ETV Bharat / international

Vaccine ಪೂರೈಕೆಗೆ ಅಡೆತಡೆಯಾದರೂ, ವಿತರಣೆಯಲ್ಲಿ ಜಾಗತಿಕವಾಗಿ ನಂ.1 ಅಮೆರಿಕ! - ಅಮೆರಿಕದಿಂದ ಲಸಿಕೆ ಪೂರೈಕೆ ಅಭಿಯಾನ

ಇತರ ದೇಶಗಳಿಗೆ ಲಸಿಕೆ ಪೂರೈಸಲು ದೇಶಕ್ಕೆ ತನ್ನ ಕ್ಯಾಬಿನೆಟ್​​​​ನ ಅನುಮತಿ ಕಡ್ಡಾಯವಾಗಿರುತ್ತದೆ. ಸುರಕ್ಷತಾ ತಪಾಸಣೆ ನಡೆಸಲು ತನಿಖಾಧಿಕಾರಿಗಳು ಬೇಕಾಗುತ್ತಾರೆ. ಯಾವ ರಾಷ್ಟ್ರಗಳು ಯಾವ ಅಡೆತಡೆಗಳು ಎದುರಿಸುತ್ತಿವೆ ಅನ್ನೋದನ್ನು ಬಹಿರಂಗ ಪಡಿಸಲು ಶ್ವೇತಭವನ ನಿರಾಕರಿಸಿದೆ. ಲಸಿಕೆ ಸ್ವೀಕರಿಸುವ ದೇಶಗಳಿಗೆ ಇರುವ ಅಡೆತಡೆಗಳನ್ನು ನಿವಾರಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದೂ ತಿಳಿಸಿದೆ.

US President Joe biden
US President Joe biden
author img

By

Published : Jul 1, 2021, 7:28 AM IST

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್​​​ ಜೂನ್​​ ಅಂತ್ಯದ ವೇಳೆಗೆ 80 ಮಿಲಿಯನ್​​ ಡೋಸ್ ಕೋವಿಡ್ ಲಸಿಕೆಯನ್ನು ವಿಶ್ವದ ಇತರ ದೇಶಗಳಿಗೆ ತಲುಪಿಸುವ ಗುರಿ ಹೊಂದಿದ್ದರು. ಆದರೆ, ಕೆಲ ರಾಜತಾಂತ್ರಿಕತೆ ಅಡಚಣೆಗಳಿಂದ ವ್ಯಾಕ್ಸಿನೇಷನ್ ತಲುಪಿಸುವ ಗುರಿ ಕುಂಠಿತಗೊಂಡಿದೆ.

ಕೆಲ ದಿನಗಳ ಹಿಂದೆ ಸುಮಾರು 50 ದೇಶಗಳು ಕೋವಿಡ್​ ಲಸಿಕೆಯ ಹೆಚ್ಚುವರಿ ಪಾಲನ್ನು ಪಡೆಯಲಿವೆ ಎಂದು ಬೈಡನ್ ಘೋಷಿಸಿದ್ದರು. ಆದರೂ, ಅಮೆರಿಕ 10 ದೇಶಗಳಿಗೆ 24 ದಶಲಕ್ಷಕ್ಕಿಂತ ಕಡಿಮೆ ಪ್ರಮಾಣದ ಡೋಸ್​ ಪೂರೈಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್​​ ತಿಳಿಸಿದೆ.

ಬೈಡನ್ ಕೊಟ್ಟ ಮಾತಿಗೆ ಬದ್ಧರಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಲಸಿಕೆ ಪೂರೈಸುವುದಾಗಿ ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ. ವ್ಯಾಕ್ಸಿನ್​ಗೇನು ಕೊರತೆಯಿಲ್ಲ. ಕಾನೂನು ಅವಶ್ಯಕತೆ, ಕಸ್ಟಮ್ಸ್ ಕ್ಲಿಯರೆನ್ಸ್, ಕೋಲ್ಡ್ ಸ್ಟೋರೇಜ್​​ ಹಾಗೂ ವಿತರಣಾ ಕಾರ್ಯಕ್ರಮಗಳ ಸಂಕೀರ್ಣ ವೆಬ್ ಪ್ರಕ್ರಿಯೆಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿವೆ. ಆದ್ದರಿಂದ ಲಸಿಕೆ ಪೂರೈಕೆ ನಿಧಾನವಾಗಿದೆ.

