ETV Bharat / international

ಪುಟಿನ್ ಜತೆಗಿನ ಮಾತುಕತೆಗೂ ಮುನ್ನ ಯುರೋಪಿಯನ್​ ವ್ಯಾಪಾರ ಸಂಬಂಧ ತಿಳಿಗೊಳಿಸಲು ಮುಂದಾದ ಬೈಡನ್​!

ವಿಮಾನ ಉತ್ಪಾದನಾ ದೈತ್ಯ ಯುನೈಟೆಡ್ ಸ್ಟೇಟ್ಸ್​ನ ಬೋಯಿಂಗ್ ಮತ್ತು ಇಯು’ನ ಏರ್​ಬಸ್​ಗೆ ಸರ್ಕಾರ ಎಷ್ಟು ಸಬ್ಸಿಡಿ ನೀಡಬಹುದು ಎಂಬ 17 ವರ್ಷಗಳ ವಿವಾದದಲ್ಲಿ ಉಭಯ ಕಡೆಯವರು ಒಂದು ನಿರ್ಣಯಕ್ಕೆ ಬಂದಿದ್ದಾರೆ ಎಂಬ ಪ್ರಕಟಣೆಯನ್ನು ಯುರೋಪಿಯನ್ ಕೌನ್ಸಿಲ್ ತಿಳಿಸಿದೆ. ಈ ಕ್ರಮದಿಂದ, ಟ್ರಾನ್ಸ್ - ಅಟ್ಲಾಂಟಿಕ್ ಸಂಬಂಧವಾಗಿ ಬೈಡೆನ್ ಒಂದು ಪ್ರಮುಖ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಯುಎಸ್​-ಇಯು ವ್ಯಾಪಾರ ಸಂಬಂಧ
ಯುಎಸ್​-ಇಯು ವ್ಯಾಪಾರ ಸಂಬಂಧ
author img

By

Published : Jun 15, 2021, 9:43 PM IST

ಬ್ರಸೆಲ್ಸ್: ಅಮೆರಿಕ ಯುರೋಪಿಯನ್ ಒಕ್ಕೂಟದ ವ್ಯಾಪಾರ ಸಂಬಂಧದಲ್ಲಿ ಪ್ರಮುಖ ಬದಲಾವಣೆ ಆಗಿದೆ. ವಿಮಾನ ತಯಾರಕರಿಗೆ ಸಬ್ಸಿಡಿ ನೀಡುವ ಬಗ್ಗೆ ಯುರೋಪಿಯನ್ ಒಕ್ಕೂಟದೊಂದಿಗಿನ ದೀರ್ಘಕಾಲದ ವಿವಾದವನ್ನು ಕೊನೆಗೊಳಿಸಲು ಅಧ್ಯಕ್ಷ ಜೋ ಬೈಡನ್​ ಮುಂದಾಗಿದ್ದಾರೆ.

ವಿಮಾನ ಉತ್ಪಾದನಾ ದೈತ್ಯ ಯುನೈಟೆಡ್ ಸ್ಟೇಟ್ಸ್​ನ ಬೋಯಿಂಗ್ ಮತ್ತು ಇಯು’ನ ಏರ್​ಬಸ್​ಗೆ ಸರ್ಕಾರ ಎಷ್ಟು ಸಬ್ಸಿಡಿ ನೀಡಬಹುದು ಎಂಬ 17 ವರ್ಷಗಳ ವಿವಾದದಲ್ಲಿ ಉಭಯ ಕಡೆಯವರು ನಿರ್ಣಯವನ್ನು ತಲುಪಿದ್ದಾರೆ ಎಂಬ ಪ್ರಕಟಣೆಯನ್ನು ಅಮೆರಿಕ- ಯುರೋಪಿಯನ್ ಕೌನ್ಸಿಲ್ ತಿಳಿಸಿದೆ. ಈ ಕ್ರಮದಿಂದ, ಟ್ರಾನ್ಸ್-ಅಟ್ಲಾಂಟಿಕ್ ಸಂಬಂಧದಲ್ಲಿ ಬೈಡೆನ್ ಒಂದು ಪ್ರಮುಖ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಜೊತೆಗಿನ ಸಭೆಗೆ ಮುಂಚಿತವಾಗಿ ರಷ್ಯಾವನ್ನು ಎದುರಿಸಲು ಬೈಡನ್​ ವ್ಯಾಪಕವಾಗಿ ಯುರೋಪಿಯನ್ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅಮೆರಿಕ ವ್ಯಾಪಾರ ಪ್ರತಿನಿಧಿ ಕ್ಯಾಥರೀನ್ ತೈ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಒಪ್ಪಂದವು ವಿಮಾನ ಸುಂಕವನ್ನು ಐದು ವರ್ಷಗಳವರೆಗೆ ಅಮಾನತುಗೊಳಿಸುವಂತೆ ಹೇಳುತ್ತದೆ. ಹೋರಾಟವನ್ನು ಬದಿಗಿಟ್ಟು ಚೀನಾದ ಆರ್ಥಿಕ ದೃಢೀಕರಣದತ್ತ ಗಮನ ಹರಿಸುವ ಸಮಯ ಇದಾಗಿದೆ ಎಂದು ಅವರು ಹೇಳಿದ್ದಾರೆ.

