ETV Bharat / international

ದೊಡ್ಡಣ್ಣನ ಸಾಮ್ರಾಜ್ಯದಲ್ಲಿ ಬೈಡನ್ ಪಾರುಪತ್ಯ​: ಶಕ್ತಿಶಾಲಿ ಶ್ವೇತಭವನದಲ್ಲಿ ಯಾರಿಗುಂಟು..? ಯಾರಿಗಿಲ್ಲ ಸ್ಥಾನ?

ಮಾಜಿ ಪ್ರಚಾರ ವ್ಯವಸ್ಥಾಪಕ ಜೆನ್ ಒ'ಮ್ಯಾಲಿ ಡಿಲನ್ ಅವರು ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬೈಡನ್‌ರ ಆರಂಭಿಕ ನಿರ್ಧಾರಗಳ ಬಗ್ಗೆ ತಿಳಿದ ಮೂಲಗಳು ದೃಢಪಡಿಸಿವೆ.

author img

By

Published : Nov 17, 2020, 4:05 PM IST

US
ಯುಎಸ್​

ಅಟ್ಲಾಂಟಾ: ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್ ಅವರು ವೈವಿಧ್ಯಮಯ ಶ್ವೇತಭವನದ ನಾಯಕತ್ವದ ತಂಡದ ಭರ್ತಿಗೆ ತಮ್ಮ ಅಭಿಯಾನದ ಹಿರಿಯ ನಾಯಕರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಮಾಜಿ ಪ್ರಚಾರ ವ್ಯವಸ್ಥಾಪಕ ಜೆನ್ ಒ'ಮ್ಯಾಲಿ ಡಿಲನ್ ಅವರು ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬೈಡನ್‌ರ ಆರಂಭಿಕ ನಿರ್ಧಾರಗಳ ಬಗ್ಗೆ ತಿಳಿದ ಮೂಲಗಳು ದೃಢಪಡಿಸಿವೆ.

ಪ್ರಚಾರದ ಸಹ - ಅಧ್ಯಕ್ಷ ಲೂಯಿಸಿಯಾನದ ರೆಪ್ ಸೆಡ್ರಿಕ್ ರಿಚ್ಮಂಡ್ ಮತ್ತು ಪ್ರಚಾರ ಸಲಹೆಗಾರ ಸ್ಟೀವ್ ರಿಚೆಟ್ಟಿ ನೂತನ ಆಡಳಿತದಲ್ಲಿ ಹಿರಿತನದ ಪಾತ್ರ ವಹಿಸಿಕೊಳ್ಳಲಿದ್ದಾರೆ. ರಿಚ್ಮಂಡ್ ತನ್ನ ಲೂಯಿಸಿಯಾನ ಕಾಂಗ್ರೆಸ್ ಸ್ಥಾನ ತ್ಯಜಿಸಿ ಶ್ವೇತಭವನದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ನಿರೀಕ್ಷಿತ ಔಪಚಾರಿಕ ಸಿಬ್ಬಂದಿ ಪ್ರಕಟಣೆಗೂ ಮುನ್ನ ಆಂತರಿಕ ಚರ್ಚೆಗಳನ್ನು ಬಹಿರಂಗಪಡಿಸುವಂತಿಲ್ಲ. ಕಳೆದ ವಾರ ಬೈಡನ್​ನ ಮಾಜಿ ಹಿರಿಯ ಪ್ರಚಾರ ಸಲಹೆಗಾರ ರಾನ್ ಕ್ಲೈನ್ ​​ಅವರು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.

44 ವರ್ಷದ ಓ'ಮ್ಯಾಲಿ ಡಿಲ್ಲನ್ ಅವರು ಡೆಮಾಕ್ರಟಿಕ್ ಅಧ್ಯಕ್ಷೀಯ ಪ್ರಚಾರವನ್ನು ಯಶಸ್ವಿಯಾಗಿ ನಿರ್ವಹಿಸಿದ ಮೊದಲ ಮಹಿಳೆ ಆಗಿದ್ದಾರೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮರ ಶ್ವೇತಭವನದಲ್ಲಿ ಕೆಲಸ ಮಾಡಿದ ಹಿರಿಯ ರಾಜಕೀಯ ಕಾರ್ಯಕರ್ತೆಯಾಗಿದ್ದಾರೆ. ಒಬಾಮಾ ಆಡಳಿತದ ಅವಧಿಯಲ್ಲಿ ಬೈಡನ್‌ರ ಮುಖ್ಯಸ್ಥರಾಗುವ ಮೊದಲು ರಿಚೆಟ್ಟಿ, ಆರೋಗ್ಯ ಉದ್ಯಮದ ಕೆಲಸ ನೋಡಿಕೊಂಡಿದ್ದರು.

ಬೈಡನ್ ಅವರ ಪ್ರಚಾರ ಅಭಿಯಾನದಲ್ಲಿ ಒಬಾಮಾ ಅವಧಿಯ ಅನೇಕ ಹಳೆಯ ವಿದ್ಯಾರ್ಥಿಗಳು ಸಹ ಕಾರ್ಯನಿರ್ವಹಿಸಿದ್ದರು. ಅವರು ಸಹ ಆಡಳಿತದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.