ವಾಷಿಂಗ್ಟನ್: ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡೆನ್ ಅವರು ಜಾರ್ಜಿಯಾ ರಾಜ್ಯದ ಮತದಾರರಲ್ಲಿ ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕರೆ ನೀಡಿದರು.
ನವೆಂಬರ್ನಲ್ಲಿನಲ್ಲಿ ನಡೆದ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದ ಪಕ್ಷಗಳಿಗೆ ಶೇ. 50 - 50ರಷ್ಟು ಮತ ಬಂದಿದ್ದು, ಗೆಲ್ಲಲು 51ರಷ್ಟು ಮತ ಬೇಕಿದೆ. ಹಾಗಾಗಿ ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸುವಂತೆ ಮತದಾದರಲ್ಲಿ ಕೇಳಿಕೊಂಡರು.
ನಿಮ್ಮ ಧ್ವನಿಯನ್ನು ಕೇಳಲು, ಜಾರ್ಜಿಯಾವನ್ನು ಅಭಿವೃದ್ಧಿಯೆಡೆಗೆ ಬದಲಾಯಿಸಲು, ಅಮೆರಿಕವನ್ನು ಮತ್ತೆ ಬದಲಾಯಿಸಲು ನಾವು ಬಯಸುತ್ತಿದ್ದು, ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸಿ ಎಂದು ಕೇಳಿ ಕೊಂಡರು.