ಇತರ ದೇಶಗಳಿಗೆ ಲಸಿಕೆ ಪೂರೈಸಲು ಸಚಿವ ಸಂಪುಟದ ಅನುಮತಿ ಕಡ್ಡಾಯವಾಗಿರುತ್ತದೆ. ಸುರಕ್ಷತಾ ತಪಾಸಣೆ ನಡೆಸಲು ತನಿಖಾಧಿಕಾರಿಗಳು ಬೇಕಾಗುತ್ತಾರೆ. ಯಾವ ರಾಷ್ಟ್ರಗಳು ಯಾವ ಅಡೆತಡೆಗಳು ಎದುರಿಸುತ್ತಿವೆ ಅನ್ನೋದನ್ನು ಬಹಿರಂಗ ಪಡಿಸಲು ಶ್ವೇತಭವನ ನಿರಾಕರಿಸಿದೆ. ಲಸಿಕೆ ಸ್ವೀಕರಿಸುವ ದೇಶಗಳಿಗೆ ಇರುವ ಅಡೆತಡೆಗಳನ್ನು ನಿವಾರಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದೂ ತಿಳಿಸಿದೆ.

ಲಸಿಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಕಠಿಣ ವ್ಯವಸ್ಥಾಪನಾ ಸವಾಲು ಇರುವುದರಿಂದ ವಿತರಣೆ ಕಷ್ಟವಾಗುತ್ತಿದೆ ಎಂದು ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ. ಮೇ 17 ರಂದು ವಿಶ್ವದ ಹಲವು ರಾಷ್ಟ್ರಗಳಿಗೆ 80 ಮಿಲಿಯನ್ ಲಸಿಕೆ ಡೋಸ್​​ ಪೂರೈಸುವುದಾಗಿ ಬೈಡನ್ ಘೋಷಿಸಿದ್ದರು. ಇದು ಈವರೆಗೆ ರಷ್ಯಾ ಮತ್ತು ಚೀನಾಕ್ಕಿಂತ ಪೂರೈಸಿದ್ದಕ್ಕಿಂತ ಐದು ಪಟ್ಟು ಹೆಚ್ಚಾಗಿದೆ.

ಗುರಿ ಪೂರೈಸಲಾಗದಿದ್ದರೂ, ಬೈಡನ್ ಅತಿದೊಡ್ಡ ಜಾಗತಿಕ ಲಸಿಕೆ ದಾನಿಯಾಗಿ ಹೆಸರು ವಾಸಿಯಾಗಿದ್ದಾರೆ. 80 ಮಿಲಿಯನ್ ಡೋಸೇಜ್‌ಗಳನ್ನು ಮುಂದಿನ ವರ್ಷದಲ್ಲಿ 500 ಮಿಲಿಯನ್ ಲಸಿಕೆ ಪ್ರಮಾಣವನ್ನು ಜಗತ್ತಿಗೆ ಖರೀದಿಸಲು ಮತ್ತು ದಾನ ಮಾಡುವ ದೊಡ್ಡ ಯೋಜನೆಯ ಮೇಲೆ ಡೌನ್ ಪೇಮೆಂಟ್ ಎಂದು ಅರ್ಥೈಸಲಾಗುತ್ತದೆ. ಫೈಜರ್​ನಿಂದ ಲಸಿಕೆ ಖರೀದಿಸಲು ಮುಂದಾಗಿರುವ ಅಮೆರಿಕ, ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.

