ವಾಷಿಂಗ್ಟನ್ : ಮಿಲಿಟರಿ ದಂಗೆಯ ಬಳಿಕ, ದ್ವಿಪಕ್ಷೀಯ ಒಪ್ಪಂದದಂತೆ ಮ್ಯಾನ್ಮಾರ್ ಸರ್ಕಾರ ನೀಡಲಿರುವ 42.4 ಮಿಲಿಯನ್ ಡಾಲರ್ ಸಹಾಯದ ಕುರಿತು ಮರು ಪರಿಶೀಲನೆ ನಡೆಸುವಂತೆ ಯುಎಸ್ ಅಧ್ಯಕ್ಷ ಜೋ ಬೈಡನ್ ಆದೇಶಿಸಿದ್ದಾರೆ.
ಹಾಗಿದ್ದರೂ, ಮ್ಯಾನ್ಮಾರ್ ಜನರ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಸುಧಾರಿಸಲು ನೇರ ಸಹಾಯ ನೀಡುವ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಆಹಾರ ಸುರಕ್ಷತೆ ವೃದ್ದಿಸುವ, ಸ್ವತಂತ್ರ ಮಾಧ್ಯಮವನ್ನು ಬೆಂಬಲಿಸುವ ಹಾಗೂ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿ ಮತ್ತು ಸಾಮರಸ್ಯ ಉತ್ತೇಜಿಸುವ ಸುಮಾರು 69 ಮಿಲಿಯನ್ ಮೊತ್ತದ ದ್ವಿಪಕ್ಷೀಯ ಕಾರ್ಯಕ್ರಮಕ್ಕೆ ಯುಎಸ್ ಬೆಂಬಲ ಮುಂದುವರೆಸಲಿದೆ.
ಓದಿ : ಶಾಂತಿ ಮಾತುಕತೆ ಸ್ಥಗಿತಗೊಂಡ ಬೆನ್ನಲ್ಲೇ ಆಫ್ಘನ್ನಲ್ಲಿ 90 ತಾಲಿಬಾನ್ ಉಗ್ರರ ಹತ್ಯೆ..
ಮ್ಯಾನ್ಮಾರ್ನಲ್ಲಿರುವ ನಿರ್ಬಂಧ ಮುಂದುವರೆಯಬೇಕಿಲ್ಲ. ಅಲ್ಲಿನ ಸೇನೆ 8 ನವೆಂಬರ್ 2021 ರ ಚುನಾವಣಾ ಫಲಿತಾಂಶಗಳನ್ನು ಗೌರವಿಸಬೇಕು ಮತ್ತು ಶೀಘ್ರದಲ್ಲಿಯೇ ಸಂಸತ್ ಕರೆಯಬೇಕು ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾಪ್ರಭುತ್ವದಿಂದ ಚುನಾಯಿತವಾದ ಸರ್ಕಾರಕ್ಕೆ ತಕ್ಷಣ ಅಧಿಕಾರವನ್ನು ಪುನಃ ಸ್ಥಾಪಿಸಲು ಮತ್ತು ಅನ್ಯಾಯವಾಗಿ ಬಂಧನಕ್ಕೊಳಗಾದ ರಾಜ್ಯ ಕೌನ್ಸಿಲರ್ ಆಂಗ್ ಸಾನ್ ಸೂಕಿ ಮತ್ತು ಅಧ್ಯಕ್ಷ ವಿನ್ ಮೈಂಟ್ ಸೇರಿದಂತೆ ಸರ್ಕಾರಿ ಮತ್ತು ರಾಜಕೀಯ ಅಧಿಕಾರಿಗಳನ್ನು ಬಿಡುಗಡೆ ಮಾಡಲು ಶ್ವೇತಭವನವು ಕರೆ ನೀಡಿದೆ.