ETV Bharat / international

ಟ್ರಂಪ್​, ಒಬಾಮ​ಗಿಂತ ನಿರಾಶ್ರಿತ ವಲಸಿಗರ ಅಮೆರಿಕ ಪ್ರವೇಶಾತಿ ಮಿತಿ ಹೆಚ್ಚಿಸಿದ ಬೈಡನ್ - ನಿರಾಶ್ರಿತರ ಸಂಖ್ಯೆ ಹೆಚ್ಚಿಸುವ ಬೈಡನ್ ಸರ್ಕಾರ

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರದಿಂದ ಹೊರಡುವ ಮುನ್ನ ನಿರಾಶ್ರಿತರ ಪ್ರವೇಶ ಶಿಬಿರವನ್ನು ಕೇವಲ 15,000ಕ್ಕೆ ಇಳಿಸಿದ್ದರು. ಬೈಡನ್ ಅವರ ಯೋಜನೆಯು ಆ ಸಂಖ್ಯೆಯನ್ನು 125,000ಕ್ಕೆ ಏರಿಸಲಿದೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಅಧಿಕಾರದಿಂದ ಹೊರನಡೆಯುವ ಮೊದಲು ನಿಗದಿಪಡಿಸಿದ ಸಂಖ್ಯೆಗಿಂತ ಇದು ಬಾರಿ ಪ್ರಮಾಣದ ಹೆಚ್ಚಳ ಎನ್ನಲಾಗಿದೆ.

ಜೊ ಬೈಡನ್
ಜೊ ಬೈಡನ್
author img

By

Published : Feb 4, 2021, 6:57 PM IST

ವಾಷಿಂಗ್ಟನ್: ಅಮೆರಿಕ ಪ್ರವೇಶಿಸುವ ನಿರಾಶ್ರಿತರು ಸಂಖ್ಯೆಯ ಮಿತಿಯನ್ನು ಹೆಚ್ಚಿಸಲಿದ್ದು, ಇದಕ್ಕಾಗಿ ಬೈಡನ್ ಆಡಳಿತ ಸಿದ್ಧತೆ ನಡೆಸುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರದಿಂದ ಹೊರಡುವ ಮುನ್ನ ನಿರಾಶ್ರಿತರ ಪ್ರವೇಶ ಶಿಬಿರವನ್ನು ಕೇವಲ 15,000ಕ್ಕೆ ಇಳಿಸಿದ್ದರು. ಬೈಡನ್ ಅವರ ಯೋಜನೆಯು ಆ ಸಂಖ್ಯೆಯನ್ನು 125,000ಕ್ಕೆ ಏರಿಸಲಿದೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಅಧಿಕಾರದಿಂದ ಹೊರನಡೆಯುವ ಮೊದಲು ನಿಗದಿಪಡಿಸಿದ ಸಂಖ್ಯೆಗಿಂತ 15,000 ಹೆಚ್ಚಳವಾಗಿದೆ.

ಔಪಚಾರಿಕ ಪ್ರಕಟಣೆಗೂ ಮುಂಚಿತವಾಗಿ ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು, ಗುರುವಾರ ರಾಜ್ಯ ಇಲಾಖೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೈಡನ್ ಅವರು ತಮ್ಮ ಈ ಯೋಜನೆಯನ್ನು ಸಾರ್ವಜನಿಕಗೊಳಿಸುವುದಾಗಿ ಹೇಳಿದ್ದಾರೆ ಎಂದಿದ್ದಾರೆ .

ಬೈಡನ್ ಹಾಂಕಾಂಗ್​ ನಿವಾಸಿಗಳಿಗೆ ಆಶ್ರಯ ಹಕ್ಕುಗಳನ್ನು ಸಹ ನೀಡಬಹುದು. ಚೀನಾ ಸರ್ಕಾರದಿಂದ ಕಿರುಕುಳಕ್ಕೊಳಗಾದ ಜನರನ್ನು ರಕ್ಷಿಸಲು ಆಸಕ್ತಿ ಹೊಂದಿದ್ದಾರೆ ಎಂದು ಓರ್ವ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ ಬಂಡವಾಳ ಹೂಡಿಕೆ ಹಿಂತೆಗೆತ ಶೀಘ್ರ ಶುರು: ನೀತಿ ಆಯೋಗ

ಪ್ರಸಕ್ತ ಬಜೆಟ್ ವರ್ಷದಲ್ಲಿ ಟ್ರಂಪ್ ನಿಗದಿಪಡಿಸಿದ ದಾಖಲೆಯ ಕಡಿಮೆ ಮೊತ್ತವಾದ 15,000 ಅನ್ನು ಬೈಡನ್ ಅತಿಕ್ರಮಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಬದಲಾಗಿ ಅಕ್ಟೋಬರ್ 1ರಿಂದ ಪ್ರಾರಂಭವಾಗುವ ಬಜೆಟ್ ವರ್ಷಕ್ಕೆ 125,000ಕ್ಕೆ ಹೆಚ್ಚಿಸುವ ಸಂಬಂಧ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.