ವಾಷಿಂಗ್ಟನ್(ಅಮೆರಿಕ) : ಜನವರಿ 6ರ ಕ್ಯಾಪಿಟಲ್ ಮೇಲಿನ ದಾಳಿಯ ಕುರಿತು ಬೈಡನ್ ಸರ್ಕಾರ ಸಂಸತ್ಗೆ (ಕಾಂಗ್ರೆಸ್) ಮಾಹಿತಿ ನೀಡಲು ನಿರ್ಧರಿಸಿದೆ. ಇದರಲ್ಲಿ ಟ್ರಂಪ್ ಮತ್ತು ಅವರ ಸಹಾಯಕರ ಕುರಿತಾದ ಹೇಳಿಕೆಯನ್ನು ಉಲ್ಲೇಖಿಸಿದೆ.
ಜನವರಿ ದಂಗೆಯನ್ನು ತನಿಖೆ ಮಾಡುತ್ತಿರುವ ತಂಡವು ಕಳೆದ ತಿಂಗಳು ಟ್ರಂಪ್ ಅವರ ಹಣಕಾಸಿನ ವ್ಯವಹಾರ, ದೂರವಾಣಿ ಕರೆ, ರ್ಯಾಲಿಗಳ ಆಯೋಜನೆಗೆ ಧನ ಸಹಾಯ ಕುರಿತಂತೆ ಹಲವು ದಾಖಲೆಗಳನ್ನು ಕೇಳಿದೆ. ಈ ಘಟನೆಗಳ ಪೈಕಿ, ಶ್ವೇತಭವನದ ಬಳಿ ನಡೆದ ರ್ಯಾಲಿಯಲ್ಲಿ ಟ್ರಂಪ್ ಅವರ ಭಾಷಣ, ಜನರನ್ನು ಪ್ರೇರೇಪಿಸಿತು. ಇದರಿಂದಾಗಿ ನೆರೆದಿದ್ದ ಸಾವಿರಾರು ಜನರು ಕ್ಯಾಪಿಟಲ್ನೊಳಗೆ ನುಗ್ಗಿದರು ಎಂದು ತಿಳಿಸಿದೆ.
ಅಧ್ಯಕ್ಷೀಯ ದಾಖಲೆಗಳ ಮೇಲಿನ ಕಾರ್ಯನಿರ್ವಾಹಕ ಆದೇಶದ ಪ್ರಕಾರ, ದಾಖಲೆಗಳನ್ನು ಹೊಂದಿರುವ ಆರ್ಕೈವಿಸ್ಟ್(ತನಿಖಾ ತಂಡ), ನ್ಯಾಯಾಲಯದ ಅಂತಿಮ ಆದೇಶ ಸಿಗುವವರೆಗೂ ಪ್ರಸ್ತುತ ಅಧ್ಯಕ್ಷರು ನೀಡಿದ ಸೂಚನೆಗಳನ್ನು ಪಾಲಿಸಬೇಕು. ಶೀಘ್ರದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡಲು ಒಲವು ತೋರುವುದಾಗಿ ಶ್ವೇತಭವನವು ಸೂಚಿಸಿದೆ.
ಅಧ್ಯಕ್ಷರು ತಮ್ಮ ಮತ್ತು ತಮ್ಮ ಹಿಂದಿನವರಿಗಾಗಿ ವೈಟ್ ಹೌಸ್ ದಾಖಲೆಗಳನ್ನು ಖಾಸಗಿಯಾಗಿಡಲು ತಮ್ಮ ಕಾರ್ಯಕಾರಿ ಸವಲತ್ತನ್ನು ರಕ್ಷಿಸುತ್ತಾರೆ. ಟ್ರಂಪ್ ಅವರ ಚಟುವಟಿಕೆಗಳ ಕುರಿತ ದಾಖಲೆಗಳಿಗಾಗಿ ಕಾಂಗ್ರೆಸ್ ಬೈಡನ್ ಸರ್ಕಾರವನ್ನು ಮನವಿ ಮಾಡಿತ್ತು. ಆದರೆ, ಬೈಡನ್ ಅವರ ಮನವಿಯನ್ನು ನಿರಾಕರಿಸುವುದು ಡೆಮಾಕ್ರಟಿಕ್ ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ. ಬೈಡನ್ ಸುಲಲಿತವಾಗಿ ಆಡಳಿತ ನಡೆಸಲು ಕಾಂಗ್ರೆಸ್ ಬೆಂಬಲ ಅವಶ್ಯಕವಿದೆ.
