ವಾಷಿಂಗ್ಟನ್: 169 ಜನರನ್ನು ಬಲಿಪಡೆದ ಕಾಬೂಲ್ ಆತ್ಮಾಹುತಿ ದಾಳಿ ನಡೆಸಿದ್ದ ದಾಳಿಕೋರ 25 ಪೌಂಡ್ (ಸುಮಾರು 11 ಕೆಜಿ) ತೂಕದ ಸ್ಫೋಟಕಗಳನ್ನು ಹೊತ್ತೊಯ್ದಿದ್ದನು ಎಂದು ಅಮೆರಿಕದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಆತ್ಮಾಹುತಿ ದಾಳಿ ನಡೆಸುವ ವ್ಯಕ್ತಿ 5 ರಿಂದ 10 ಪೌಂಡ್ ತೂಕದ ಸ್ಫೋಟಕವನ್ನ ತನ್ನೊಂದಿಗೆ ಕಟ್ಟಿಕೊಂಡು ದಾಳಿ ನಡೆಸುತ್ತಾನೆ. ಆದರೆ ಕಾಬೂಲ್ ಏರ್ಪೋರ್ಟ್ನಲ್ಲಿ ಗುರುವಾರ ಬೃಹತ್ ಪ್ರಮಾಣದ ಸ್ಫೋಟಕದೊಂದಿಗೆ ದಾಳಿ ನಡೆದಿತ್ತು. ಇದು ವಿಮಾನ ನಿಲ್ದಾಣದ ಗೇಟ್ ಒಳಗೆ ಹಾಗೂ ಹೊರಗಿದ್ದ ಅಮೆರಿಕದ 13 ಸೈನಿಕರು, ಆಫ್ಘಾನ್ ಬಿಟ್ಟು ಪಲಾಯನವಾಗಲು ನಿಂತಿದ್ದ 169ಕ್ಕೂ ಹೆಚ್ಚು ಅಫ್ಘಾನಿಸ್ತಾನದ ಪ್ರಜೆಗಳನ್ನು ಬಲಿ ತೆಗೆದುಕೊಂಡಿತು. ಭೀಕರ ದಾಳಿ ಮಾಡಿದ್ದು ತಾವೇ ಎಂದು ಕೂಡ ಉಗ್ರ ಸಂಘಟನೆ ಐಸಿಸ್-ಕೆ ಒಪ್ಪಿಕೊಂಡಿದೆ.
ಇದನ್ನೂ ಓದಿ: Air strike: ಅಫ್ಘಾನ್‌ನಲ್ಲಿ ಅಮೆರಿಕ ಸೇನೆ ಪ್ರತಿದಾಳಿ, ಕಾಬೂಲ್ ದಾಳಿಯ ಸಂಚುಕೋರ ಬಲಿ
ಪ್ರತೀಕಾರ ತೀರಿಸಿಕೊಂಡ ಯುಸ್
ತನ್ನ ಸೈನಿಕರ ಜೀವ ತೆಗೆದ ಕಾಬೂಲ್ ಸ್ಫೋಟಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದ ಅಮೆರಿಕ, ಕೇವಲ 48 ಗಂಟೆಗಳಲ್ಲಿ ಅಫ್ಘಾನಿಸ್ತಾನದ ನಂಗಾಹಾರ್ ಪ್ರಾಂತ್ಯದಲ್ಲಿ ವೈಮಾನಿಕ ದಾಳಿ ನಡೆಸಿದ್ದು, ದಾಳಿಯ ಸಂಚುಕೋರನನ್ನು ಕೊಲ್ಲಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.