ವಾಷಿಂಗ್ಟನ್: ಉಕ್ರೇನ್ ಒಳಗೆ ನುಸುಳುವ ಪ್ರಯತ್ನ ಮುಂದುವರಿಸಿದರೆ ರಷ್ಯಾದ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸುವುದೂ ಸೇರಿದಂತೆ ಬಿಕ್ಕಟ್ಟನ್ನು ಕೊನೆಗೊಳಿಸಲು ಅಮೆರಿಕ ಸಿದ್ಧವಾಗಿದೆ ಎಂದು ಶ್ವೇತಭವನ ಶನಿವಾರ ಪ್ರಕಟಣೆಯಲ್ಲಿ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಉಕ್ರೇನ್ ಗಡಿಯುದ್ದಕ್ಕೂ ರಷ್ಯಾ ತನ್ನ ಲಕ್ಷಾಂತರ ಸೈನಿಕರನ್ನು ಜಮಾವಣೆ ಮಾಡಿದ್ದು, ಯಾವುದೇ ಸಂದರ್ಭದಲ್ಲಿಯೂ ಯುದ್ಧ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಶ್ವೇತಭವನ ಹೇಳಿದೆ.
ರಷ್ಯಾವು ಉಕ್ರೇನ್ ಮೇಲೆ ದಾಳಿ ಮಾಡಿದ್ರೆ ಸಾರ್ವಜನಿಕರು ಅಪಾರ ಪ್ರಮಾಣದ ಸಾವು-ನೋವುಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ರಷ್ಯಾ ವಿರುದ್ಧ ಕ್ರಮ ಕೈಗೊಳ್ಳಲಿವೆ. ಸಂಭವನೀಯ ಹಾನಿಗೆ ನಿರ್ಬಂಧಗಳನ್ನು ಹೇರಲಾಗುವುದು, ಜೊತೆಗೆ ವೆಚ್ಚಗಳನ್ನು ಭರಿಸಬೇಕಾಗುತ್ತದೆ ಎಂದು ಜೋ ಬೈಡನ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.