ಒಂದು ಗುಂಪು ಏಕಾಏಕಿ ಕ್ಯಾಪಿಟಲ್ನೊಳಗೆ ನುಗ್ಗಲು ಹೇಗೆ ಸಾಧ್ಯವಾಯಿತು. ಬೈಡನ್ ಅವರ ವಿಜಯದ ಪ್ರಮಾಣೀಕರಣವನ್ನು ಅಡ್ಡಿಪಡಿಸಲು ಹೇಗೆ ಸಾಧ್ಯವಾಯಿತು ಅನ್ನೋದು ತನಿಖೆಯ ಭಾಗವಾಗಿದೆ. ಇದು ಎರಡು ಶತಮಾನಗಳಲ್ಲಿ ಕಾಂಗ್ರೆಸ್ ಮೇಲೆ ನಡೆದ ಅತ್ಯಂತ ಗಂಭೀರ ಆಕ್ರಮಣವಾಗಿದೆ. ಈ ದಾಳಿಯಲ್ಲಿ 650ಕ್ಕೂ ಹೆಚ್ಚಿನವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದ್ದು, ಅಮೆರಿಕ ಇತಿಹಾಸದಲ್ಲೇ ಇದು ಅತಿದೊಡ್ಡ ವಿಚಾರಣೆಯಾಗಿದೆ.
ಆರ್ಕೈವ್‌ಗಳು ಶ್ವೇತಭವನದ ದಾಖಲೆಗಳ ಜೊತೆಗೆ ರಕ್ಷಣಾ, ನ್ಯಾಯ, ಹೋಮ್ ಲ್ಯಾಂಡ್ ಸೆಕ್ಯುರಿಟಿ ಮತ್ತು ಒಳಾಂಗಣ ಹಾಗೂ ಎಫ್‌ಬಿಐ ಮತ್ತು ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿಯಲ್ಲೂ ತನಿಖೆ ನಡೆಸಲು ಮುಂದಾಗಿದ್ದಾರೆ. ನ್ಯಾಷನಲ್ ಆರ್ಕೈವ್ಸ್ ಮತ್ತು ರೆಕಾರ್ಡ್ಸ್ ಅಡ್ಮಿನಿಸ್ಟ್ರೇಷನ್‌ನ ವಿನಂತಿಯು 10 ಪುಟಗಳಷ್ಟಿದೆ. ಸಮಿತಿಯು ಜನವರಿ 6, 2021ರಂದು ಶ್ವೇತಭವನದೊಳಗಿನ ಎಲ್ಲಾ ದಾಖಲೆಗಳು ಮತ್ತು ಸಂವಹನಗಳನ್ನು ಹುಡುಕುತ್ತಿದೆ. ಇದು ಟ್ರಂಪ್ ನ ಆಪ್ತ ಸಲಹೆಗಾರರು ಮತ್ತು ಕುಟುಂಬ ಸದಸ್ಯರಿಗೆ ಸಂಬಂಧಿಸಿದೆ.
ಇದನ್ನೂ ಓದಿ: 9/ 2011ರ ದಾಳಿ ಸ್ಥಳಕ್ಕೆ ಬ್ರಿಟನ್ ರಾಜ ಮನೆತನದ ಪ್ರಿನ್ಸ್ ಹ್ಯಾರಿ - ಮೇಘನ್ ಭೇಟಿ