ETV Bharat / international

ಹುತಾತ್ಮರಾದ ಭಾರತೀಯ ಯೋಧರ ಧೈರ್ಯವನ್ನು ಎಂದೂ ಮರೆಯಲು ಸಾಧ್ಯವಿಲ್ಲ: ಅಮೆರಿಕ ಸಂತಾಪ - ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್​ ಪೊಂಪಿಯೊ

ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಅಮೆರಿಕ ಸಂತಾಪ ಸೂಚಿಸಿದೆ.

Bravery of Indian soldiers will not be forgotten
ಹುತಾತ್ಮ ಸೈನಿಕರಿಗೆ ಅಮೆರಿಕ ಸಂತಾಪ
author img

By

Published : Jun 19, 2020, 5:44 PM IST

ವಾಷಿಂಗ್ಟನ್: ಪೂರ್ವ ಲಡಾಖ್‌ನಲ್ಲಿ ಚೀನಾದ ಸೈನಿರೊಂದಿಗೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಅಮೆರಿಕ ಸಂತಾಪ ಸೂಚಿಸಿದ್ದು, ಅವರ ಧೈರ್ಯವನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದಿದೆ.

  • We extend our deepest condolences to the people of India for the lives lost as a result of the recent confrontation with China. We will remember the soldiers' families, loved ones, and communities as they grieve.

    — Secretary Pompeo (@SecPompeo) June 19, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್​ ಪೊಂಪಿಯೊ, ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಸಂತಾಪ ಸೂಚಿಸುತ್ತೇವೆ. ಹುತಾತ್ಮ ಯೋಧರ ಕುಟುಂಬಗಳು ಹಾಗೂ ಅವರ ಪ್ರೀತಿ ಪಾತ್ರರನ್ನು ನೆನಪಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಗಾಲ್ವಾನ್​ನಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ. ಅವರ ಧೈರ್ಯವನ್ನೂ ಮರೆಯಲಾಗುವುದಿಲ್ಲ ಎಂದು ಭಾರತದ ಅಮೆರಿಕ ರಾಯಭಾರಿ ಕೆನ್ನೆತ್ ಜಸ್ಟರ್ ಟ್ವೀಟ್​ ಮಾಡಿದ್ದಾರೆ.

  • The U.S. Mission in India sends our heartfelt condolences to the families of the soldiers who were lost at Galwan. Their bravery and courage will not be forgotten. #USIndia https://t.co/gtGR4gSxoG

    — Ken Juster (@USAmbIndia) June 19, 2020 " class="align-text-top noRightClick twitterSection" data=" ">

ಗಾಲ್ವಾನ್​ ಕಣಿವೆಯಲ್ಲಿ ಸೋಮವಾರ ತಡರಾತ್ರಿ ಚೀನಾದ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಕರ್ನಲ್ ಸೇರಿದಂತೆ ಇಪ್ಪತ್ತು ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.