ETV Bharat / international

ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುವ ಯೋಜನೆ ಇದೆ: ಜೋ ಬೈಡನ್​

author img

By

Published : Mar 26, 2021, 11:13 AM IST

ಯುಎಸ್ ಅಧ್ಯಕ್ಷ ಜೋ ಬೈಡನ್​ 2024 ರಲ್ಲಿ ಮರುಚುನಾವಣೆಗೆ ಸ್ಪರ್ಧಿಸುವ ಯೋಜನೆ ಇದೆ ಎಂದು ಹೇಳಿದ್ದಾರೆ.

Biden re election  Trump in 2024 elections  US 2024 elections  Presidential elections in US  ಬೈಡನ್​ ಮರು ಚುನಾವಣೆ  ಅಮೆರಿಕಾ ಚುನಾವಣೆ 2024  ಅಮೆರಿಕಾ ಚುನಾವಣೆ 2024 ಸುದ್ದಿ  ಅಮೆರಿಕಾ ಅಧ್ಯಕ್ಷರ ಚುನಾವಣೆ 2024  ಅಮೆರಿಕಾ ಅಧ್ಯಕ್ಷರ ಚುನಾವಣೆ 2024 ಸುದ್ದಿ,  ಅಮೆರಿಕ ಅಧ್ಯಕ್ಷ ಜೋ ಬೈಡೆನ್​ರ ಮೊದಲ ಸುದ್ದಿಗೋಷ್ಠಿ
ಸಂಗ್ರಹ ಚಿತ್ರ

ವಾಷಿಂಗ್ಟನ್: ಮುಂದಿನ ಸಾರ್ವತಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಜೋ ಬೈಡನ್​ ಹೇಳಿದ್ದಾರೆ.

ಈಗ ಅವರಿಗೆ 78 ವರ್ಷವಾಗಿದೆ. 82 ನೇ ವಯಸ್ಸಿನಲ್ಲಿ ಅವರು ಶ್ವೇತಭವನದಲ್ಲಿ ಎರಡನೇ ಅವಧಿಗೆ ಪ್ರಯತ್ನಿಸಬಹುದು. ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಸಹ ಎರಡನೇ ಅವಧಿಗೆ ನನ್ನ ಸಹಚರನಾಗಿರುತ್ತಾರೆ ಎಂದು ನಾನು ಸಂಪೂರ್ಣವಾಗಿ ನಿರೀಕ್ಷಿಸುತ್ತೇನೆ ಅಂತಾ ಬೈಡನ್ ಮಾಧ್ಯಮಗಳಿಗೆ ಉತ್ತರ ನೀಡಿದ್ದಾರೆ.

ಗುರುವಾರ ತಮ್ಮ ಮೊದಲ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬೈಡನ್, ಮರು ಚುನಾವಣೆಯಲ್ಲಿ ಸ್ಪರ್ಧಿಸುವುದು ನನ್ನ ಯೋಜನೆ. ಅದು ನನ್ನ ನಿರೀಕ್ಷೆಯೂ ಕೂಡಾ. ನಾನು ವಿಧಿಯ ಬಗ್ಗೆ ದೊಡ್ಡ ಗೌರವವನ್ನು ಹೊಂದಿದ್ದೇನೆ ಎಂದೂ ಇದೇ ವೇಳೆ ಅವರು ಹೇಳಿದ್ದಾರೆ.

2024 ರಲ್ಲಿ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರೇ ಉಪಾಧ್ಯಕ್ಷೀಯ ಅಭ್ಯರ್ಥಿ ಆಗಿರುತ್ತಾರಾ ಎಂದು ವರದಿಗಾರರು ಕೇಳಿದಾಗ, ನಾನು ಅದನ್ನು ಸಂಪೂರ್ಣವಾಗಿ ನಿರೀಕ್ಷಿಸುತ್ತೇನೆ. ಅವರ ಕೆಲಸ ನಮಗೆ ಬಹಳ ಪ್ರಮುಖವಾಗಿದೆ ಎಂದು ಬೈಡನ್​ ಉತ್ತರ ನೀಡಿದರು.

ಬೈಡನ್​ ಮೊದಲ ಸುದ್ದಿಗೋಷ್ಠಿಯನ್ನು ಶ್ವೇತಭವನದ ವರದಿಗಾರರ ಸಂಘವು ಆಯ್ಕೆ ಮಾಡಿದ ವಿವಿಧ ಮಾಧ್ಯಮಗಳ 30 ವರದಿಗಾರರಿಗೆ ಸೀಮಿತಗೊಳಿಸಲಾಗಿತ್ತು. ಇದರಲ್ಲಿ ವಿದೇಶಿಗರಿಬ್ಬರು ಪತ್ರಕರ್ತರಿಗೆ ಅವಕಾಶ ಕಲ್ಪಿಸಲಾಗಿತ್ತು.

78 ನೇ ವಯಸ್ಸಿನ ಬೈಡನ್ ಯುಎಸ್​ನ ಅತ್ಯಂತ ಹಳೆಯ ಅಧ್ಯಕ್ಷರಾಗಿದ್ದಾರೆ. ಒಂದು ವೇಳೆ 2024ರ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದರೆ ಇವರ ದಾಖಲೆ ಇವರೇ ಮುರಿದಂತಾಗುತ್ತದೆ. ಏಕೆಂದ್ರೆ ಅವರಿಗೆ ಆಗ 82 ವರ್ಷ ವಯಸ್ಸಾಗಿರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.