ವಾಷಿಂಗ್ಟನ್: ಯುಎಸ್ ಮಿಲಿಟರಿಯಲ್ಲಿ ಸೇವೆ ಸಲ್ಲಿಸಲು ಎಲ್ಲ ಅರ್ಹ ಅಮೆರಿಕನ್ನರನ್ನು ಒಳಗೊಳ್ಳುವ ನೀತಿಯನ್ನು ತರುವ ಕಾರ್ಯನಿರ್ವಾಹಕ ಆದೇಶಕ್ಕೆ ಅಧ್ಯಕ್ಷ ಜೋ ಬಿಡನ್ ಸಹಿ ಹಾಕಿದ್ದಾರೆ. ಈ ಹಿಂದೆ ಮಾಜಿ ಅಧ್ಯಕ್ಷ ಟ್ರಂಪ್ ಆಡಳಿತವು ಪರಿಚಯಿಸಿದ್ದ ತೃತೀಯ ಲಿಂಗಿಗಳ ಮಿಲಿಟರಿ ಸೇವೆಗಳ ಮೇಲಿನ ನಿಷೇಧ ಪರಿಣಾಮಕಾರಿಯಾಗಿ ರದ್ದುಗೊಳಿಸಿತು ಎಂದು ಶ್ವೇತಭವನ ತಿಳಿಸಿದೆ.
ಅಧ್ಯಕ್ಷ ಬೈಡನ್ ಇಂದು ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದು ಯುನೈಟೆಡ್ ಸ್ಟೇಟ್ಸ್ನ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅರ್ಹರಾಗಿರುವ ಎಲ್ಲ ಅಮೆರಿಕನ್ನರಿಗೆ ಸಾಧ್ಯವಾಗುತ್ತದೆ ಎಂಬ ನೀತಿಯನ್ನು ನಿಗದಿಪಡಿಸುತ್ತದೆ. ಲಿಂಗಾಧಾರಿತ ಸೇವೆಗಳು ಎಂದೂ ಮುಖ್ಯವಾಗಲ್ಲ. ಮಿಲಿಟರಿಯಲ್ಲಿ ಅರ್ಹರಾಗಿರುವ ಎಲ್ಲ ಅಮೆರಿಕನ್ನರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ.
ಇದನ್ನು ಓದಿ: ಗಡಿಯಲ್ಲಿ ಶಾಂತಿ ಕಾಪಾಡಲು ನಮ್ಮ ಸೇನೆ ಬದ್ಧ, ಏಕಪಕ್ಷೀಯ ಕ್ರಮ ಬೇಡ : ಭಾರತಕ್ಕೆ ಚೀನಾ
ಪ್ರತ್ಯೇಕ ಹೇಳಿಕೆಯಲ್ಲಿ, ರಕ್ಷಣಾ ಇಲಾಖೆ ಕೂಡಲೇ ಬೈಡನ್‌ರ ಕಾರ್ಯನಿರ್ವಾಹಕ ಆದೇಶವನ್ನು ಜಾರಿಗೆ ತರಲು ಸಿದ್ಧವಾಗಿದೆ ಎಂದು ಶ್ವೇತಭವನ ಹೇಳಿದೆ.
"ತೃತೀಯ ಲಿಂಗಿಗಳಾಗಿ ಗುರುತಿಸಿಕೊಳ್ಳುವ ವ್ಯಕ್ತಿಗಳು ಮಿಲಿಟರಿಯಲ್ಲಿ ಸೇವೆ ಸಲ್ಲಿಸಲು ಅರ್ಹರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಇಲಾಖೆ ತಕ್ಷಣವೇ ಸೂಕ್ತ ನೀತಿ ಕ್ರಮ ತೆಗೆದುಕೊಳ್ಳುತ್ತದೆ" ಎಂದು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.
"ಮುಂದಿನ 60 ದಿನಗಳಲ್ಲಿ ಬದಲಾವಣೆಗಳನ್ನು ಕಾರ್ಯಗತಗೊಳಿಸಲು ಸೂಕ್ತವಾದ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುತ್ತಿರುವುದರಿಂದ ಇಲಾಖೆಯ ಹಿರಿಯ ನಾಗರಿಕ ಮತ್ತು ಮಿಲಿಟರಿ ಮುಖಂಡರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಆಸ್ಟಿನ್ ಹೇಳಿದರು.
ತೃತೀಯ ಲಿಂಗಿಗಳು ಅಧಿಕೃತವಾಗಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಲು ಒಬಾಮಾ ಆಡಳಿತವು 2016 ರಲ್ಲಿ ಅನುಮತಿ ನೀಡಿತು. ಆದರೆ 2017ರಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುಎಸ್ ಮಿಲಿಟರಿಯಲ್ಲಿ ಅವರಿಗೆ ಸೇವೆ ಸಲ್ಲಿಸಲು ಅನುಮತಿಸುವುದಿಲ್ಲ ಎಂದು ಹೇಳಿ ರದ್ದು ಮಾಡಿದ್ದರು.