ವಾಷಿಂಗ್ಟನ್: ಮೈಕ್ರೋಸಾಫ್ಟ್ ಸಂಸ್ಥಾಪಕ, ಜಗತ್ತಿನ ಸಿರಿವಂತ ಬಿಲ್ ಗೇಟ್ಸ್ ಮತ್ತು ಅವರ ಪತ್ನಿ ಮಿಲಿಂದಾ ಅವರ 27 ವರ್ಷದ ವೈವಾಹಿಕ ಬದುಕು ವಿಚ್ಛೇದನದಲ್ಲಿ ಅಂತ್ಯವಾಗುತ್ತಿದೆ.
ತಾವು ವಿಚ್ಛೇದನ ಪಡೆದುಕೊಳ್ಳುತ್ತಿದ್ದೇವೆ ಎಂದು ಬಿಲ್ ಗೇಟ್ಸ್ ಮತ್ತು ಮಿಲಿಂದಾ ಅವರು ಸೋಮವಾರ ಘೋಷಿಸಿದ್ದಾರೆ. ಈ ಮೂಲಕ ಜಗತ್ತಿನ ಶ್ರೀಮಂತ ದಂಪತಿ ವೈವಾಹಿಕವಾಗಿ ಬೇರೆಯಾಗುತ್ತಿದ್ದಾರೆ.
ಟ್ವಿಟರ್ನಲ್ಲಿ ಈ ಬಗ್ಗೆ ಘೋಷಿಸಿರುವ ಇವರು, ಬಿಲ್ ಮತ್ತು ಮಿಲಿಂದಾ ಗೇಟ್ಸ್ ಫೌಂಡೇಷನ್ನಲ್ಲಿ ನಾವು ಒಟ್ಟಿಗೆ ನಮ್ಮ ಸೇವೆ ಮುಂದುವರಿಸುತ್ತೇವೆ ಎಂದಿದ್ದಾರೆ.
ಸಾಕಷ್ಟು ಯೋಚಿಸಿ, ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ. 27 ವರ್ಷಗಳಲ್ಲಿ ಅದ್ಭುತವಾದ ಮೂವರು ಮಕ್ಕಳನ್ನು ಬೆಳೆಸಿದ್ದೇವೆ, ಜೊತೆಗೆ ವಿಶ್ವದ ಜನರ ಆರೋಗ್ಯ ಮತ್ತು ಅವರ ಉತ್ತಮ ಜೀವನಕ್ಕಾಗಿ ಫೌಂಡೇಷನ್ ಕಟ್ಟಿದ್ದೇವೆ. ಸದ್ಯ ವೈವಾಹಿಕ ಬಂಧದಿಂದ ಬೇರೆಯಾಗುತ್ತಿದ್ದೇವೆ. ಆದ್ರೆ ಫೌಂಡೇಷನ್ನಲ್ಲಿ ನಮ್ಮ ಸೇವೆ ಒಟ್ಟಿಗೆ ಮುಂದುವರಿಯಲಿದೆ. ಆದ್ರೆ ಇನ್ಮುಂದೆ ದಂಪತಿಯಾಗಿ ಒಟ್ಟಿಗೆ ಬೆಳೆಯುವುದರಲ್ಲಿ ನಂಬಿಕೆ ಇಲ್ಲ. ನಮಗೆ ನಮ್ಮ ಸ್ಪೇಸ್ ಬೇಕಿದೆ ಎಂದು ದಂಪತಿ ಟ್ವಿಟರ್ನಲ್ಲಿ ಜಂಟಿ ಹೇಳಿಕೆ ಪೋಸ್ಟ್ ಮಾಡಿದ್ದಾರೆ.
- — Bill Gates (@BillGates) May 3, 2021 " class="align-text-top noRightClick twitterSection" data="
— Bill Gates (@BillGates) May 3, 2021
">— Bill Gates (@BillGates) May 3, 2021