ಸಾವೊಪಾಲೊ: ಬ್ರೆಜಿಲ್‌ನ ಸಾವೊ ಪಾಲೊ ರಾಜ್ಯದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ಜೊವೊ ಡೋರಿಯಾ ವರದಿ ಮಾಡಿದ್ದಾರೆ.
ಭಾರಿ ಮಳೆಯಿಂದ ಉಂಟಾದ ಹಾನಿಯಿಂದಾಗಿ ನಾನು ಬಹಳ ದುಃಖತಪ್ತನಾಗಿದ್ದೇನೆ. ಈ ಮಳೆಯಿಂದಾಗಿ ಸುಮಾರು 18 ಜನರು ಸಾವನ್ನಪ್ಪಿದ್ದಾರೆ. ನಾವು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದೇವೆ. ಸಂತ್ರಸ್ತರಿಗೆ ಸಹಾಯ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಡೋರಿಯಾ ಹೇಳಿದರು.
ಓದಿ: ಯೋಗಿ ಆದಿತ್ಯನಾಥ್ ನಿಂದಿಸಿದ, ನಕಲಿ ಸಹಿ ಕರಪತ್ರ ಹಂಚಿದ ಆರೋಪ: ಪತ್ರಕರ್ತನ ಬಂಧನ
ಈ ವಾರಾಂತ್ಯದಲ್ಲಿ ಚಂಡಮಾರುತದಿಂದ ಸಾವನ್ನಪ್ಪಿದ 18 ಜನರಲ್ಲಿ ಏಳು ಮಕ್ಕಳು ಸೇರಿದ್ದಾರೆ. ಸುಮಾರು 500 ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆ ಹೇಳಿದೆ.
ಸಾವೊಪಾಲೊದ ಮಹಾನಗರ ಪ್ರದೇಶದಲ್ಲಿ ಫ್ರಾನ್ಸಿಸ್ಕೊ ಮೊರಾಟೊ, ಫ್ರಾಂಕೊ ಡ ರೊಚಾ, ವರ್ಜಿಯಾ ಪಾಲಿಸ್ಟಾ, ಅರುಜಾ ಮತ್ತು ಎಂಬು ದಾಸ್ ಆರ್ಟೆಸ್ ಮುನ್ಸಿಪಾಲಿಟಿಗಳಲ್ಲಿ ಸಾವುಗಳು ದಾಖಲಾಗಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