ವಾಷಿಂಗ್ಟನ್: ಅಮೆರಿಕ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯಾಗಿದ್ದು, ಇಂದು ಪದಗ್ರಹಣ ಮಾಡಲಿದ್ದಾರೆ. ಇದರ ಮಧ್ಯೆ ತೃತೀಯ ಲಿಂಗಿಗೆ ಮಣೆ ಹಾಕಿರುವ ಅವರು ಸಹಾಯಕ ಆರೋಗ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡಿದ್ದಾರೆ.
ಓದಿ: ಚೀನಾ ವೈರಸ್ನಿಂದ ಎಲ್ಲರಿಗೂ ತೊಂದರೆ: ವಿದಾಯದ ಭಾಷಣ ಮಾಡಿದ ಟ್ರಂಪ್
ಶಿಶುವೈದ್ಯೆ ಮತ್ತು ಪೆನ್ಸಿಲ್ವೇನಿಯಾ ಆರೋಗ್ಯ ಕಾರ್ಯದರ್ಶಿ ರಾಚೆಲ್ ಲೆವಿನ್(ತೃತೀಯ ಲಿಂಗಿ) ಅವರನ್ನ ತಮ್ಮ ಆರೋಗ್ಯ ಸಹಾಯಕ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.ಈ ಮೂಲಕ ಈ ಹುದೆ ಅಲಂಕಾರ ಮಾಡುತ್ತಿರುವ ಮೊದಲ ತೃತೀಯ ಲಿಂಗಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಕೊರೊನಾ ವೈರಸ್ ಸಮಯದಲ್ಲಿ ಎಲ್ಲರೂ ಮೆಚ್ಚುಗೆಗೆ ಪಾತ್ರರಾಗಿರುವ ಇವರು, ಜನಾಂಗ, ಧರ್ಮ ಲೆಕ್ಕಿಸದೇ ಕೆಲಸ ಮಾಡಿದ್ದರು.
ಅಮೆರಿಕ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ಬೈಡನ್ ತಮ್ಮ ಆಡಳಿತದಲ್ಲಿ 20 ಮಂದಿ ಭಾರತ ಮೂಲದ ಅಮೆರಿಕನ್ನರಿಗೆ ಅವಕಾಶ ನೀಡಿದ್ದು, ಪ್ರಮುಖ ಹುದ್ದೆಗಳಲ್ಲಿ ಇವರೆಲ್ಲರೂ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಇದರಲ್ಲಿ 13 ಮಂದಿ ಮಹಿಳೆಯರಿದ್ದಾರೆ.