ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ವಿಫಲ ನಾಯಕ ಎಂದು ಪ್ರಮುಖ ಹಾಲಿವುಡ್ ನಟ, ಕ್ಯಾಲಿಫೋರ್ನಿಯಾ ಮಾಜಿ ಗವರ್ನರ್ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಗುಂಡಿನ ದಾಳಿಯಂತೆ ಟ್ರಂಪ್ ಮೇಲೆ ವಾಗ್ದಾಳಿ ನಡೆಸಿದರು.
-
My message to my fellow Americans and friends around the world following this week's attack on the Capitol. pic.twitter.com/blOy35LWJ5
— Arnold (@Schwarzenegger) January 10, 2021 " class="align-text-top noRightClick twitterSection" data="
">My message to my fellow Americans and friends around the world following this week's attack on the Capitol. pic.twitter.com/blOy35LWJ5
— Arnold (@Schwarzenegger) January 10, 2021My message to my fellow Americans and friends around the world following this week's attack on the Capitol. pic.twitter.com/blOy35LWJ5
— Arnold (@Schwarzenegger) January 10, 2021
ಚರಿತ್ರೆಯಲ್ಲೇ ಆತ ಕೆಟ್ಟ ಅಧ್ಯಕ್ಷನಾಗಿ ಉಳಿಯಲಿದ್ದಾರೆ. ಅಮೆರಿಕ ಕ್ಯಾಪಿಟಲ್ ಭವನದ ಮುಂದೆ ನಡೆಸಿದ ಪ್ರತಿಭಟನಾಕಾರರನ್ನು ನಾಜಿಗಳಿಗೆ ಅರ್ನಾಲ್ಡ್ ಹೊಲಿಸಿದ್ದಾರೆ.
ಕಳೆದ ವಾರ ಅಮೆರಿಕ ಕ್ಯಾಪಿಟಲ್ ಭವನದ ಮೇಲೆ ನಡೆದ ದಾಳಿ ಬಗ್ಗೆ ವಿಡಿಯೋ ಟ್ವೀಟ್ ಮಾಡಿದ ಅರ್ನಾಲ್ಡ್, ಅಮೆರಿಕದಲ್ಲಿ ನಡೆದ ಇತ್ತಿಚೀನ ಘಟನೆ ಬಗ್ಗೆ ಕೆಲ ವಿಷಯಗಳನ್ನು ನಿಮ್ಮೊಂದಿಗೆ ಹಂಚಲು ಇಷ್ಟಪಡುತ್ತೇನೆ. ನಾನು ಆಸ್ಟ್ರೀಯಾದಲ್ಲಿ ಹುಟ್ಟಿ ಬೆಳೆದಿದ್ದೇನೆ. 1938ರಲ್ಲಿ ನಡೆದ ‘ಕ್ರಿಸ್ಟಲ್ಲಾನಾಚ್ ಅಥವಾ ನೈಟ್ ಆಫ್ ಬ್ರೋಕನ್ ಗ್ಲಾಸ್’ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಜರ್ಮಿನಿಗೆ ಸೇರಿದ ನಾಜಿಗಳು ಆಸ್ಟ್ರೀಯಾದ ಯಾಧುಗಳ ಮನೆಯ ಮೇಲೆ ದಾಲಿ ಮಾಡಿ ವಿಧ್ವಂಸ ಕೃತ್ಯಗಳು ಸೃಷ್ಟಿಸಿದರು ಎಂದರು.
ಈ ಸಂದರ್ಭದಲ್ಲಿ ಟ್ರಂಪ್ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅರ್ನಾಲ್ಡ್, ಟ್ರಂಪ್ ಒಬ್ಬ ವಿಫಲ ನಾಯಕ. ಅವರು ಇತಿಹಾಸದಲ್ಲಿ ಕೆಟ್ಟ ಅಧ್ಯಕ್ಷರಾಗಿ ಉಳಿಯಲಿದ್ದಾರೆ. ಅಮೆರಿಕದ ಸಂವಿಧಾನವನ್ನು ಪುನಃ ಬರೆಯಲು ಬಯಸುವವರು ಎಂದಿಗೂ ಗೆಲ್ಲುವುದಿಲ್ಲ. ಭವಿಷ್ಯದ ಅಧ್ಯಕ್ಷ ಜೋ ಬೈಡನ್ಗೆ ಒಗ್ಗೂಡಿ ಅದರ ಸಂಪೂರ್ಣ ಬೆಂಬಲವನ್ನು ನೀಡುವಂತೆ ಅವರು ಯುನೈಟೆಡ್ ಸ್ಟೇಟ್ಸ್ಗೆ ಕರೆ ನೀಡಿದರು.
ಆಸ್ಟ್ರಿಯಾದಿಂದ ಅರ್ನಾಲ್ಡ್ ಕುಟುಂಬ ಅಮೆರಿಕಕ್ಕೆ ವಲಸೆ ಬಂದಿತು. ಟರ್ಮಿನೇಟರ್ ನಂತಹ ಚಿತ್ರಗಳಿಂದ ಅವರು ಹಾಲಿವುಡ್ನಲ್ಲಿ ಹೆಚ್ಚು ಹೆಸರುವಾಸಿಯಾದರು. 2003 ರಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್ ಆಗಿ ಆಯ್ಕೆಯಾದರು. ಅರ್ನಾಲ್ಡ್ ಸಹ ರಿಪಬ್ಲಿಕನ್ ಪಕ್ಷದವರು. ಟ್ರಂಪ್ನ್ನು ಅರ್ನಾಲ್ಡ್ ಟೀಕಿಸುವುದು ಇದೇ ಮೊದಲಲ್ಲ. ಈ ಹಿಂದೆ ಹಲವಾರು ಬಾರಿ ಟ್ರಂಪ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕದಲ್ಲಿನ ಫ್ರೌಡ್ ಬಾಯ್ಸ್ ಕ್ಯಾಪಿಟಲ್ ಭವನದ ಮೇಲೆ ದಾಳಿ ಮಾಡಿದ ಟ್ರಂಪ್ ಬೆಂಬಲಿಗರ ಗುಂಪು ಸಹ ನಾಜಿಗಳಂತೆ. ಕಳೆದ ಬುಧವಾರ ನಡೆದ ಘಟನೆ ಅಮೆರಿಕ ‘ಡೇ ಆಫ್ ಬ್ರೋಕನ್ ಗ್ಲಾಸ್’. ಇಲ್ಲಿ ಚೂರಾಗಿರುವ ಗ್ಲಾಸ್ಗಳು ಕ್ಯಾಪಿಟಲ್ ಭವನದ ಕಿಟಕಿಗಳದ್ದು. ಆದರೆ, ಇಲ್ಲಿ ಬರೀ ಕಿಟಕಿ ಗ್ಲಾಸ್ಗಳು ಪುಡಿಯಾಗಿಲ್ಲ ಬದಲಾಗಿ ಕಾಂಗ್ರೆಸ್ ಶಾಸಕರ ವಿಚಾರಗಳೂ ಚೂರುಚೂರಾದವು. ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ನೀತಿಗಳನ್ನು ತುಳಿದಿದ್ದಾರೆ ಎಂದು ಅರ್ನಾಲ್ಡ್ ಆಕ್ರೋಶ ವ್ಯಕ್ತಪಡಿಸಿದರು.