ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಚೀನಾದ ಅಧ್ಯಕ್ಷ ಜಿನ್‌ಪಿಂಗ್ ಜೊತೆ ಫೋನ್ ಮೂಲಕ ಮಾತನಾಡಿದ್ದಾರೆ.
ಚೀನಾ ಅನುಸರಿಸುತ್ತಿರುವ ಅನೈತಿಕ ಆರ್ಥಿಕ ನೀತಿಗಳು ಮುಖ್ಯವಾಗಿ ಹಾಂಕಾಂಗ್ನಲ್ಲಿನ ದಬ್ಬಾಳಿಕೆ ಬಗ್ಗೆ ಮತ್ತು ಅಮೆರಿಕದ ಜನರ ಸುರಕ್ಷತೆ ಮತ್ತು ಹಿತಾಸಕ್ತಿಗಳು ಅವರ ಆದ್ಯತೆ ಕುರಿತು ಅಮೆರಿಕ ಅಧ್ಯಕ್ಷ ಬೈಡನ್ ಮತ್ತು ಜಿನ್‌ಪಿಂಗ್ ಜೊತೆ ಮಾತನಾಡಿದ್ದಾರೆ ಎಂದು ಶ್ವೇತಭವನ ಹೇಳಿದೆ.
ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಜಿನ್‌ಪಿಂಗ್ ಜೊತೆ ಮಾತನಾಡಿದ್ದಾರೆ. ಚೀನಾದ ಅನೈತಿಕ ಆರ್ಥಿಕ ನೀತಿಗಳು, ಹಾಂಕಾಂಗ್ನಲ್ಲಿ ದಬ್ಬಾಳಿಕೆ ಮತ್ತು ಕ್ಸಿನ್‌ಜಿಯಾಂಗ್‌ನಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯಂತಹ ಪ್ರಮುಖ ವಿಷಯಗಳನ್ನು ಬೈಡನ್ ಉಲ್ಲೇಖಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ.
ಕೊರೊನಾ ಸೋಂಕು ನಿಭಾಯಿಸುವುದು, ಜಾಗತಿಕ ಆರೋಗ್ಯ ಸುರಕ್ಷತೆ ಮತ್ತು ಹವಾಮಾನ ಬದಲಾವಣೆಯನ್ನು ಒಳಗೊಂಡಂತೆ ಅನೇಕ ವಿಷಯಗಳನ್ನು ಜಿನ್‌ಪಿಂಗ್ ಜೊತೆ ಬೈಡನ್ ಚರ್ಚಿಸಿದ್ದಾರೆಂದು ಶ್ವೇತಭವನ ಹೇಳಿದೆ.
ಚೀನಾ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಬಿಡೆನ್ ವಿಶೇಷ ಕಾರ್ಯಪಡೆ ಸ್ಥಾಪಿಸಿದ ಕೆಲವೇ ದಿನಗಳಲ್ಲಿ ಇಬ್ಬರ ನಡುವಿನ ಫೋನ್ ಸಂಭಾಷಣೆ ಇದಾಗಿದೆ.
ಚೀನಾದ ಜನರು ಆಚರಿಸುತ್ತಿರುವ ಲುನಾರ್ ಹೊಸ ವರ್ಷದ ಶುಭಾಶಯಗಳು ಎಂದು ತಿಳಿಸಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪರಸ್ಪರ ಸಹಕಾರದ ಬಗ್ಗೆ ಮಾತನಾಡಿದ್ದಾರೆ ಎಂದು ಶ್ವೇತಭವನ ಹೇಳಿದೆ.