ಈವರೆಗೆ ಅಮೆರಿಕದಿಂದ ಲಸಿಕೆ ಸ್ವೀಕರಿಸಿದವರ ಪಟ್ಟಿ

ಕೊಲಂಬಿಯಾ2.5 ಮಿಲಿಯನ್ ಜಾನ್ಸನ್ ಮತ್ತು ಜಾನ್ಸನ್ ಡೋಸ್
ಬಾಂಗ್ಲಾದೇಶ2.5 ಮಿಲಿಯನ್ ಮಾಡರ್ನಾ
ಪೆರು2 ಮಿಲಿಯನ್ ಫೈಜರ್
ಪಾಕಿಸ್ತಾನ2.5 ಮಿಲಿಯನ್ ಮಾಡರ್ನಾ
ಹೊಂಡುರಾಸ್1.5 ಮಿಲಿಯನ್ ಮಾಡರ್ನಾ
ಬ್ರೆಜಿಲ್3 ಮಿಲಿಯನ್ ಜೆ & ಜೆ
ದಕ್ಷಿಣ ಕೊರಿಯಾ1 ಮಿಲಿಯನ್ ಜೆ & ಜೆ
ತೈವಾನ್2.5 ಮಿಲಿಯನ್ ಮಾಡರ್ನಾ
ಕೆನಡಾ1 ಮಿಲಿಯನ್ ಮಾಡರ್ನಾ, 1.5 ಮಿಲಿಯನ್ ಆಸ್ಟ್ರಾಜೆನೆಕಾ
ಮೆಕ್ಸಿಕೊ1.35 ಮಿಲಿಯನ್ ಜೆ & ಜೆ, 2.5 ಮಿಲಿಯನ್ ಆಸ್ಟ್ರಾಜೆನೆಕಾ

ಸುಮಾರು 15.9 ಮಿಲಿಯನ್​ ಜೀವ ರಕ್ಷಿಸಲು ಈ ಲಸಿಕೆಗಳು ನೆರವಾಗಿವೆ. ಬೈಡನ್ ಆರಂಭದಲ್ಲಿ ತಮ್ಮಲ್ಲಿ ತಯಾರಿಸಿದ ಎಲ್ಲಾ ಆಸ್ಟ್ರಾಜೆನಿಕಾ ಲಸಿಕೆಗಳನ್ನು ಇತರ ರಾಷ್ಟ್ರಗಳಿಗೆ ನೀಡಲು ಬದ್ಧರಾಗಿದ್ದರು. ಇದು ಅಮೆರಿಕದಲ್ಲಿ ಬಳಸಲು ಅಧಿಕಾರ ಪಡೆದಿಲ್ಲ. ಆದರೆ, ವಿಶ್ವದಾದ್ಯಂತ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿದೆ. ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿಯು ಎರಡು ತಿಂಗಳ ಕಾಲ ಸುರಕ್ಷತಾ ಪರಿಶೀಲನೆ ನಡೆಸಿದ್ದು, ಆಸ್ಟ್ರಾಜೆನೆಕಾವನ್ನು ಇತರ ರಾಷ್ಟ್ರಗಳಿಗೆ ಪೂರೈಸಲೆಂದೇ ಇರಿಸಿದೆ.

ಇದನ್ನೂ ಓದಿ:ಭಾರತಕ್ಕೆ ತುರ್ತು ಕೋವಿಡ್​ ನೆರವು ನೀಡುವಂತೆ ಬೈಡನ್ ಆಡಳಿತದ ಮೇಲೆ ಒತ್ತಡ

ಅಮೆರಿಕದಲ್ಲಿ ಲಸಿಕೆಗೆ ಬೇಡಿಕೆ ಕ್ಷೀಣಿಸುತ್ತಿರುವುದರಿಂದ ಆಸ್ಟ್ರಾಜೆನೆಕಾ ಡೋಸ್​ಗಳಿಲ್ಲದೆ 80 ಮಿಲಿಯನ್ ವ್ಯಾಕ್ಸಿನ್ ಪೂರೈಸಲು ಬೈಡನ್ ಆಡಳಿತ ಮುಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.