ಸ್ಯಾನ್ ಡಿಯಾಗೋ: ಗ್ರೀನ್ ಕಾರ್ಡ್ ವಿತರಣೆ ಹಾಗೂ ವಲಸೆ ನೀತಿಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಹೊರಡಿಸಿದ್ದ ಆದೇಶವನ್ನು ಅಧ್ಯಕ್ಷ ಜೋ ಬೈಡನ್ ರದ್ದು ಮಾಡಿದ್ದಾರೆ.
ಟ್ರಂಪ್ ಆಡಳಿತ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿದ ನಂತರ ಮಾತನಾಡಿದ ಅಧ್ಯಕ್ಷ ಬೈಡನ್, ಕೊರೊನಾ ವೈರಸ್ ಹಿನ್ನೆಲೆ ದೇಶದ ಅಬಿವೃದ್ಧಿ ಕುಂಠಿತವಾಗಿದೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಅವರ ನೀತಿ ಸಹ ಅಮೆರಿಕದ ಅಭಿವೃದ್ಧಿಗೆ ತಡೆಯೊಡ್ಡುತ್ತಿತ್ತು. ಹಾಗಾಗಿ ವಲಸೆ ನೀತಿಯನ್ನು ರದ್ದುಮಾಡಲಾಗಿದೆ ಎಂದು ಹೇಳಿದರು.
ಈ ವಲಸೆ ನೀತಿಯಿಂದ ಇಲ್ಲಿ ನೆಲೆಸಿರುವ ವಿವಿಧ ದೇಶಗಳ ಜನರಿಗೆ ತೊಂದರೆಯಾಗುತ್ತಿತ್ತು. ಜಗತ್ತಿನ ವಿವಿಧ ದೇಶಗಳಿಂದ ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳುವ ಅಮೆರಿಕದ ಉದ್ಯಮಗಳಿಗೆ ಹಾನಿಯಾಗುತ್ತಿತ್ತು. ಹಾಗಾಗಿ ವಿವಿಧ ದೇಶಗಳ ಜನರು ವಲಸೆ ಬರುವುದರಿಂದ ಅಮೆರಿಕದ ಜನರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂದು ಭಾವಿಸಿದ್ದ ಟ್ರಂಪ್ ವಲಸೆ ನೀತಿಯನ್ನು ಹಾಗೂ ಕೋವಿಡ್-19ನಿಂದಾಗಿ ಗ್ರೀನ್ ಕಾರ್ಡ್ ವಿತರಿಸುವುದನ್ನು ನಿಷೇಧಿಸುತ್ತಿರುವುದಾಗಿ ಹೇಳಿದ್ದರು.