“ಇಂದಿನ ಪ್ರಕಟಣೆಯು ಅಮೆರಿಕ-ಯುರೋಪ್ ಸಂಬಂಧದಲ್ಲಿ ದೀರ್ಘಕಾಲದ ವ್ಯಾಪಾರ ಗೊಂದಲವನ್ನು ಪರಿಹರಿಸುತ್ತದೆ. ನಮ್ಮ ಹತ್ತಿರದ ಮಿತ್ರರೊಡನೆ ಹೋರಾಡುವ ಬದಲು, ನಾವು ಅಂತಿಮವಾಗಿ ಒಂದು ಸಾಮಾನ್ಯ ಬೆದರಿಕೆಗೆ ವಿರುದ್ಧವಾಗಿ ಸೇರುತ್ತಿದ್ದೇವೆ" ಎಂದು ತೈ ಹೇಳಿದ್ದಾರೆ.

ಅಮೆರಿಕದ ಕಂಪನಿಗಳು ಇಯು ಜೊತೆ ನ್ಯಾಯಯುತವಾಗಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಅಮೆರಿಕ ನಿರ್ಧರಿಸಿದರೆ ಸುಂಕಗಳನ್ನು ಮರು ಹೊಂದಿಸಬಹುದು ಎಂದು ಅವರು ಹೇಳಿದರು. ಮಾರ್ಚ್ 11ರಂದು ನಾಲ್ಕು ತಿಂಗಳವರೆಗೆ ಸುಂಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಮತ್ತು ಹೊಸ ಒಪ್ಪಂದವು ಜುಲೈ 11 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

ಅಮೆರಿಕ-ಯುರೋಪ ಸಂಬಂಧವು ಇತರ ವ್ಯಾಪಾರ-ಸಂಬಂಧಿತ ಘರ್ಷಣೆಯನ್ನು ಎದುರಿಸುತ್ತಿದೆ. ವಿದೇಶಿ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ಆಮದು ತೆರಿಗೆ ವಿಧಿಸುವ ಡೊನಾಲ್ಡ್ ಟ್ರಂಪ್ ಅವರ 2018 ರ ನಿರ್ಧಾರವನ್ನು ಬೈಡನ್ ಇನ್ನೂ ಗಮನಿಸಿಲ್ಲ ಎಂದು ಖಂಡದ ನಾಯಕರು ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲ ವ್ಯಾಪಾರ ವಿವಾದಗಳನ್ನು ಬಗೆಹರಿಸದೇ, ಪುಟಿನ್ ಅವರ ಮುಖಾಮುಖಿ ಭೇಟಿಗೆ ಮುಂಚಿತವಾಗಿ ಯುರೋಪಿನೊಂದಿಗೆ ಹೆಚ್ಚು ಅಭಿಮಾನವನ್ನು ಬೆಳೆಸಿಕೊಳ್ಳಬಹುದು ಎಂದು ಶ್ವೇತಭವನದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು. ಜಂಟಿ ಅಮೆರಿಕ-ಯುರೋಪಿಯನ್​ ಒಕ್ಕೂಟದ ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯನ್ನು ರಚಿಸುವುದಾಗಿ ಶ್ವೇತಭವನ ಮಂಗಳವಾರ ಪ್ರಕಟಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.