೆಡಿಸಿಕೊಂಡಿದ್ದಾರೆ. ಆದರೆ ಈ ಮ್ಯೂಟ್​ ಬಟನ್​ನಿಂದ ಅಂಥ ಹೇಳಿಕೊಳ್ಳುವ ಬದಲಾವಣೆಯೇನೂ ಆಗಲಾರದು ಎನ್ನುತ್ತಾರೆ ವಿಶ್ಲೇಷಕರು.

ಮೊದಲ ಡಿಬೇಟ್​ ಸಂದರ್ಭದಲ್ಲಿ ಎದುರಾಳಿಯ ಮಾತಿಗೆ ಪದೇ ಪದೇ ಟ್ರಂಪ್ ಅಡ್ಡಿಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಬೇಟ್ ಆಯೋಜಕರು ಈ ಬಾರಿ ಮ್ಯೂಟ್​ ಬಟನ್ ವ್ಯವಸ್ಥೆ ಮಾಡಿದ್ದು, 6 ವಿಷಯಗಳ ಡಿಬೇಟ್​ ಮೇಲಿನ 2 ನಿಮಿಷದ ಉತ್ತರ ನೀಡುವ ಸಮಯದಲ್ಲಿ ಎದುರಾಳಿಯ ಮಾತುಗಳು ಕೇಳದಂತೆ ಮ್ಯೂಟ್ ಮಾಡಲಾಗುವುದು. ಈ 2 ನಿಮಿಷ ಬಿಟ್ಟು ಇನ್ನುಳಿದ 15 ನಿಮಿಷ ಬಹಿರಂಗ ಚರ್ಚೆಯ ಅವಧಿಯಾಗಿರುತ್ತದೆ.

ಕೊರೊನಾ ವೈರಸ್​ ಬಿಕ್ಕಟ್ಟಿನ ಬಗ್ಗೆ ಟ್ರಂಪ್​ ಬಳಿ ಉತ್ತರವಿದೆಯಾ?

ತಮಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ ಅಧ್ಯಕ್ಷ ಟ್ರಂಪ್​ ಕೊರೊನಾ ವೈರಸ್​ ಬಿಕ್ಕಟ್ಟಿನ ಬಗ್ಗೆ ಮಾತನಾಡಲೇಬೇಕಿದೆ. ಕೊರೊನಾ ವೈರಸ್​ ಬಿಕ್ಕಟ್ಟಿನ ಸನ್ನಿವೇಶವು ನಿಜವಾಗಿಯೂ ತಮ್ಮ ಅಂಕುಶದಲ್ಲಿದೆ ಎಂಬ ವಿಷಯವನ್ನು ಟ್ರಂಪ್​ ಮತದಾರರಿಗೆ ಹೇಗೆ ಮನವೊಲಿಕೆ ಮಾಡಲಿದ್ದಾರೆ ಎಂಬುದು ಕಾದು ನೋಡುವ ಸಂಗತಿಯಾಗಿದೆ.

ತಮ್ಮ ಮಗನ ವಿರುದ್ಧದ ಆರೋಪಗಳಿಗೆ ಬಿಡೆನ್ ಪ್ರತಿಕ್ರಿಯೆ ಏನಾಗಿರಬಹುದು?

ಜೋ ಬಿಡೆನ್​ ಪುತ್ರ ಹಂಟರ್​ನ ಅಪರಾಧಿ ಕೃತ್ಯಗಳ ಬಗ್ಗೆ ಟ್ರಂಪ್​ ಹಾಗೂ ಅವರ ಸಹವರ್ತಿಗಳು ಮಾಧ್ಯಮಗಳ ಮೂಲಕ ಜೋರಾಗಿಯೇ ಪ್ರಚಾರ ಮಾಡುತ್ತಿದ್ದಾರೆ. ಈ ಬಾರಿಯೂ ಟ್ರಂಪ್​ ಇದೇ ವಿಷಯವನ್ನು ತಮ್ಮ ಚರ್ಚೆಯ ಕೇಂದ್ರ ವಿಷಯವನ್ನಾಗಿ ಮಾಡಿಕೊಳ್ಳಬಹುದು ಎಂದು ಬಿಡೆನ್ ಅತ್ಯಾಪ್ತರು ಹೇಳುತ್ತಿದ್ದಾರೆ.

ಹಂಟರ್​ನ ಡ್ರಗ್​ ಚಟವನ್ನು ಟ್ರಂಪ್​ ಅತ್ಯಂತ ಕರಾರುವಾಕ್ಕಾಗಿಯೇ ಕಳೆದ ಬಾರಿ ಪ್ರಚಾರ ಮಾಡುವಲ್ಲಿ ಸಫಲರಾಗಿದ್ದರು. ಆದರೆ ನಂತರ ತಂದೆ ಬಿಡೆನ್ ತನ್ನ ಮಗನನ್ನು ಬೆಂಬಲಿಸಿ ಹೇಳಿಕೆ ನೀಡಿ, ತನ್ನ ಮಗ ಡ್ರಗ್ ದಾಸನಾಗಿದ್ದು ನಿಜವಾದರೂ ಅದರಿಂದ ಹೊರಬರಲು ಪ್ರಾಮಾಣಿಕ ಪ್ರಯತ್ನವನ್ನೇ ಮಾಡುತ್ತಿದ್ದಾನೆ ಎಂದು ಹೇಳಿ ಸಹಾನುಭೂತಿ ಗಳಿಸಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.